ನಕಲಿ ಮೆಡಿಸಿನ್ ಪತ್ತೆ ಕೇಸ್ – SITಯಿಂದ ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ದಾಳಿ

ಬೆಂಗಳೂರು: ನಕಲಿ ಮೆಡಿಸಿನ್ ಪತ್ತೆ ಕೇಸ್‌ಗೆ ಸಂಬಂಧಿಸಿದಂತೆ ಎಸ್‌ಐಟಿ (SIT) ಇದೀಗ ಕರ್ನಾಟಕ (Karnataka) ಸೇರಿ 6 ರಾಜ್ಯಗಳಲ್ಲಿ ದಾಳಿ ನಡೆಸಿದೆ. ಎಸ್‌ಐಟಿ ಹಾಗೂ ಡ್ರಗ್ಸ್ ಕಂಟ್ರೋಲ್ ಡಿಪಾರ್ಟ್ಮೆಂಟ್ ಜಂಟಿ ಕಾರ್ಯಾಚರಣೆ ನಡೆಸಿದ್ದು, ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಲ್ಲಿಯೂ ದಾಳಿ ನಡೆದಿದ್ದಾರೆ. ಚಾಮರಾಜಪೇಟೆ ಮತ್ತಿತರ ಭಾಗದಲ್ಲಿಯೂ ಕೂಡ ದಾಳಿ ನಡೆಸಿ, ಎಸ್‌ಐಟಿ ಕಾರ್ಯಾಚರಣೆ ನಡೆಸಿದೆ.  ಇನ್ನೂ ಹರಿಯಾಣ, ಹಿಮಾಚಲ ಪ್ರದೇಶ, ಬಾಂಬೆ, ಕರ್ನಾಟಕ, ತೆಲಂಗಾಣ, ತಮಿಳುನಾಡಿನ ಚೆನ್ನೈ ರಾಜ್ಯಗಳಲ್ಲಿಯೂ ದಾಳಿ ನಡೆಸಿದೆ. ಈ ವೇಳೆ ನಕಲಿ ಡ್ರಗ್ಸ್ ತಯಾರಿಕೆ […]

ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸೇವೆ ಅಸ್ತವ್ಯಸ್ತ

ನವದೆಹಲಿ: ವಾರದಲ್ಲಿ ಐದು ದಿನಗಳ ಕೆಲಸದ ನಿಯಮ ಜಾರಿಗೊಳಿಸುವುದು ಸೇರಿದಂತೆ ವೇತನ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಶುಕ್ರವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ಹಿನ್ನೆಲೆಯಲ್ಲಿ ದೇಶದಾದ್ಯಂತ, ವಿಶೇಷವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ನೌಕರರು ಹಾಗೂ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಹಲವು ಬ್ಯಾಂಕ್ ಶಾಖೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಕೆಲವು […]

ನ್ಯೂಸ್‍ವೀಕ್‍ನ 2026ರ ಶ್ರೇಯಾಂಕದಲ್ಲಿ ವಿಶ್ವದ ಅಗ್ರ ‘ಹಸಿರು ಆಸ್ಪತ್ರೆ’ಗಳ ಪಟ್ಟಿಯಲ್ಲಿ ಸಿಎಸ್‍ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ

ಉಡುಪಿ: ಉಡುಪಿಯ ಸಿಎಸ್‍ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಪರಿಸರ ಸುಸ್ಥಿರತೆಯಲ್ಲಿ ವಿಶ್ವದ ಅಗ್ರ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಜಾಗತಿಕ ಸಂಶೋಧನೆ ಮತ್ತು ದತ್ತಾಂಶ ಸಂಸ್ಥೆಯಾದ ಸ್ಟಾಟಿಸ್ಟಾ ಸಹಯೋಗದೊಂದಿಗೆ ನ್ಯೂಸ್‍ವೀಕ್ ಪ್ರಕಟಿಸಿರುವ ‘ವಲ್ಡ್ರ್ಸ್ ಗ್ರೀನೆಸ್ಟ್ ಹಾಸ್ಪಿಟಲ್ಸ್ 2026’ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಪತ್ರೆಯು ‘4-ಎಲೆಗಳ’ ರೇಟಿಂಗ್ ಗಳಿಸಿದೆ. 36 ದೇಶಗಳ 4000ಕ್ಕೂ ಅಧಿಕ ಆಸ್ಪತ್ರೆಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಆಯ್ಕೆ ಮಾಡಲಾದ ವಿಶ್ವದಾದ್ಯಂತ 250 ಆರೋಗ್ಯ ಸಂಸ್ಥೆಗಳನ್ನು ಈ ಶ್ರೇಯಾಂಕ ಒಳಗೊಂಡಿದೆ. ಏಷ್ಯಾ-ಪ್ಯಾಸಿಫಿಕ್ ಪ್ರದೇಶದ ಕೇವಲ 46 […]

ಹೌತಿಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿ – MBS ಕರೆಯನ್ನು 2 ಬಾರಿ ತಿರಸ್ಕರಿಸಿದ ಟ್ರಂಪ್‌

ವಾಷಿಂಗ್ಟನ್: ಯೆಮೆನ್‌ನ ಹೌತಿ ಬಂಡುಕೋರರ(Houthi Forces) ವಿರುದ್ಧ ತಕ್ಷಣವೇ ವೈಮಾನಿಕ ದಾಳಿ ನಡೆಸುವಂತೆ ಸೌದಿ ಅರೇಬಿಯಾದ(Saudi Arabia) ರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಮಾಡಿದ್ದ ಮನವಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎರಡು ಬಾರಿ ತಿರಸ್ಕರಿಸಿದ್ದಾರೆ. ಯೆಮೆನ್‌ನ(Yemen) ಆಯಕಟ್ಟಿನ ಕರಾವಳಿ ನಗರವಾದ ಮೋಖಾವನ್ನು ಹೌತಿ ಪಡೆಗಳು ವಶಪಡಿಸಿಕೊಂಡು ಸೌದಿ ಬೆಂಬಲಿತ ಯೆಮೆನ್ ಪಡೆಗಳು ಹಿಮ್ಮೆಟ್ಟುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ಎಂ‍ಬಿಎಸ್ ಟ್ರಂಪ್ ಅವರಿಗೆ ತುರ್ತು ಕರೆ ಮಾಡಿದ್ದರು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ (Axios) […]

ಪಿಎಂ ಕಿಸಾನ್ ಯೋಜನೆ: ಇ-ಕೆವೈಸಿ ಮಾಡದಿದ್ದರೆ ಹಣ ರದ್ದು? ಮೊಬೈಲ್ ನಲ್ಲೇ ಮಾಡುವುದು ಹೇಗೆ?

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ಅರ್ಹ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂದಿನ ಕಂತಿನ ಹಣ ಪಾವತಿಗೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ರೈತರು ಕೂಡಲೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಸೂಚಿಸಿದೆ. ಪಿಎಂ ಕಿಸಾನ್‌ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು ₹6,000 ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಈವರೆಗೆ 23 ಆರ್ಥಿಕ ಕಂತುಗಳ ಹಣವನ್ನು ಪಾವತಿಸಲಾಗಿದೆ. ಇ-ಕೆವೈಸಿ ಮಾಡುವುದು […]