ಭಾರತಕ್ಕೆ ಒಂದು ರೆಸಿಪಿ, ವಿದೇಶಕ್ಕೆ ಮತ್ತೊಂದು: ಜನಪ್ರಿಯ ಕಂಪೆನಿಗಳ ಆಹಾರ ಉತ್ಪನ್ನಗಳನ್ನು ತಿನ್ನುವ ಮೊದಲು ಎಚ್ಚರ, ಭಾರತದ ಜನರಿಗೆ ಕಳಪೆ ಗುಣಮಟ್ಟದ ಆಹಾರ ಏಕೆ?

ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಚಿಪ್ಸ್, ಕೂಲ್‌ಡ್ರಿಂಕ್ಸ್ ಸೇರಿದಂತೆ ಪ್ಯಾಕೆಟ್ ಆಹಾರಗಳ ಮೇಲೆ ಗ್ರಾಹಕರಿಗೆ ಎಚ್ಚರಿಕೆ ನೀಡಲು ಮುಂಭಾಗದಲ್ಲಿ ಕೆಂಪು ಬಣ್ಣದ ಲೇಬಲ್ ಅಳವಡಿಸುವ ಪ್ರಸ್ತಾವದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಿಂದೆ ಸರಿದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಹಾರ ಉದ್ಯಮದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಪ್ಯಾಕೆಟ್‌ಗಳ ಮುಂಭಾಗದಲ್ಲಿ ಕೆಂಪು-ಹಸಿರು ಬಣ್ಣದ ಪೌಷ್ಟಿಕಾಂಶ ಎಚ್ಚರಿಕೆ ಲೇಬಲ್ ಅಳವಡಿಸುವುದಕ್ಕೆ ಆಹಾರ ಕಂಪನಿಗಳು ವಿರೋಧ […]
ಮಂಗಳೂರಿನ ಹೊಟೇಲಿನಲ್ಲಿ ಜಿರಳೆ ಪತ್ತೆ: ಪರಿಶೀಲನೆ ವೇಳೆ ಅಶುಚಿ ಕಂಡು ಅಧಿಕಾರಿಗಳು ಗರಂ ಮಾಲೀಕರಿಗೆ ನೋಟಿಸ್

ಚಿತ್ರ: ಸಾಂಕೇತಿಕ ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂಬ ಗ್ರಾಹಕರ ದೂರಿನ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಉಳ್ಳಾಲದ ತೊಕ್ಕೊಟ್ಟಿನಲ್ಲಿರುವ ವೃಂದಾವನ್ ಹೋಟೆಲ್ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಅಧಿಕಾರಿಗಳು ಹೋಟೆಲ್‌ನ ಶೆಟರ್‌ಗಳನ್ನು ತೆರೆದು ಅಡುಗೆಮನೆ ಸೇರಿದಂತೆ ವಿವಿಧೆಡೆ ಕೂಲಂಕಷ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಆಹಾರ ಪದಾರ್ಥಗಳ ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿ ಇಲ್ಲದಿರುವುದು ಹಾಗೂ ಅಡುಗೆಮನೆಯಾದ್ಯಂತ ಪದಾರ್ಥಗಳನ್ನು ಅಡ್ಡಾದಿಡ್ಡಿಯಾಗಿ ರಾಶಿ ಹಾಕಿರುವುದು […]