ಹೆಬ್ರಿ: ನಾಗರಪಂಚಮಿ ಹಬ್ಬಕ್ಕೆ ಚುರುಕುಗೊಂಡ ಮಳೆ- ಮಣ್ಣು ಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಉಡುಪಿ: ನಾಗರಪಂಚಮಿ ಹಬ್ಬದ ಆಸುಪಾಸಿನಲ್ಲಿ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಕೊಂಚ ನೆಮ್ಮದಿ ತಂದಿದೆ. ಜಿಲ್ಲೆಯ ಹಲವೆಡೆ ಮಳೆಯ ಪರಿಣಾಮ ಸಣ್ಣಪುಟ್ಟ ಹಾನಿ ಸಂಭವಿಸಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಬ್ರಹ್ಮಸ್ಥಾನದ ಬಳಿಯ ಚಾಂತಾರು ಎಂಬಲ್ಲಿ ವಾಸ್ತವ್ಯದ ಮನೆಯ ಹಿಂಭಾಗದಲ್ಲಿ ಮಣ್ಣು ಕುಸಿತ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶ ಹಾಗೂ ಮಣ್ಣು ಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳ ನಿವಾಸಿಗಳು […]
ಸೌದಿ ಅರೇಬಿಯಾದಲ್ಲಿ ಭಿಕ್ಷೆ ಬೇಡದಿರಿ, ಗಡೀಪಾರು ಮಾಡಬಹುದು: ಹಜ್ ಯಾತ್ರಿಕರಿಗೆ ಪಾಕಿಸ್ತಾನ ಖಡಕ್ ಎಚ್ಚರಿಕೆ

ಪಾಕಿಸ್ತಾನಿ ಪ್ರಜೆಗಳು ಸೌದಿ ಕಾನೂನುಗಳು ಮತ್ತು ಅವರ ವೀಸಾಗಳಿಗೆ ಲಗತ್ತಿಸಲಾದ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ಒತ್ತಾಯಿಸಿದೆ ಇಸ್ಲಾಮಾಬಾದ್: ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಪಾಕಿಸ್ತಾನ ಕಟ್ಟುನಿಟ್ಟಿನ ಸಲಹೆ ನೀಡಿದೆ. ಭಿಕ್ಷಾಟನೆ, ಅನಧಿಕೃತ ಹಣ ಸಂಗ್ರಹಣೆ ಮತ್ತು ಸೌದಿ ವೀಸಾ ನಿಯಮಗಳ ಉಲ್ಲಂಘನೆಯ ವಿರುದ್ಧ ಪಾಕ್ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಸೌದಿ ಅರೇಬಿಯಾದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯು, ಉಮ್ರಾ ಯಾತ್ರಿಕರು ಮತ್ತು ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಸಂದೇಶವೊಂದನ್ನು ಕಳುಹಿಸಿದೆ. ಪಾಕಿಸ್ತಾನಿ ಪ್ರಜೆಗಳು ಸೌದಿ ಕಾನೂನುಗಳು ಮತ್ತು […]
ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ, 196 ಕ್ಕೂ ಹೆಚ್ಚು ಮಂದಿ ಸಾವು! ಹಲವಾರು ಮಂದಿ ನಾಪತ್ತೆ!

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ಹಾಗೂ ನೈಸರ್ಗಿಕ ವಿಕೋಪಗಳ ಅಬ್ಬರ ಮುಂದುವರಿದಿದ್ದು, ದಿನದಿಂದ ದಿನಕ್ಕೆ ಹಾನಿಯ ಪ್ರಮಾಣ ಹೆಚ್ಚುತ್ತಿದೆ. ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳು ಹಾಗೂ ರಸ್ತೆ ಅಪಘಾತಗಳಿಂದ ಈವರೆಗೆ 196 ಮಂದಿ ಮೃತಪಟ್ಟಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೋಮವಾರ ಸಂಜೆ 6 ಗಂಟೆಯ ವರದಿ ಪ್ರಕಾರ, ಮೃತಪಟ್ಟವರ ಪೈಕಿ 80 ಮಂದಿ ನೈಸರ್ಗಿಕ ವಿಕೋಪಗಳಲ್ಲಿ ಹಾಗೂ 116 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. 299 ಮಂದಿ ಗಾಯಗೊಂಡಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆಯೂ ಶಿಮ್ಲಾ […]
900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದ ಸಿಇಒ ಈಗ ಕೆಲಸದಿಂದ ವಜಾ!

ನ್ಯೂಯಾರ್ಕ್: ಕೋವಿಡ್ ಪೀಕ್ ಸಮಯದಲ್ಲಿ ಕೇವಲ ಮೂರು ನಿಮಿಷಗಳ Zoom ಕಾಲ್‌ನಲ್ಲಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಭಾರತ ಮೂಲದ ಉದ್ಯಮಿ ವಿಶಾಲ್ ಗರ್ಗ್ ಅವರಿಗೆ ಇದೀಗ ಅವರದ್ದೇ ಕಂಪನಿ ಬಿಗ್ ಶಾಕ್ ನೀಡಿದೆ. ಅಮೆರಿಕದ ‘ಬೆಟರ್ ಹೋಮ್ & ಫೈನಾನ್ಸ್’ ಕಂಪನಿಯ ಸಿಇಒ ಆಗಿದ್ದ ವಿಶಾಲ್ ಗರ್ಗ್ ಅವರನ್ನು ಕಂಪನಿಯ ಆಡಳಿತ ಮಂಡಳಿಯೇ ಹುದ್ದೆಯಿಂದ ವಜಾಗೊಳಿಸಿದೆ. ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸ್ವಭಾವ ಹಾಗೂ ನಂಬಿಕಾರ್ಹತೆಯ ಬಗ್ಗೆ […]
ಹೋಟೆಲ್ ಆಹಾರ ಕಳಪೆಯಾದ್ರೆ, ಹೋಟೆಲಲ್ಲೇ ದೂರು ನೀಡಲು ಕ್ಯೂಆರ್ ಕೋಡ್!

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ಆರೋಗ್ಯ ಇಲಾಖೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ಬೆನ್ನಲ್ಲೇ, ಹೋಟೆಲ್‌ಗಳಲ್ಲಿ ಸಿಸಿಟಿವಿ ಹಾಗೂ ಗ್ರಾಹಕರು ದೂರು ನೀಡಲು ಕ್ಯೂಆರ್ ಕೋಡ್ ಅಳವಡಿಸುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಆದರೆ, ಈ ಆದೇಶವನ್ನು ಪುನರ್ ಪರಿಶೀಲಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಆಗ್ರಹಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತಪಾಸಣೆ ಮುಂದುವರಿಸಿದೆ. ನಿನ್ನೆಯವರೆಗೆ 60ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳು, […]