ಅಂಪಾರು ಬಾಳೆ ಬೇರು ಮನೆ ಗುಲಾಬಿ ಎಸ್.ಶೆಟ್ಟಿ ನಿಧನ

ಸಾಹೇಬ್ರ ಕಟ್ಟೆ:ಅಂಪಾರು ನೇಸರಮಕ್ಕಿ ಮನೆ ದಿ.ಹೆರಿಯಣ್ಣ ಶೆಟ್ಟಿಯವರ ಪುತ್ರಿ ಮತ್ತು ಶಿರಿಯಾರ ಪಡು ಮುಂಡು ನಿವೃತ್ತ ಶಿಕ್ಷಕ ದಿ.ಶೇಖರ ಶೆಟ್ಟಿಯವರ ಪತ್ನಿ ಅಂಪಾರು ಬಾಳೆ ಬೇರು ಮನೆ ಗುಲಾಬಿ ಶೆಟ್ಟಿ (71) ಇವರು ಬೆಂಗಳೂರಿನ ಪುತ್ರಿ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 17ರಂದು ನಿಧನರಾದರು.ಇವರು ಇಬ್ಬರು ಪುತ್ರರು ಓವ೯ ಪುತ್ರಿಯನ್ನು ಅಗಲಿದ್ದಾರೆ.ಇವರ ಹಿರಿಯ ಪುತ್ರ ಭರತ್ ರಾಜ್ ಶೆಟ್ಟಿಯವರು ಅಮೇರಿಕಾದಲ್ಲಿ ನೆಲೆಸಿರುವ ಕಾರಣ ಇವರ ಆಗಮನದ ಅನಂತರದಲ್ಲಿ ಬುಧವಾರದಂದು ಬೆಳಿಗ್ಗೆ ಸಾಹೇಬ್ರ ಕಟ್ಟೆ ಸ್ವಗೃಹದಲ್ಲಿ ಅಂತಿಮ […]

ದರ್ಶನ್‌ಗೆ ಮತ್ತೆ ಕೋರ್ಟ್‌ನಲ್ಲಿ ಹಿನ್ನಡೆ: ಖುದ್ದು ಹಾಜರಾತಿ ಅರ್ಜಿ ವಜಾ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಅವಕಾಶ ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಅವರು ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿ, ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕವೇ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರೆ ಆಡಿಯೋ ಹಾಗೂ ವಿಡಿಯೋ ಗುಣಮಟ್ಟದ ಸಮಸ್ಯೆ ಉಂಟಾಗುವ ಸಾಧ್ಯತೆ […]

ಉಡುಪಿ: ಖ್ಯಾತ ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ ನಿಧನ

ಉಡುಪಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ (ಎಳ್ಳಾರೆ) ಅವರು ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.ಪರ್ಕಳ, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಶುಭಕಾರ್ಯಗಳು, ದೇವಸ್ಥಾನ ಹಾಗೂ ದೈವಸ್ಥಾನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಗಸ್ವರ ವಾದನದ ಮೂಲಕ ಸೇವೆ ಸಲ್ಲಿಸುತ್ತಿದ್ದ ಅವರು, ಉತ್ತಮ ಸ್ಯಾಕ್ಸೊಫೋನ್ ವಾದಕರಾಗಿಯೂ ಗುರುತಿಸಿಕೊಂಡಿದ್ದರು.ಸಂಗೀತ ಕ್ಷೇತ್ರದಲ್ಲಿ ಅಪಾರ ಶಿಷ್ಯವೃಂದವನ್ನು ಹೊಂದಿದ್ದ ಸುಂದರ ಶೇರಿಗಾರ್ ಅವರು ತಮ್ಮ ಕಲಾ ಸೇವೆಯ ಮೂಲಕ ಜನಮನ್ನಣೆ […]

ಬಿಜೆಪಿಯಲ್ಲಿ ದೊಡ್ಡ ಬದಲಾವಣೆ, ಕೇಂದ್ರದ ಹೊಸ ಟೀಂ ನ ಹಲವರಿಗೆ ಮಹತ್ವದ ಜವಾಬ್ದಾರಿ!

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ ಅಧಿಕಾರ ವಹಿಸಿಕೊಂಡು ಸುಮಾರು ಎಂಟು ತಿಂಗಳು ಕಳೆದಿದ್ದು, ಇದೀಗ ತಮ್ಮ ಹೊಸ ತಂಡವನ್ನು ರಚಿಸಲು ಸಜ್ಜಾಗಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಅನುರಾಗ್ ಠಾಕೂರ್ ಅವರಿಗೆ ಪಕ್ಷದ ರಾಷ್ಟ್ರೀಯ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನಿತಿನ್ ತಂಡಕ್ಕೆ ಸ್ಮೃತಿ, ಅನುರಾಗ್? ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ […]

110 ದೇಶಗಳ ಐಫೋನ್ ಬಳಕೆದಾರರಿಗೆ ಆಪಲ್‌ನಿಂದ ಥ್ರೆಟ್ ಅಲರ್ಟ್: ಸ್ಪೈವೇರ್ ದಾಳಿ ಬಗ್ಗೆ ಎಚ್ಚರಿಕೆ ಸಂದೇಶ ಬಂದಾಗ ಏನು ಮಾಡಬೇಕು?

ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿರುವ ಮರ್ಸಿನರಿ ಸ್ಪೈವೇರ್ ದಾಳಿಯ ಸಾಧ್ಯತೆ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ 110 ದೇಶಗಳ ಐಫೋನ್ ಬಳಕೆದಾರರಿಗೆ ಭದ್ರತಾ ಎಚ್ಚರಿಕೆ (Threat Notification) ರವಾನಿಸಿದೆ. ಪರದೆ ಮೇಲೆ ಕಾಣಿಸಿಕೊಳ್ಳುವ ಈ ಥ್ರೆಟ್ ನೋಟಿಫಿಕೇಶನ್‌ನ ಅರ್ಥವೇನು, ಯಾರಿಗೆ ಇಂತಹ ಎಚ್ಚರಿಕೆ ಬರುತ್ತದೆ ಹಾಗೂ ನೋಟಿಫಿಕೇಶನ್ ಬಂದರೆ ಬಳಕೆದಾರರು ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ. ಥ್ರೆಟ್ ನೋಟಿಫಿಕೇಶನ್ ಎಂದರೇನು? ಆಪಲ್‌ನ ಥ್ರೆಟ್ ನೋಟಿಫಿಕೇಶನ್ ಸಾಮಾನ್ಯ ವೈರಸ್ ಅಥವಾ ಸೈಬರ್ ಅಪರಾಧದ ಎಚ್ಚರಿಕೆಯಲ್ಲ. ನಿರ್ದಿಷ್ಟ […]