ಗ್ರಾಮ ಸಹಾಯಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮ ಹಾಗೂ 76 ಬಡಗಬೆಟ್ಟು ಗ್ರಾಮಗಳಲ್ಲಿ ಖಾಲಿ ಇರುವ ಗ್ರಾಮ ಸಹಾಯಕರ ಹುದ್ದೆಗೆ ಷರತ್ತಿಗೊಳಪಟ್ಟು ಅರ್ಹ 25 ರಿಂದ 45 ವರ್ಷದೊಳಗಿನಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆಯ ದಿನ. ನೇಮಕಾತಿಯನ್ನು ಸರ್ಕಾರ ನೀಡುವ ಮಾರ್ಗಸೂಚಿಯನ್ವಯ ಮಾಡಲಾಗುವುದು ಎಂದು ಉಡುಪಿ ತಾಲೂಕು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.
ಕ್ರೈಸ್ಟ್‍ಕಿಂಗ್: ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಾರ್ಕಳ ಹಾಗೂ ಸರ್ಕಾರಿ ಪ್ರೌಢಶಾಲೆ ಶಿವಪುರ ಇವರ ವತಿಯಂದ ನಡೆದ ಕಾರ್ಕಳ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್‍ಕಿಂಗ್ ಶಿಕ್ಷಣ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗದ ಏಳನೇ ತರಗತಿಯ ಸಮೃದ್ದ್ ಭಂಡಾರಿ, ಪ್ರೌಢಶಾಲಾ ವಿಭಾಗದ ಒಂಬತ್ತನೇ ತರಗತಿಯ ಮೌಲ್ಯ ಹಾಗೂ ಹತ್ತನೇ ತರಗತಿಯ ವರುಣ್ ಕಾಮತ್ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.
ಕಾಪು: ಹಠಾತ್ ರಸ್ತೆಗೆ ಓಡಿಬಂದ ಶ್ವಾನ- ಸ್ಕಿಡ್ ಆಗಿ ಬಿದ್ದ ಸ್ಕೂಟರ್ ಸವಾರ

ಉಡುಪಿ: ನಾಯಿಯೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದ ಪರಿಣಾಮ ಸ್ಕೂಟರ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡ ಘಟನೆ ಕಾಪು ಫ್ಲೈಓವರ್ ಕೆಳಗಿನ ಅಂಡರ್‌ಪಾಸ್ ಸಮೀಪ ಬುಧವಾರ ಸಂಜೆ ನಡೆದಿದೆ. ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ನಾಯಿಯೊಂದು ಹಠಾತ್ ರಸ್ತೆಗೆ ಓಡಿಬಂದಿದೆ. ಇದರಿಂದ ಸ್ಕೂಟರ್‌ನ ನಿಯಂತ್ರಣ ಕಳೆದುಕೊಂಡ ಸವಾರ ನಾಯಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, […]
ಡ್ರೋನ್ ಮೂಲಕ ಯಶಸ್ವಿಗೊಂಡ ಕಟೀಲು ದೇವಸ್ಥಾನದ ಗೋಪುರದ ಸ್ವಚ್ಛತೆ, ನೂತನ ತಂತ್ರಜ್ಞಾನದ ಅಳವಡಿಕೆಗೆ ಭಕ್ತರಿಂದ ಪ್ರಶಂಸೆಯ ಸುರಿಮಳೆ

ಮಂಗಳೂರು: ದೇವಸ್ಥಾನದ ಗೋಪುರವನ್ನು ಸ್ವಚ್ಛಗೊಳಿಸಲು ಸ್ಕ್ಯಾಫೋಲ್ಡಿಂಗ್, ಹಗ್ಗ ಹಾಗೂ ಮಾನವ ಶ್ರಮದ ಅವಲಂಬನೆ ಸಾಮಾನ್ಯ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊದಲ ಬಾರಿಗೆ ವಿಶೇಷ ಡ್ರೋನ್ ಬಳಸಿ ಗೋಪುರವನ್ನು ಸ್ವಚ್ಛಗೊಳಿಸುವ ವಿನೂತನ ಪ್ರಯೋಗ ಯಶಸ್ವಿಯಾಗಿದೆ. ಜುಲೈ ಕೊನೆಯ ವಾರದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಗೋಪುರದ ಮೇಲ್ಭಾಗದಲ್ಲಿ ಸಂಗ್ರಹವಾಗಿದ್ದ ಪಾಚಿ, ಧೂಳು ಹಾಗೂ ಕಲೆಗಳನ್ನು ಡ್ರೋನ್ ಮೂಲಕ ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ವಾರ್ಷಿಕ ನಿರ್ವಹಣೆಯ ಅಂಗವಾಗಿ ಕೈಗೊಂಡ ಈ ಕಾರ್ಯದ ವಿಡಿಯೊಗಳು ಸಾಮಾಜಿಕ […]
ವಿಮೆ ಇಲ್ಲದ ವಾಹನಗಳಿಗೆ ಇನ್ನು ಪೆಟ್ರೋಲ್ ಸಿಗಲ್ಲ? ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ ಮಹತ್ವದ ನಿರ್ದೇಶನವೇನು?

ನವದೆಹಲಿ: ದೇಶದಲ್ಲಿ ವಿಮೆ ಇಲ್ಲದೇ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಂತಹ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಪೂರೈಕೆಯನ್ನು ನಿರಾಕರಿಸುವ ಕುರಿತು ಪ್ರಾಯೋಗಿಕ ಯೋಜನೆ ರೂಪಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ, ಪೆಟ್ರೋಲ್ ಅಥವಾ ಡೀಸೆಲ್ ನೀಡುವ ಮೊದಲು ವಾಹನದ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ಪೈಲಟ್ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದೆ. […]