ನೂರಾರು ಪ್ರವಾಸಿಗರನ್ನು ಸೇರಿಸಿ ಕಬ್ಬಿನಾಲೆಯ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿ ಸಂಸ್ಥೆಯಿಂದ ಕಾರ್ಯಕ್ರಮ: ಸ್ಥಳೀಯರಿಂದ, ಪರಿಸರ ಪ್ರಿಯರಿಂದ ತೀವ್ರ ವಿರೋಧ! ಕಾರ್ಯಕ್ರಮ ನಡೆಸದಂತೆ ಸ್ಥಳೀಯರ ಎಚ್ಚರಿಕೆ!

ಕಾರ್ಕಳ/ಹೆಬ್ರಿ: ಹೆಬ್ರಿ ತಾಲೂಕಿನ ಕಬ್ಬಿನಾಲೆ ಪರಿಸರವು ಜೀವವೈವಿಧ್ಯ, ದಟ್ಟ ಅರಣ್ಯ ಹಾಗೂ ನೈಸರ್ಗಿಕ ಜಲಮೂಲಗಳಿಂದ ಸಮೃದ್ಧವಾಗಿರುವ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾಗಿರುವ ಈ ಪ್ರದೇಶದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಚಾರದಿಂದ ಅನಗತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಂಸ್ಥೆಯಿಂದ ಪರಿಸರದ ಸೂಕ್ಷ್ಮತೆ ಹಾಳು ಮಾಡುವ ಕಾರ್ಯಕ್ರಮ: ಈ ನಡುವೆ, ಆಗಸ್ಟ್‌ 1ರಂದು ಖಾಸಗಿ ಸಂಸ್ಥೆಯೊಂದು ರೈನಥಾನ್ ಎನ್ನುವ ಹೆಸರಿನಲ್ಲಿ ಕಬ್ಬಿನಾಲೆ ಪರಿಸರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ನೂರಾರು […]

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್‌ ಜೋಶಿ ನೇಮಕ

ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಉಂಟಾದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಧಾನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ, ರಾಷ್ಟ್ರಪತಿಗಳ ಕಚೇರಿ ಇಂದು ಸಂಜೆ ಪ್ರಕಟಣೆಯಲ್ಲಿ ಜೋಶಿ ಅವರ ನೇಮಕಾತಿಯನ್ನು ದೃಢಪಡಿಸಿದೆ. ಪ್ರಧಾನಿಗಳ ಶಿಫಾರಸಿನ ಮೇರೆಗೆ ಸಚಿವ ಪ್ರಲ್ಹಾದ್ ಜೋಷಿಯವರಿಗೆ ಶಿಕ್ಷಣ ಇಲಾಖೆಯ ಹೆಚ್ಚುವರಿ ಹೊಣೆ ನೀಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಸದ್ಯ ಆಹಾರ ಮತ್ತು ನಾಗರಿಕ ಪೂರೈಕೆ […]