ಉಪವಾಸ ಸತ್ಯಾಗ್ರಹ ಅಂತ್ಯ: ಸೋನಮ್ ವಾಂಗ್‌ಚುಕ್ ವಿರುದ್ಧ ಹೆಚ್ಚಾದ ಟೀಕೆ, ಪತ್ನಿ ಗೀತಾಂಜಲಿ ಗರಂ

ಉಪವಾಸದ ಅವಧಿಯಲ್ಲಿ ಒಟ್ಟು 11 ಕೆಜಿ ತೂಕವನ್ನು ಕಳೆದುಕೊಂಡಿರುವ ವಾಂಗ್‌ಚುಕ್ ಈಗ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಕ್ಕಾಗಿ ಏನನ್ನೂ ಯೋಚಿಸದೆ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡದಂತೆ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಗುರುವಾರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತಲೂ ಮಿಗಿಲಾದ ಉದ್ದೇಶಕ್ಕಾಗಿ 26 ದಿನಗಳ ಕಾಲ ನಡೆಸಿದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ವಿಷಯದಲ್ಲಿ ಅವರನ್ನು […]

ಬ್ಯಾಂಕ್ ಆಫ್ ಬರೋಡಾದಿಂದ ಡಿಜಿಟಲ್, ರಿಟೇಲ್ ಮತ್ತು ಎಂಎಸ್‌ಎಂಇ (MSME) ಉಪಕ್ರಮಗಳ ಸಮಗ್ರ ಶ್ರೇಣಿಯೊಂದಿಗೆ 119 ನೇ ಸಂಸ್ಥಾಪನಾ ದಿನಾಚರಣೆ

ಮಂಗಳೂರು, ಜುಲೈ 20, 2026: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ವಿಶ್ವಾಸ, ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯೆಡೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ ತನ್ನ 119 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ಬ್ಯಾಂಕಿನ 119 ನೇ ವರ್ಷದ ಥೀಮ್ ಆದ ‘ಲೀಡಿಂಗ್ ವಿತ್ ಟ್ರಸ್ಟ್’ (ವಿಶ್ವಾಸದೊಂದಿಗೆ ಮುನ್ನಡೆಯುವುದು), ಸಮಗ್ರತೆ, ನಾವೀನ್ಯತೆ ಮತ್ತು ಅಂತರ್ಗತತೆಯೊಂದಿಗೆ ಮುನ್ನಡೆಯುವ ಅದರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಪ್ರತಿಯೊಂದು ಗ್ರಾಹಕ ಸಂಬಂಧದ ತಳಹದಿ ಮತ್ತು ಅದರ ಭವಿಷ್ಯದ […]

ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ

ಮಂಗಳೂರು, ಜು.22: ಕೋಣಾಜೆಯ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ  ಓರಿಯೆಂಟೇಶನ್ ಕಾರ್ಯಕ್ರಮ   ಪೇಸ್ ನಾಲೆಡ್ಜ್ ಸಿಟಿಯ ಆಡಿಟೋರಿಯಂನಲ್ಲಿಬುಧವಾರ ನಡೆಯಿತು‌‌. ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಝ್ ಎಂ.ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜು ಜೀವನದಲ್ಲಿಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ. ಹಾಸಿಂಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ, […]

ಕಾರ್ಕಳ ಕ್ರೈಸ್ಟ್ ಕಿಂಗ್: ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿತ್ವ ವಿಕಸನ ತರಬೇತುದಾರಕೀರ್ತನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ಅವರು “ವಿದ್ಯಾರ್ಥಿಗಳು ಹಲವಾರು ಗುರಿಗಳನ್ನು ಇಟ್ಟುಕೊಂಡು ಪ್ರಯತ್ನಪಡುವುದಕ್ಕಿಂತಒಂದೇ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಏಕಾಗ್ರತೆ ಹಾಗೂ ಬದ್ಧತೆಯೊಂದಿಗೆ ಕಾರ್ಯಶೀಲರಾಗಬೇಕು. ನಮ್ಮಲ್ಲಿ ಅತ್ಯುತ್ತಮ ಕೌಶಲ್ಯಗಳಿದ್ದಾಗ ಅವಕಾಶಗಳುಹುಡುಕಿಕೊಂಡು ಬರುತ್ತವೆ. ಪ್ರಸ್ತುತ ಸಮಾಜದಲ್ಲಿ ಇರುವ ಅವಕಾಶಗಳಿಗೆ ತಕ್ಕಂತೆ ನಮ್ಮನ್ನು ನಾವು ರೂಪಿಸಿಕೊಳ್ಳಬೇಕು. ಸಾಧನೆಯ ದಾರಿಯಲ್ಲಿ ಸಾಗುವಾಗ ಎದುರಾಗುವ ಸೋಲುಗಳಿಗೆ ಅಳುಕದೆ ಮುಂದುವರಿಯಬೇಕು” […]