ಬರಲಿದೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೂ AI ತಂತ್ರಜ್ಞಾನ: ಕರ್ನಾಟಕ ಶಿಕ್ಷಣ ಇಲಾಖೆಯಿಂದ ಎಐ ಕ್ರಾಂತಿಗೆ ಯೋಜನೆ ರೆಡಿ!

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಯೋಜನೆ ಜಾರಿಯಾದರೆ, 8ನೇ ತರಗತಿಯಿಂದ 12ನೇ ತರಗತಿಯವರೆಗೆ ನಡೆಯುವ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ AI ತಂತ್ರಜ್ಞಾನವನ್ನು ಬಳಸುವ ಉದ್ದೇಶ ಹೊಂದಲಾಗಿದೆ. ಪ್ರಸ್ತುತ ಪರೀಕ್ಷೆಗಳ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಅಂಕಗಳ ದಾಖಲಾತಿ ಹಾಗೂ ಇತರ ಆಡಳಿತಾತ್ಮಕ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುವುದರಿಂದ, ಶಿಕ್ಷಕರ ಮೇಲಿನ ಕೆಲಸದ ಒತ್ತಡ […]
ವಯನಾಡಿನಲ್ಲಿ ಮತ್ತೆ ಭಾರೀ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ

ಕೇರಳದ Kerala ರಾಜ್ಯದ ವಯನಾಡು Wayanad ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಸುಮಾರು 20 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದು, 30 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಭೂಕುಸಿತವು ವಯನಾಡ್ ಸುರಂಗ ನಿರ್ಮಾಣ ಯೋಜನೆಯ ಮೀನಾಕ್ಷಿ ಸೇತುವೆ ಸಮೀಪ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಚೂರಲ್ಮಲದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ನೆನಪು ಇನ್ನೂ ಮಾಸದಿರುವಾಗಲೇ ಮತ್ತೊಮ್ಮೆ ಈ […]
ಚುಂಬನದ ಭಾಷೆ ಗೊತ್ತೇ? ಪ್ರತಿಯೊಂದು ಮುತ್ತೂ ಹೇಳುತ್ತದೆ ಒಂದು ಕಥೆ!

ಪ್ರತಿ ವರ್ಷ ಜುಲೈ 6ರಂದು ಅಂತರಾಷ್ಟ್ರೀಯ ಚುಂಬನ ದಿನ (International Kissing Day)ವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರೀತಿ, ಕಾಳಜಿ, ಆತ್ಮೀಯತೆ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ನೆನಪಿಸುತ್ತದೆ. ಚುಂಬನವು ಕೇವಲ ಪ್ರಣಯದ ಸಂಕೇತವಲ್ಲ; ಅದು ಸಂತೋಷ, ಗೌರವ, ಆಶೀರ್ವಾದ, ಸಾಂತ್ವನ ಮತ್ತು ವಾತ್ಸಲ್ಯದ ಅಭಿವ್ಯಕ್ತಿಯೂ ಆಗಿದೆ. ಚುಂಬನದ ಪ್ರಮುಖ ವಿಧಗಳು ಮತ್ತು ಅವುಗಳ ಅರ್ಥ 1. ಹಣೆಯ ಚುಂಬನ (Forehead Kiss)ಇದು ಪ್ರೀತಿ, ಕಾಳಜಿ, ರಕ್ಷಣೆ ಮತ್ತು ಗೌರವದ ಸಂಕೇತ. ತಾಯಿ-ತಂದೆ, ಅಜ್ಜ-ಅಜ್ಜಿ ಅಥವಾ ಆತ್ಮೀಯರು […]
‘ಕರಾವಳಿ’ ಸಿನಿಮಾ ವಿವಾದದ ಸುಳಿಯಲ್ಲಿ: ಸಂಭಾವನೆ ಬಾಕಿ ಇರಿಸಿದ್ದಕ್ಕೆ, ನಾಯಕ ಪ್ರಜ್ವಲ್ ದೇವರಾಜ್ ಮುನಿಸು? ತಡವಾಯ್ತು ಚಿತ್ರದ ರಿಲೀಸ್!

ಚಂದನವನದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಕರಾವಳಿ’ ಸಿನಿಮಾ ಇದೀಗ ವಿವಾದದ ಕಾರಣದಿಂದ ಸುದ್ದಿಯಲ್ಲಿದೆ. ಹಾಡುಗಳ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಹೊಸತನದ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಬಿಡುಗಡೆಗೂ ಮುನ್ನವೇ ಸಿನಿಮಾ ಹಲವು ಚರ್ಚೆಗಳಿಗೆ ಕಾರಣವಾಗಿದೆ. ವರದಿಗಳ ಪ್ರಕಾರ, ಚಿತ್ರದಲ್ಲಿ ನಟಿಸಿರುವ Prajwal Devaraj ಅವರಿಗೆ ಒಟ್ಟು ₹1.25 ಕೋಟಿ ಸಂಭಾವನೆ ನಿಗದಿಯಾಗಿದ್ದು, ಅದರಲ್ಲಿ ಇನ್ನೂ ₹25 ಲಕ್ಷ ಬಾಕಿಯಿದೆ ಎನ್ನಲಾಗಿದೆ. ಇದೇ ಕಾರಣದಿಂದ ಅವರು ಚಿತ್ರದ […]
ಇನ್ನಿಲ್ಲ ‘ತೂಗುಸೇತುವೆಗಳ ಸರದಾರ’ ಡಾ. ಗಿರೀಶ್ ಭಾರದ್ವಾಜ್; ಗ್ರಾಮೀಣ ಭಾರತದ ಕನಸುಗಾರನಿಗೆ ವಿದಾಯ

140ಕ್ಕೂ ಅಧಿಕ ತೂಗುಸೇತುವೆಗಳನ್ನು ನಿರ್ಮಿಸಿ ಸಾವಿರಾರು ಜನರ ಬದುಕಿಗೆ ಬೆಳಕಾದ ಪದ್ಮಶ್ರೀ ಪುರಸ್ಕೃತ ಇಂಜಿನಿಯರ್ ಡಾ. ಗಿರೀಶ್ ಭಾರದ್ವಾಜ್ ನಿಧನ ಸುಳ್ಯ: ದೇಶದ ದುರ್ಗಮ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ತೂಗುಸೇತುವೆಗಳ ಮೂಲಕ ಹೊಸ ಬದುಕಿನ ದಾರಿ ತೋರಿಸಿದ್ದ, ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ […]