ಮೂಕ ಜೀವಿಗಳಿಗಾಗಿ ಸದಾ ಮಿಡಿಯುವ ಮನಸ್ಸು, ಸೇವೆಯನ್ನೇ ಬದುಕಾಗಿಸಿಕೊಂಡ ಅಪರೂಪದ ಪಶುವೈದ್ಯ ಡಾ. ನಾಗರಾಜ ಮರವಂತೆ ಅವರ ಮಾದರಿ ಲೈಫು!

-ಉಡುಪಿ xpress special ಕೆಲವರು ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವಾಗಿ ನೋಡುವುದಿಲ್ಲ; ಅದನ್ನು ಸಮಾಜಸೇವೆಯ ಮಾರ್ಗವನ್ನಾಗಿ ರೂಪಿಸಿಕೊಳ್ಳುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಕುಂದಾಪುರ–ಬೈಂದೂರು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಪಶುವೈದ್ಯಾಧಿಕಾರಿ ಡಾ. ನಾಗರಾಜ ಮರವಂತೆ ಅವರು ಪ್ರಮುಖರು. ಮೂಕ ಜೀವಿಗಳ ನೋವಿಗೆ ಮಿಡಿಯುವ ಅವರ ಹೃದಯ, ಹಗಲು-ರಾತ್ರಿ ಎನ್ನದೆ ಸಲ್ಲಿಸುತ್ತಿರುವ ಸೇವೆ ಮತ್ತು ಪಶುಸಂಗೋಪನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅವರಿಗೆ ವಿಶೇಷ ಗುರುತನ್ನು ತಂದುಕೊಟ್ಟಿದೆ. ಡಾ. ನಾಗರಾಜ ಮರವಂತೆ ಬಗ್ಗೆ ಒಂದಿಷ್ಟು: ಬಡ ಕುಟುಂಬದಲ್ಲಿ […]