26 ವರ್ಷಗಳ ಬಳಿಕ ಮನೆಗೆ ಮರಳಿದ ಸತೀಶ್; ಸಲೀಂ ಆಗಿ ಬಂದ ಮಗನನ್ನು ಕಂಡು ತಾಯಿಯ ಕಣ್ಣೀರು

ಬೆಳ್ತಂಗಡಿ: 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬರು ಅಚ್ಚರಿಯ ರೀತಿಯಲ್ಲಿ ತಮ್ಮ ಕುಟುಂಬವನ್ನು ಮತ್ತೆ ಸೇರಿಕೊಂಡ ಘಟನೆ ಧರ್ಮಸ್ಥಳದ ಅಶೋಕನಗರದಲ್ಲಿ ನಡೆದಿದೆ. ಸತೀಶ್ ಎಂಬ ಯುವಕ 19ನೇ ವಯಸ್ಸಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದ್ದ. ಬಳಿಕ ಹಲವು ವರ್ಷಗಳ ಕಾಲ ಅಲ್ಲೇ ಕೆಲಸ ಮಾಡಿಕೊಂಡು ತನ್ನ ಊರು ಹಾಗೂ ಕುಟುಂಬದ ನೆನಪು ಕಳೆದುಕೊಂಡಿದ್ದ. ಇತ್ತೀಚೆಗೆ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದ ವೇಳೆ ಬಾಲ್ಯದ ನೆನಪುಗಳು ಮರುಕಳಿಸಿ, ತನ್ನ ಊರನ್ನು ಗುರುತಿಸಿದ್ದಾನೆ. ತಮ್ಮಂದಿರ ಹೆಸರು […]

ಎಸ್‌ಎಂಎಸ್ ಪದವಿಪೂರ್ವ ಕಾಲೇಜು, ಬ್ರಹ್ಮಾವರದಲ್ಲಿ ವಿದ್ಯಾರ್ಥಿ ನಾಯಕನ ಚುನಾವಣೆ ಯಶಸ್ವಿ

ಬ್ರಹ್ಮಾವರ: ಎಸ್ಎಂಎಸ್ ಪಿಯು ಕಾಲೇಜ್ ನಲ್ಲಿ (SMS PU College) ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ನಾಯಕನ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಚುನಾವಣೆಯು ಗುಪ್ತ ಮತದಾನ (Secret Ballot) ಪದ್ಧತಿಯ ಮೂಲಕ ನಡೆದಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ವಿದ್ಯಾರ್ಥಿ ನಾಯಕನ ಹುದ್ದೆಗೆ ಆರು ವಿದ್ಯಾರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿ ಸ್ಪರ್ಧಿಸಿದ್ದರು. ಮತದಾನ ಪ್ರಕ್ರಿಯೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಹಾಗೂ ಉಪನ್ಯಾಸಕರ ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಸಲಾಯಿತು. ಮತ ಎಣಿಕೆಯ ನಂತರ ಮಹಮ್ಮದ್ ಸಾದ್ […]