ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಿಯಾಯಿತಿ: ರಾಜ್ಯ ಸರಕಾರದ ಹೊಸ ಆದೇಶ ಏನು?

ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವ ಟ್ರಾಫಿಕ್ ದಂಡಗಳನ್ನು ಪಾವತಿಸದ ವಾಹನ ಸವಾರರಿಗೆ ಕರ್ನಾಟಕ ಸರ್ಕಾರ ಮತ್ತೊಮ್ಮೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡದ ಮೊತ್ತವನ್ನು ಅರ್ಧಕ್ಕೆ ಇಳಿಸಿ ಪಾವತಿಸಲು ಅವಕಾಶ ನೀಡುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದಿನ ರಿಯಾಯಿತಿ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ದಂಡ ಸಂಗ್ರಹವಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. 20 ದಿನಗಳ ವಿಶೇಷ ಅವಕಾಶ ಸರ್ಕಾರದ […]
ಡೆಲಿವರಿ ಸಂದರ್ಭದಲ್ಲಿ ಗಂಡ ಜೊತೆಗಿದ್ದರೆ ಹೆರಿಗೆ ಸುಖಮಯ ಅಂತಾರೆ ತಜ್ಞರು

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಹಲವು ಆಸ್ಪತ್ರೆಗಳು ಹೆರಿಗೆ ಸಮಯದಲ್ಲಿ ಪತ್ನಿಯ ಜೊತೆ ಗಂಡ ಇರಲು ಅವಕಾಶ ನೀಡುತ್ತಿವೆ. ವಿದೇಶಗಳಲ್ಲಿ ಬಹಳ ಸಾಮಾನ್ಯವಾಗಿರುವ ಈ ಪದ್ಧತಿ ಈಗ ನಮ್ಮ ದೇಶದಲ್ಲೂ ನಿಧಾನವಾಗಿ ಹೆಚ್ಚುತ್ತಿದೆ. ವೈದ್ಯರು ಮತ್ತು ತಜ್ಞರ ಪ್ರಕಾರ, ಹೆರಿಗೆ ಸಮಯದಲ್ಲಿ ಗಂಡ ಜೊತೆಯಲ್ಲಿರುವುದು ಮಹಿಳೆಯ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಭಾವನಾತ್ಮಕ ಬೆಂಬಲವನ್ನೂ ನೀಡುತ್ತದೆ. ಜೊತೆಗಾರ ನೀಡುವ ಮನೋಸ್ಥೈರ್ಯ ಹೆರಿಗೆಯ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು, ಆತಂಕ ಮತ್ತು ಒತ್ತಡದ ನಡುವೆ ತಮ್ಮ ಗಂಡ ಹತ್ತಿರದಲ್ಲಿದ್ದರೆ ಅವರಿಗೆ ಧೈರ್ಯ […]
ಪ್ರಪಂಚದ ಮೂಲೆ ಮೂಲೆಗೂ ವಿಮಾನ ಸೌಲಭ್ಯ ಹೊಂದಿರುವ ಭಾರತದ ಏಕೈಕ ಏರ್‌ಪೋರ್ಟ್ ಇದು!

ಭಾರತದ ವಾಯುಯಾನ ಕ್ಷೇತ್ರ ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅದರ ಪ್ರತಿಬಿಂಬ ದೇಶದ ಆಧುನಿಕ ವಿಮಾನ ನಿಲ್ದಾಣಗಳಲ್ಲೂ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಕೆಲವೇ ಮಹಾನಗರಗಳಿಗೆ ಸೀಮಿತವಾಗಿದ್ದ ವಿಮಾನ ಸೇವೆಗಳು, ಇದೀಗ ಸಣ್ಣ ನಗರಗಳಿಗೂ ವಿಸ್ತರಿಸುತ್ತಿವೆ. ಸರ್ಕಾರದ ಉಡಾನ್ ಯೋಜನೆ, ಹೊಸ ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ಭಾರತ ಇಂದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಬೆಳವಣಿಗೆಯ ನಡುವೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ Indira Gandhi International […]
ಕೇರಳದಲ್ಲಿ ಪ್ರಬಲಗೊಂಡ ಮುಂಗಾರು, ಕರ್ನಾಟಕದಲ್ಲೂ ಮಳೆ ಚುರುಕು,ಕರಾವಳಿಗೆ ಆರೆಂಜ್ ಅಲರ್ಟ್

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ನೈಋತ್ಯ ಮುಂಗಾರು ಮಾರುತಗಳು ನಾಲ್ಕು ದಿನಗಳ ವಿಳಂಬದ ಬಳಿಕ ಕೊನೆಗೂ ಕೇರಳ ಪ್ರವೇಶಿಸಿ ಈಗ ಚುರುಕುಗೊಂಡಿದೆ, ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೇರಳದಲ್ಲಿ ಮುಂಗಾರು ಆರಂಭವಾದ ಬೆನ್ನಲ್ಲೇ ಕರ್ನಾಟಕದಲ್ಲೂ ಮಳೆ ಚುರುಕುಗೊಳ್ಳಲಿದ್ದು, ಮುಂದಿನ ಆರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮೇ 26ರ ವೇಳೆಗೆ ಮುಂಗಾರು ಕೇರಳ ಪ್ರವೇಶಿಸುವ ನಿರೀಕ್ಷೆ ವ್ಯಕ್ತಪಡಿಸಿತ್ತು. ಆದರೆ ಹವಾಮಾನ ಪರಿಸ್ಥಿತಿಗಳ ಕಾರಣದಿಂದ […]