ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ರೀಲ್ ವೈರಲ್ ಆಗಬೇಕಾ? ಈ ತಂತ್ರ ಇದೀಗ ಗೇಮ್ ಚೇಂಜರ್!

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿದಿನ ಲಕ್ಷಾಂತರ ರೀಲ್ಸ್ ಅಪ್‌ಲೋಡ್ ಆಗುತ್ತಿವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಮಿಲಿಯನ್ ವೀಕ್ಷಣೆಗಳನ್ನು ಪಡೆದು ವೈರಲ್ ಆಗುತ್ತವೆ. ಉಳಿದ ಅನೇಕ ವಿಡಿಯೋಗಳು ಕೆಲವೇ ಕ್ಷಣಗಳಲ್ಲಿ ಜನರ ಗಮನದಿಂದ ಮರೆಯಾಗುತ್ತವೆ. ಹಾಗಾದರೆ ಕೆಲವು ರೀಲ್ಸ್ ಮಾತ್ರ ಏಕೆ ಸಕ್ಸಸ್ ಆಗುತ್ತವೆ? ಇದಕ್ಕೆ ಉತ್ತರವಾಗಿ ಎಲ್ಲರೂ ಹೇಳುತ್ತಿರುವ ಒಂದು ಪ್ರಮುಖ ತಂತ್ರವೇ — ‘3-ಸೆಕೆಂಡ್ ಹುಕ್’. ಸಾಮಾಜಿಕ ಮಾಧ್ಯಮ ತಜ್ಞರ ಪ್ರಕಾರ, ಇಂದಿನ ದೊಡ್ಡ ಸವಾಲು ಎಂದರೆ ಬಳಕೆದಾರರ ಗಮನ ಸೆಳೆಯುವುದು. ಯಾಕೆಂದರೆ, ಒಬ್ಬ ವ್ಯಕ್ತಿ […]
ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು: 24 ಗಂಟೆಯೊಳಗೆ ಆರೋಪಿ ಬಂಧನ

ಉಡುಪಿ: ಕೊಲ್ಲೂರು ಸಮೀಪದ ದಳಿ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೇರಳ ಮೂಲದ ಮಹಿಳಾ ಯಾತ್ರಾರ್ಥಿಯೊಬ್ಬರ ಮೈಮೇಲಿದ್ದ ಚಿನ್ನಾಭರಣ ಕಳವು ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ್ (40) ಎಂದು ಗುರುತಿಸಲಾಗಿದೆ. ಮೇ 17ರಂದು ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ದಳಿ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಈ […]
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ಮುಸ್ಲಿಂ ಸಂಘಟನೆಯಿಂದ ಸರಕಾರಕ್ಕೆ ಆಗ್ರಹ

ನವದೆಹಲಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಜಮೀಯತ್ ಉಲೇಮಾ-ಎ-ಹಿಂದ್ (ಅರ್ಶದ್ ಮದನಿ ಬಣ) ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಅವರು ಸರಕಾರವನ್ನು ವಿನಂತಿಸಿದ್ದಾರೆ. ಅವರ ಈ ಹೇಳಿಕೆಗೆ ದೇಶದ ವಿವಿಧ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಮುಸ್ಲಿಂ ಮುಖಂಡರು ಹಾಗೂ ಸಂಘಟನೆಗಳು ಈ ಪ್ರಸ್ತಾಪವನ್ನು ಸ್ವಾಗತಿಸಿವೆ. ಗೋಹತ್ಯೆ ವಿಚಾರವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಗೆ ಈ ಕ್ರಮ ಕಡಿವಾಣ ಹಾಕಬಹುದು ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಈ ವಿಷಯದಲ್ಲಿ ಮುಸ್ಲಿಂ […]
ಗ್ರೀನ್ ಸ್ಪೇಸ್, ಪೀಸ್‌ಫುಲ್ ಮೈಂಡ್: ಮನೆ ಮತ್ತು ಆಫೀಸ್‌ನಲ್ಲಿರಲಿ ಒಳಾಂಗಣ ಗಿಡಗಳು

ಇಂದಿನ ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ದಣಿವು ಸಾಮಾನ್ಯ ಸಮಸ್ಯೆಗಳಾಗಿವೆ. ಇಂತಹ ಸಂದರ್ಭದಲ್ಲಿ ಮನೆಯೊಳಗೆ ಅಥವಾ ಆಫೀಸ್ ಕೆಲಸದ ಸ್ಥಳದಲ್ಲಿ ಸಣ್ಣ ಸಣ್ಣ ಹಸಿರು ಗಿಡಗಳನ್ನು ಬೆಳೆಸುವುದು ಕೇವಲ ಅಲಂಕಾರವಲ್ಲ, ಅದು ಮನಸ್ಸಿಗೆ ನೆಮ್ಮದಿ ನೀಡುವ ಸಹಜ ಚಿಕಿತ್ಸೆ ಎನ್ನಬಹುದು. ಮನಸ್ಸಿಗೆ ಒಳ್ಳೆಯದು ಹಸಿರು ಗಿಡಗಳು ಮನೋವಿಜ್ಞಾನ ತಜ್ಞರ ಪ್ರಕಾರ, ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿರುವವರು ಹೆಚ್ಚು ಶಾಂತ ಮನಸ್ಥಿತಿಯನ್ನು ಅನುಭವಿಸುತ್ತಾರೆ. ಮನೆಯ ಕೋಣೆ, ಬಾಲ್ಕನಿ ಅಥವಾ ಕಚೇರಿ ಮೇಜಿನ ಮೇಲೆ ಇರುವ ಹಸಿರು ಗಿಡಗಳು […]
“ಭಟ್ಕಳ ಮೂರಿನಕಟ್ಟೆ ವಿವಾದ: ಇಂದಿನಿಂದ 3 ದಿನ ನಿಷೇಧಾಜ್ಞೆ ಜಾರಿ”

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂರಿನಕಟ್ಟೆ ಮರುನಿರ್ಮಾಣ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ. ಮೇ 25ರಿಂದ 27ರವರೆಗೆ ಭಟ್ಕಳ ಪಟ್ಟಣ ಮತ್ತು ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಐದು ಮಂದಿ ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಿ ಭಟ್ಕಳ ಎಸಿ ಆದೇಶ ಹೊರಡಿಸಿದ್ದಾರೆ.ನಗರದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿರುವುದರಿಂದ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ […]