ಮೇ 22ರಂದು ಬಡಗಬೆಟ್ಟು ಸೊಸೈಟಿಯ 12ನೇ ನೂತನ ಕುಂದಾಪುರ ಶಾಖೆ ಉದ್ಘಾಟನೆ

ಕುಂದಾಪುರ: ಪ್ರತಿಷ್ಠಿತ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 12ನೇ ನೂತನ ಕುಂದಾಪುರ ಶಾಖೆಯು ಮೇ 22ರಂದು ಬೆಳಗ್ಗೆ 10.30ಕ್ಕೆ ಕುಂದಾಪುರದ ಮುಖ್ಯ ರಸ್ತೆಯ ಪಾರಿಜಾತ ಹೋಟೆಲ್ ಬಳಿಯ ಶ್ರೀನಂದಿಕೇಶ್ವರ ಟವರ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಕುಂದಾಪುರದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಾಖೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ […]
ಜಾಸ್ತಿಯಾಗುತ್ತಿದೆ ಡೇಂಜರಸ್ ಪೇಪರ್ ಲೋಟಗಳ ಬಳಕೆ: ನೀವು ಇದರಲ್ಲೇ ಟೀ, ಕಾಫಿ ನೀರು ಕುಡಿತಾ ಹೋದ್ರೆ ಮುಗೀತು ನಿಮ್ಮ ಕತೆ!

ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕ ಕಾರ್ಯಕ್ರಮಗಳು, ಆಫೀಸ್ ಮೀಟಿಂಗ್, ಸಣ್ಣದ್ದೊಂದು ಭೇಟಿಯಲ್ಲಿಯೂ ಕೂಡ ಅಪಾಯಕಾರಿ ಪೇಪರ್ ಲೋಟದಲ್ಲಿಯೇ ಟೀ, ಕಾಫಿ, ನೀರು, ಮಜ್ಜಿಗೆ ಕುಡಿಯುವ ದೃಶ್ಯಗಳು ಈಗ ಎಲ್ಲಾ ಊರುಗಳಲ್ಲಿಯೂ, ಹೆಚ್ಚೇಕೆ ಮನೆಗಳಲ್ಲಿಯೂ ಮಾಮೂಲು. ಹೆಚ್ಚಿನ ಮಂದಿಗೆ ಪೇಪರ್ ಲೋಟ ಪ್ಲಾಸ್ಟಿಕ್ ಅಲ್ಲ ಎನ್ನುವ, ಇದು ಸುರಕ್ಷಿತ ಎನ್ನುವ ಭಾವನೆ ಇದೆ. ಇತ್ತೀಚೆಗೆ ವರದಿಯೊಂದು ಪೇಪರ್ ಲೋಟದ ಬಳಕೆ ಜಾಸ್ತಿ ಆಗಿದೆ. ಇದರಿಂದ ಮನುಷ್ಯ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳನ್ನು ಅವನ ಅರಿವಿಲ್ಲದೆಯೇ ಅನುಭವಿಸುತ್ತಿದ್ದಾನೆ, ಭವಿಷ್ಯವೂ ಅಪಾಯದಲ್ಲಿದೆ ಎಂದು […]
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಭಾರತ, ಪಾಕ್ ನಲ್ಲಿ ನರಮೇಧ, ಹಿಂಸಾಚಾರದ ಕುರಿತು ಕಳವಳ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನವು ದಶಕಗಳಿಂದ ನರಮೇಧ, ಗಡಿಯಾಚೆಗಿನ ಹಿಂಸಾಚಾರ ಹಾಗೂ ನಾಗರಿಕರ ಮೇಲಿನ ದಾಳಿಗಳಲ್ಲಿ ತೊಡಗಿದೆ ಎಂದು ಆರೋಪಿಸಿದೆ. ‘ಸಶಸ್ತ್ರ ಸಂಘರ್ಷದಲ್ಲಿ ನಾಗರಿಕರ ರಕ್ಷಣೆ’ ಕುರಿತ ಚರ್ಚೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ, “ದೀರ್ಘಕಾಲದ ನರಮೇಧದ ದಾಖಲೆ ಹೊಂದಿರುವ ಪಾಕಿಸ್ತಾನವು ಭಾರತದ ಆಂತರಿಕ ವಿಚಾರಗಳನ್ನು ಉಲ್ಲೇಖಿಸುವುದು ವಿಪರ್ಯಾಸ” ಎಂದು ತಿರುಗೇಟು ನೀಡಿದ್ದಾರೆ. ಜಮ್ಮು-ಕಾಶ್ಮೀರ ವಿಚಾರವನ್ನು ಪಾಕಿಸ್ತಾನ ಪ್ರತಿನಿಧಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಭಾರತ ಈ […]
ಇನ್ನು UPI ಮೂಲಕ PF ಹಣ ಡ್ರಾ ಮಾಡಬಹುದು, ವಾಟ್ಸಾಪ್ ನಲ್ಲೂ ಸಿಗಲಿದೆ EPFO ಸೇವೆ, ಹೇಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಡಿಜಿಟಲ್ ಸೇವೆಗಳ ವಿಸ್ತರಣೆಯ ಭಾಗವಾಗಿ Employees’ Provident Fund Organisation (EPFO) ಇದೀಗ ಮಹತ್ವದ ಹೊಸ ವ್ಯವಸ್ಥೆಗಳನ್ನು ಪರಿಚಯಿಸಲು ಮುಂದಾಗಿದೆ. ಇನ್ನು ಮುಂದೆ PF ಹಣವನ್ನು ಪಡೆಯಲು ಕಚೇರಿಗಳಿಗೆ ಸುತ್ತಾಡುವ ಕಷ್ಟ ಕಡಿಮೆಯಾಗಲಿದ್ದು, UPI ಹಾಗೂ ವಾಟ್ಸಾಪ್ ಮೂಲಕವೇ ಹಲವು ಸೇವೆಗಳು ಲಭ್ಯವಾಗಲಿವೆ. UPI ಮೂಲಕ PF ಹಣ ಡ್ರಾ ಹೇಗೆ? ಹೊಸ ವ್ಯವಸ್ಥೆಯ ಪ್ರಕಾರ, EPFO ಸದಸ್ಯರು ತಮ್ಮ PF ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಮತ್ತು UPI ಬಳಸಿ ಹಣವನ್ನು ನೇರವಾಗಿ […]
ಸೋಶಿಯಲ್ ಮೀಡಿಯಾದಲ್ಲಿ ಜೋರಾದ ‘ಕಾಕ್ರೋಚ್ ಜನತಾ ಪಾರ್ಟಿ’ಯ ಹವಾ, ಸುಪ್ರಿಂ ಕೋರ್ಟ್ ಸಿಜೆಐ ಹೇಳಿಕೆಗೆ ಟಕ್ಕರ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ “ಕಾಕ್ರೋಚ್ ಜನತಾ ಪಾರ್ಟಿ (CJP)” ಎನ್ನುವುದು ನಿಜವಾದ ರಾಜಕೀಯ ಪಕ್ಷವಲ್ಲ. ಇದು ಜೆನ್ ಝೀ ಯುವಕರು ಮತ್ತು ಆನ್‌ಲೈನ್ ಬಳಕೆದಾರರು ನಡೆಸುತ್ತಿರುವ ಒಂದು ವಿಡಂಬನಾತ್ಮಕ (satirical) ಡಿಜಿಟಲ್ ಅಭಿಯಾನವಾಗಿದೆ. “ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ” ಎಂಬ ಟ್ಯಾಗ್‌ಲೈನ್‌ನೊಂದಿಗೆ ಆರಂಭವಾದ ಈ ಅಭಿಯಾನ, “ವ್ಯವಸ್ಥೆ ಮರೆತವರ ಧ್ವನಿ” ಎಂದು ತನ್ನನ್ನು ಪರಿಚಯಿಸಿಕೊಂಡಿದೆ. ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಪಡೆದು ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. ಹಿನ್ನೆಲೆ ಏನು? ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ […]