ಮೇ 25 ರವರೆಗೆ ಸಮುದ್ರಕ್ಕೆ ಇಳಿಯಬೇಡಿ,ಕರಾವಳಿಯ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ!

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೇ 25 ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿರುವವರು ತಕ್ಷಣ ಸುರಕ್ಷಿತವಾಗಿ ದಡ ಸೇರಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಹವಾಮಾನ ಇಲಾಖೆಯ ಅಧಿಕೃತ ಮಾಹಿತಿಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ. ಮೇ 20ರಿಂದ 22ರವರೆಗೆ ಕರ್ನಾಟಕ–ಕೇರಳ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಹಾಗೂ ಕೊಮೊರಿನ್ ಪ್ರದೇಶಗಳಲ್ಲಿ ಗಂಟೆಗೆ 40ರಿಂದ […]

8,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಮೆಟಾ: ಭಾರೀ ಪ್ರಮಾಣದ ಉದ್ಯೋಗ ಕಡಿತಕ್ಕೆ ಉದ್ಯೋಗಿಗಳು ಶಾಕ್!

ಜಾಗತಿಕ ಸಾಮಾಜಿಕ ಮಾಧ್ಯಮ ದೈತ್ಯ Meta Platforms ಕಂಪನಿಯು ಭಾರೀ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಸುಮಾರು 8,000 ಉದ್ಯೋಗಿಗಳನ್ನು, ಅಂದರೆ ಕಂಪನಿಯ ಒಟ್ಟು ಸಿಬ್ಬಂದಿಯಲ್ಲಿ ಶೇಕಡಾ 10 ರಷ್ಟು ಮಂದಿಯನ್ನು ಮೇ 20ರಂದು ವಜಾಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. ಕೃತಕ ಬುದ್ಧಿಮತ್ತೆ (AI) ಯುಗಕ್ಕೆ ವೇಗವಾಗಿ ಹೊಂದಿಕೊಳ್ಳುವ ಉದ್ದೇಶದಿಂದ ಕಂಪನಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಸಿಂಗಪುರದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, The New York Times ಈ ಕುರಿತು ಮಾಹಿತಿ […]

ಉಡುಪಿ: ಟ್ಯಾಂಕರ್-ಸ್ಕೂಟರ್ ನಡುವೆ ಅಪಘಾತ: ಸವಾರ ಮೃತ್ಯು

ಪಡುಬಿದ್ರಿ: ನೀರಿನ ಟ್ಯಾಂಕರ್ ಹಾಗೂ ಸ್ಕೂಟರ್ ಮಧ್ಯೆ ಮೇ 19ರಂದು ಬೆಳಗ್ಗೆ ಎಲ್ಲೂರು ಗ್ರಾಮದ ಕಂಚುಗಾರಕೇರಿ ಬಸ್ ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಪಣಿಯೂರು ಸೆಂಟರ್ ನಿವಾಸಿ ಕೃಷ್ಣ ಮೂಲ್ಯ(22) ಎಂದು ಗುರುತಿಸಲಾಗಿದೆ. ಉಚ್ಚಿಲ ಕಡೆಯಿಂದ ಬರುತ್ತಿದ್ದ ನೀರಿನ ಟ್ಯಾಂಕರ್, ಯಾವುದೇ ಸೂಚನೆ ನೀಡದೇ ಏಕಾಏಕಿ ರಸ್ತೆಯ ಬಲಬದಿಗೆ ಕಂಚುಗಾರಕೇರಿಗೆ ಹೋಗುವ ಕಾಂಕ್ರೀಟ್ ರಸ್ತೆಗೆ ತಿರುಗಿಸಿದ್ದು, ಇದರ ಪರಿಣಾಮ ಟ್ಯಾಂಕರ್ ಹಿಂದೆ ಉಚ್ಚಿಲ ಕಡೆಯಿಂದ ಎಲ್ಲೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ […]

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ಪಿಯುಸಿ ಪ್ರವೇಶಾತಿ ಆರಂಭ

ಉಡುಪಿ ರಥ ಬೀದಿಯಲ್ಲಿರುವ ಶ್ರೀ ಅಧೋಕ್ಷಜ ಪೇಜಾವರ ಮಠದ ಸನಿಹದಲ್ಲಿರುವ ಸುವಿದ್ಯಾ ಅಕಾಡೆಮಿಯಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ವಿಜ್ಞಾನ/ ಕಾಮರ್ಸ್ ವಿಭಾಗದಲ್ಲಿ ಕಲಿಯುವ ಅವಕಾಶವಿರುತ್ತದೆ .ಹೀಗೆ ದ್ವಿತೀಯ ಪಿಯುಸಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೆಗ್ಯುಲರ್ ತರಗತಿಗಳು ಇರುತ್ತದೆ . ಉತ್ತಮ ಪರಿಸರ ಅನುಭವಿ ಉಪನ್ಯಾಸಕರಿಂದ ಬೋಧನೆ ಶಿಸ್ತು ಗುಣಮಟ್ಟದ ಫಲಿತಾಂಶ ಆಧಾರಿತ ಶಿಕ್ಷಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಅಕಾಡೆಮಿಯಲ್ಲಿ ಆರನೇ ತರಗತಿಯಿಂದ ಪಿಯುಸಿ ವರೆಗೆ ಗುಣಮಟ್ಟದ ಕೋಚಿಂಗ್ ಲಭ್ಯವಿದೆ.ಹೆಚ್ಚಿನ ವಿವರಗಳಿಗೆ ಉಡುಪಿ ರಥ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ ಪ್ರಾಜೆಕ್ಟ್ ಮತ್ತು ವಿಜ್ಞಾನ ಮಾದರಿ ಪ್ರದರ್ಶನ

ಉಡುಪಿ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾದ್ಯಾಲಯದ ಸಹಪಠ್ಯ ಚಟುವಟಿಕೆ ಘಟಕವು ಐಇಇಇ ಮತ್ತು ಇನ್‌ಸ್ಟಿಟ್ಯೂಟ್ ಇನೋವೇಶನ್ ಕೌನ್ಸಿಲ್‌ನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಟೆಕ್ ಶೋಕೆಸ್ -2026 ಮಿನಿ ಪ್ರಾಜೆಕ್ಟ್ ಪ್ರದರ್ಶನ ಹಾಗೂ ಸ್ಫರ್ಧೆ ಮತ್ತು ಮೂಲ ವಿಜ್ಞಾನ ವಿಭಾಗವು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಆಕೃತಿ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಮೇ 15ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸಂಸ್ಥೆಯ ಹಳೆ ವಿದ್ಯಾರ್ಥಿನಿ ನಿಯಸ್ ಸೊಲ್ಯೂಶನ್ ಇದರ ಕ್ಲೌಡ್ ಎಕ್ಸ್‌ಫರ್ಟ್ ಶ್ರೀದೇವಿ ರಾವ್ ಉದ್ಘಾಟಿಸಿದರು ಸಂಸ್ಥೆಯ ಶೈಕ್ಷಣಿಕ […]