ಎಸ್.ವಿ.ಟಿ ಬಸ್ ಸೇವೆಯಲ್ಲಿ ಭಾರೀ ನಿರ್ಲಕ್ಷ್ಯ: ಪ್ರಯಾಣಿಕರನ್ನು ಬಸ್ಸಿನಲ್ಲೇ ಬಿಟ್ಟು ಹೊರಗಿನಿಂದ ಲಾಕ್ ಮಾಡಿ ತೆರಳಿದ ಚಾಲಕ, ಸಿಬ್ಬಂದಿ

ಎಸ್.ವಿ.ಟಿ ಬಸ್ ಸಂಸ್ಥೆಯ ವಿರುದ್ಧ ಕಠಿಣ ಕ್ರಮಕ್ಕೆ ಪ್ರಯಾಣಿಕರ ಆಗ್ರಹ ಉಡುಪಿ: ಬೆಂಗಳೂರಿನಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿದ್ದ ಎಸ್ ವಿಟಿ ಖಾಸಗಿ ಬಸ್ ಸೇವೆಯಲ್ಲಿ ಗಂಭೀರ ಗೊಂದಲ ಹಾಗೂ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, “ಎಸ್.ವಿ.ಟಿ” ಎಂಬ ಖಾಸಗಿ ಬಸ್ ಸಂಸ್ಥೆ ವಿರುದ್ಧ ಆರೋಪಗಳು ಕೇಳಿಬಂದಿವೆ.ಮಾಹಿತಿಯ ಪ್ರಕಾರ, ಪ್ರಯಾಣಿಕರು ಮುಂಚಿತವಾಗಿ ಬುಕ್ ಮಾಡಿದ್ದ ಬಸ್ಸನ್ನು ಸಮಯಕ್ಕೆ ಸರಿಯಾಗಿ ಕಳುಹಿಸದೇ, ಬದಲಿಗೆ ತಡವಾಗಿ ಮತ್ತೊಂದು ಬಸ್ಸನ್ನು […]
ಮಹಿಳೆಯರಿಗೆ ಡಬಲ್ ಧಮಾಕ! ಫ್ರೀ ಬಸ್ ಜೊತೆಗೆ ಸ್ಮಾರ್ಟ್ ಕಾರ್ಡ್ ಬೆನಿಫಿಟ್

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸೌಲಭ್ಯ ಘೋಷಿಸಲಾಗಿದೆ. ಉಚಿತ ಬಸ್ ಪ್ರಯಾಣದ ಜೊತೆಗೆ ಇದೀಗ ಮಹಿಳೆಯರಿಗೆ ವಿಶೇಷ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ. ಜೂನ್ ತಿಂಗಳಿನಿಂದ ಈ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭವಾಗಲಿದ್ದು, ಮಹಿಳೆಯರಿಗೆ ಬಸ್ ಮತ್ತು ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭ ಹಾಗೂ ಡಿಜಿಟಲ್ ರೀತಿಯಲ್ಲಿ ಮಾಡಲು ಸಹಾಯವಾಗಲಿದೆ. ಸ್ಮಾರ್ಟ್ ಕಾರ್ಡ್ ಪ್ರಯೋಜನಗಳೇನು? ಸ್ಮಾರ್ಟ್ ಕಾರ್ಡ್ ವಿತರಣೆ ಮೊದಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಪ್ರಾರಂಭವಾಗಲಿದೆ. ಬಳಿಕ […]
ಎಲ್‌ಪಿಜಿ ಸಿಲಿಂಡರ್ ಬೆಲೆ 993 ರೂ. ಏರಿಕೆ! ಇಂದಿನಿಂದಲೇ ಜಾರಿ

ನವದೆಹಲಿ: ಇರಾನ್, ಇಸ್ರೇಲ್, ಅಮೇರಿಕಾ ದೇಶಗಳ ಯುದ್ಧ ಪರಿಸ್ಥಿತಿ ಹಾಗೂ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಎಲ್.ಪಿ.ಜಿ. ಕೊರತೆ ಉಂಟಾಗಿದೆ. ಇದೀಗ ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಜಾರಿಯಾಗಿದೆ. ಇಂದಿನಿಂದಲೇ (ಮೇ 1) ಅನ್ವಯವಾಗುವಂತೆ, ಪ್ರತಿ ಸಿಲಿಂಡರ್‌ಗೆ ₹993 ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಏರಿಕೆಯ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,071.50ಕ್ಕೆ ತಲುಪಿದೆ. ಈ ಬೆಲೆ ಏರಿಕೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ […]
ಮೇ 4ರಿಂದ ಕುಡಿಯುವ ನೀರಿನ ರೇಶನಿಂಗ್ – 2 ದಿನಗಳಿಗೊಮ್ಮೆ ನೀರು ಪೂರೈಕೆ

ಮಂಗಳೂರು: ತೀವ್ರ ಬೇಸಿಗೆ ಹಿನ್ನೆಲೆ ನೇತ್ರಾವತಿ ನದಿಯ ಒಳಹರಿವು ಬಹುತೇಕ ನಿಂತುಹೋಗಿದ್ದು, ತುಂಬೆ ಕಿಂಡಿ ಅಣೆಕಟ್ಟುಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಮೇ 4ರಿಂದ ಕುಡಿಯುವ ನೀರಿನ ರೇಶನಿಂಗ್ ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಕ್ರಮದಂತೆ, ಮಂಗಳೂರು ಉತ್ತರ ಹಾಗೂ ದಕ್ಷಿಣ ಭಾಗಗಳಿಗೆ ಪ್ರತಿ ಎರಡು ದಿನಗಳಿಗೊಮ್ಮೆ (alternate days) ನೀರು ಸರಬರಾಜು ಮಾಡಲಾಗುತ್ತದೆ. ಮುಂದಿನ ಸೂಚನೆ ಬರುವವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ. ಮೇ 4ರಂದು ನೀರು […]
ದ್ವಿತೀಯ ಪಿಯುಸಿ ಮರುಮೌಲ್ಯಮಾಪನ: ಹೆಬ್ರಿ ಎಸ್.ಆರ್. ಕಾಲೇಜಿನ ವಿದ್ಯಾರ್ಥಿನಿ ರಾಜ್ಯಕ್ಕೆ 9ನೇ ರ್ಯಾಂಕ್

ಹೆಬ್ರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಎಸ್ ಆರ್ ಪದವಿಪೂರ್ವ ಕಾಲೇಜಿನ ಖಾಝೀ ಇಲ್ಹಾಮ್ 592 ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದು, ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯನ್ನು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.