ಕಾರ್ಕಳ ಶ್ರೀ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ದಿನಾಂಕ ಘೋಷಣೆ

ಕಾರ್ಕಳ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಬಾಹುಬಲಿ ಸ್ವಾಮಿಗೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯಾಗಿದ್ದು, ಮಹೋತ್ಸವವು 2027 ಫೆ.18ರಿಂದ 28ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ. ಕರ್ನಾಟಕದಲ್ಲಿ ಶ್ರವಣಬೆಳಗೊಳದ ನಂತರದ ಅತಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ ಎಂದು ಪ್ರಸಿದ್ಧವಾಗಿರುವ ಕಾರ್ಕಳದ ಬಾಹುಬಲಿಗೆ ಮಹಾಮಜ್ಜನದ ಸಂಭ್ರಮ ಆರಂಭವಾಗಿದ್ದು, ಮಹಾಮಸ್ತಕಾಭಿಷೇಕ ಸಮಿತಿಯ ಕಚೇರಿ ಉದ್ಘಾಟನೆಯೂ ನೆರವೇರಿದೆ.
ಸ್ವರ್ಣ ಶೋರೂಮ್‌ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಸ್ವರ್ಣ’ ಕರ್ನಾಟಕ ರಾಜ್ಯದಲ್ಲಿ ಆಭರಣ ಮತ್ತು ಬೆಳ್ಳಿಯ ಮಾರಾಟದಲ್ಲಿ ಪ್ರಮುಖ ಮತ್ತು ಬೆಳೆಯುತ್ತಿರುವ ಬ್ರ್ಯಾಂಡ್ ಆಗಿದೆ. ತನ್ನ ಬೆಂಗಳೂರಿನಲ್ಲಿರುವ ಸ್ವರ್ಣ ಶೋರೂಮ್‌ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. * Showroom Sales ExecutiveGraduation/Plus Two. 2-3 years of experience in Jewellery Retail essential. Freshers can also apply. Age 21-35 * Graphic Designer Relevant Degree / Experience. Good Knowledge in Coreldraw/Illustrator & Image Processing. Freshers […]
ಬಾಯಿಗೆ ರುಚಿಕರ ಮೈದಾ ಹಿಟ್ಟು ಆರೋಗ್ಯಕ್ಕೆ ಹಿತಕರವೇ? ಬಳಸುವ ಮುನ್ನ ಒಮ್ಮೆ ಇದನ್ನು ಓದಿ

ಇತ್ತೀಚಿನ ದಿನಗಳಲ್ಲಿ ಬೇಕರಿ ತಿಂಡಿ-ತಿನಿಸುಗಳಿಂದ ಹಿಡಿದು, ದಿನನಿತ್ಯ ಬಳಕೆಯ ಹಲವು ಅಡಿಗೆಗೆಳಲ್ಲೂ ಮೈದಾ ಬಳಕೆ ಹೆಚ್ಚಾಗುತ್ತಿದೆ. ಹೋಟೆಲ್ ಗಳಲ್ಲಿ, ಸಮಾರಂಭದ ಅಡುಗೆಗಳಲ್ಲಿ ಅಷ್ಟೇ ಏಕೆ ಮನೆಗಳಲ್ಲೂ ರುಚಿಕರ ಹಾಗೂ ಸುಲಭ ಎಂದು ಮೈದಾ ಬಳಸಿದ ಅಡುಗೆಗಳು ತಯಾರಾಗುತ್ತವೆ. ಆದರೆ ಮೈದಾ ಹೇಗೆ ತಯಾರಾಗುತ್ತದೆ, ಆರೋಗ್ಯಕ್ಕೆ ಇದರಿಂದಾಗುವ ಹಾನಿಯ ಕುರಿತು ತಿಳಿದು ಮತ್ತೆ ಮೈದಾ ಬಳಸುವುದು ಉತ್ತಮ. ಮೈದಾ ಹೇಗೆ ತಯಾರಾಗುತ್ತದೆ? ಮೈದಾ ಹಿಟ್ಟನ್ನು ಗೋಧಿಯ ಒಳಗಿನ ಬಿಳಿ ಭಾಗವನ್ನು (Endosperm) ಮಾತ್ರ ಬಳಸಿಕೊಂಡು ತಯಾರಿಸಲಾಗುತ್ತದೆ. ಗೋಧಿ ಕಾಳಿನ ನಾರುಯುಕ್ತ […]
ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ ಮೂಡಿಸಲು ಪರಿಣಾಮಕಾರಿ-ಡಾ. ಎಚ್. ಎಸ್.ಬಲ್ಲಾಳ್

ಉಡುಪಿ: ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ನಾಗಮಂಡಲ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಮಾಹೆ ವಿವಿ ಸಹ ಕುಲಾಧಿಪತಿ ಡಾ. ಎಚ್. ಎಸ್.ಬಲ್ಲಾಳ್ ಹೇಳಿದರು. ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೈವಭಕ್ತಿ, ಶಿಕ್ಷಣ ಹಾಗೂ ಆರೋಗ್ಯ ಎಲ್ಲರಿಗೂ ಆವಶ್ಯಕ. ಈ ನಿಟ್ಟಿನಲ್ಲಿ ಡಾ. ಜಿ. ಶಂಕರ್ ಅವರು ಬಡ ರೋಗಿಗಳಿಗೆ ಸಹಾಯಹಸ್ತ ಚಾಚುವ ಬಹುದೊಡ್ಡ ಕಾರ್ಯಗಳನ್ನು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. […]
ಹೂಗಳ ಮಧುರ ರಹಸ್ಯ: ಜೇನುತುಪ್ಪ ಹೇಗೆ ಸಿದ್ಧವಾಗುತ್ತದೆ ಬಲ್ಲಿರಾ? ಆಸಕ್ತಿಕರ ಮಾಹಿತಿ ಇಲ್ಲಿದೆ

ಆಹಾ! ಜೇನುತುಪ್ಪ ಎನ್ನುತ್ತಿದ್ದಂತೇ ಬಾಯಲ್ಲಿ ನೀರೂರುತ್ತದೆ. ತಿಳಿ ಹಳದಿ, ಚಿನ್ನದ ಬಣ್ಣದ ಜೇನುತುಪ್ಪ ತಿನ್ನಲು ಅದೆಷ್ಟು ರುಚಿಯೋ ಹಾಗೇ ಅಷ್ಟೇ ಆರೋಗ್ಯಕರವೂ ಹೌದು. ಆದರೆ ಈ ಜೇನುತುಪ್ಪ ಹೇಗೆ ತಯಾರಾಗುತ್ತದೆ ಅನ್ನುವುದರ ಬಗ್ಗೆ ಹಲವರಿಗೆ ಕುತೂಹಲವಿರುತ್ತದೆ. ಅದನ್ನೀಗ ತಿಳಿದುಕೊಳ್ಳೋಣ. ಜೇನುತುಪ್ಪ ವನ್ನು ಜೇನುನೊಣಗಳು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ತಯಾರಿಸುತ್ತವೆ. ಹೂವಿನ ಮಕರಂದ ಹೀರುವ ಜೇನುಹುಳಗಳು ಅದನ್ನು ತುಪ್ಪವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಇಲ್ಲಿದೆ. ಪ್ರಕೃತಿಯಿಂದ ದೊರೆಯುವ ಪ್ರಕೃತಿ ಸಹಜವಾದ ಅಧಿಕ ಪೋಷಕಾಂಶವುಳ್ಳ ಜೇನುತುಪ್ಪ ತುಂಬಾ ಆರೋಗ್ಯಕರ. ಜೇನುನೊಣಗಳು ಇದನ್ನು ತಮ್ಮ […]