ಎ.10 -14: ಅಜೆಕಾರು ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ, ಪದವಿ ಪೂರ್ವ ಉದ್ಘಾಟನೆ.

ಎ.10 ರಂದು ಮಹಾಗಣಪತಿ ವಿಗ್ರಹದ ಭವ್ಯ ಮೆರವಣಿಗೆ, ಎ.12ಕ್ಕೆ ಪ್ರತಿಷ್ಠಾ ಮಹೋತ್ಸವ. ಅಜೆಕಾರು: ಅಜೆಕಾರು ಪದ್ಮ ನಗರದಲ್ಲಿ ಅಜೆಕಾರು ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ, ಪ. ಪೂ. ಕಾಲೇಜುವಿನ ಉದ್ಘಾಟನೆ ಹಾಗೂ ಪದ್ಮ ನಗರದಲ್ಲಿ ನಿರ್ಮಾಣಗೊಂಡ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ಎ.10 ರಿಂದ ಎ.14 ರ ವರೆಗೆ ನಡೆಯಲಿದೆ. ಎ.10ರಂದು ಕುಕ್ಕುಂದೂರು ಗಣಿತನಗರ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಪ್ರತಿಷ್ಠಾಪನೆಗೊಳ್ಳಲಿರುವ ದೇವರ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 5 ರಿಂದ ಅಜೆಕಾರು ರಾಮಮಂದಿರದಿಂದ […]