ತ್ರಿಶಾ ಸಂಸ್ಥೆ: ದಾಖಲಾತಿ ಆರಂಭ ಬಿಕಾಂ ಮತ್ತು ಬಿಸಿಎ ಅಧ್ಯಯನಕ್ಕೆ ವಿದ್ಯಾರ್ಥಿಗಳ ಮೊದಲ ಆಯ್ಕೆ ತ್ರಿಶಾ ಸಂಸ್ಥೆ.

ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಪೂರಕವಾಗಿ ರೂಪುಗೊಂಡಿರುವ ಈ ಸಂಸ್ತೆಯಲ್ಲಿ ಕಾಲೇಜು ದಾಖಲಾತಿ ಆರಂಭಗೊಂಡಿದೆ. 1998ರಲ್ಲಿ ಉಡುಪಿಯಲ್ಲಿ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಕೇವಲ 5 ವಿದ್ಯಾರ್ಥಿಗಳಿಂದ ಆರಂಭವಾದ ತ್ರಿಶಾ ಕ್ಲಾಸ್ ಕೋಚಿಂಗ್‌ ಸಂಸ್ಥೆ ತನ್ನ ಅತ್ಯುತ್ತಮ ತರಬೇತಿಯಿಂದ ರಾಷ್ಟ್ರೀಯ ಮಟ್ಟದ ರ್ಯಾಂಕ್‌ಗಳನ್ನು ಗಳಿಸಿಕೊಂಡು ಉಡುಪಿಯ ಜೊತೆಗೆ ಮಂಗಳೂರು, ಬೆಂಗಳೂರಿನಲ್ಲೂ ಕೂಡ ತನ್ನ ಅಂಗ ಸಂಸ್ಥೆಗಳನ್ನು ವೃದ್ದಿಸಿಕೊಂಡಿತು. ರಾಜ್ಯದ ಬೇರೆ ಬೇರೆ ಭಾಗದ ವಿಷಯದ ತಜ್ಞರನ್ನು ಕರೆಸಿ ತರಬೇತಿ ನೀಡುತ್ತಿರುವ ತ್ರಿಶಾ ಸಂಸ್ಥೆ ಸುಮಾರು 80,000ಕ್ಕೂ ಹೆಚ್ವಿನ ವಿದ್ಯಾರ್ಥಿಗಳ […]

ಏ.14 ರಂದು ಅಜೆಕಾರಿನಲ್ಲಿ “ಜ್ಞಾನಸುಧಾ ಜ್ಞಾನ ದೇಗುಲ” ಅದ್ಧೂರಿ ಉದ್ಘಾಟನೆ

ಕಾರ್ಕಳ: ಅಜೆಕಾರು ಪದ್ಮಗೋಪಾಲ್ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರು ತಮ್ಮ ತಾಯಿ ಪದ್ಮಾಶೆಟ್ಟಿಯವರ ನೂರನೇ ಜನ್ಮದಿನದ ಅಂಗವಾಗಿ ಹಾಗೂ ತಂದೆ-ತಾಯಿಯ ಕನಸನ್ನು ನನಸು ಮಾಡುವ ಉದ್ದೇಶದಿಂದ ಹುಟ್ಟೂರು ಅಜೆಕಾರಿನಲ್ಲಿ ಈ ಶಿಕ್ಷಣ ಕೇಂದ್ರವನ್ನು ನಿರ್ಮಿಸಿದ್ದು ಆ ಕೇಂದ್ರಕ್ಕೆ “ಜ್ಞಾನಸುಧಾಜ್ಞಾನದೇಗುಲ” ಎಂದು ಹೆಸರಿಡಲಾಗಿದೆ. ಸಮಾಜಕ್ಕೆ ಮಾದರಿ ಉಡುಗೊರೆಯಾಗಿ ನೀಡಲಾಗುತ್ತಿರುವ ಈ ‘ಜ್ಞಾನಸುಧಾ ಜ್ಞಾನ ದೇಗುಲ’ವು ಏಪ್ರಿಲ್ 14ರಂದು ಸಂಜೆ 5.30 ಕ್ಕೆ ಅಜೆಕಾರಿನ ಪದ್ಮ ನಗರದಲ್ಲಿ ಉದ್ಘಾಟನೆಗೊಳ್ಳಲಿದೆ. ಅಧ್ಯಕ್ಷತೆಯನ್ನು ಕಾರ್ಕಳ ಶಾಸಕರಾದ ವಿ ಸುನಿಲ್ […]

ಪಿಯುಸಿ ನಂತರ ಮುಂದೇನು? ಇಲ್ಲಿದೆ ಹಲವಾರು ಹೊಸ ಹೊಸ ಇಂಟೆರೆಸ್ಟಿಂಗ್ ಕೋರ್ಸ್ ಗಳು

ಇನ್ನೇನು ಸದ್ಯದಲ್ಲೇ ಪಿಯುಸಿ ಫಲಿತಾಂಶ ಅನೌನ್ಸ್ ಆಗ್ಲಿಕ್ಕಿದೆ. ತಮ್ಮ ಭವಿಷ್ಯದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಚಿಂತೆ ಇದ್ದೇ ಇದೆ. ಕೆಲವರು ಪಿಯುಸಿ ಮುಗಿದ ನಂತರ ಮುಂದೆ ಮಾಡಬೇಕಾದ ಕೋರ್ಸ್ ಬಗ್ಗೆ ತಮ್ಮ ಭವಿಷ್ಯದ ಉದ್ಯೋಗದ ಬಗ್ಗೆ ಸ್ಪಷ್ಟವಾದ ಚಿತ್ರಣ ಹೊಂದಿದ್ದರೆ ಇನ್ನೂ ಕೆಲವರು ರಿಸಲ್ಟ್ ಬರಲಿ ಮಾರ್ಕ್ಸ್ ನ ಆಧಾರದ ಮೇಲೆ ನಿರ್ಧರಿಸೋಣ ಎಂಬ ಮನೋಭಾವದಲ್ಲಿರುತ್ತಾರೆ. ಇಂತಹವರಿಗೆ ದಾರಿ ತೋರಿಸಲು, ಮಾರ್ಗದರ್ಶನ ನೀಡಲು ಇಲ್ಲಿದೆ ಹಲವು ಕೋರ್ಸ್ ಗಳ ಮಾಹಿತಿ. ವಿಜ್ಞಾನ ವಿಷಯದಲ್ಲಿ ಮುಂದುವರೆಯುವ ಇಚ್ಛೆ […]

ನೀವೂ ತಿರುಪತಿಗೆ ಹೋಗುವ ಪ್ಲಾನ್ ಮಾಡ್ತಿದೀರಾ? ಹಾಗಾದ್ರೆ ಈ ವಿಷಯ ತಿಳಿದಿರಲೇಬೇಕು- ದರ್ಶನದ ಅವಧಿ ಇಲ್ಲಿದೆ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗೋದು ಭಗವದ್ಭಕ್ತರಿಗೆ ಪುಣ್ಯದ ಕೆಲಸ. ಜೀವಮಾನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಆಸೆ ಇರುತ್ತದೆ. ಅದರೊಂದಿಗೆ ಪ್ರತಿವರ್ಷವೂ ಇಲ್ಲಿಗೆ ಭೇಟಿ ನೀಡುವ ಭಕ್ತರೂ ಹಲವರಿರುತ್ತಾರೆ. ಇದೀಗ ಬೇಸಗೆ ರಜೆ ಪ್ರಾರಂಭವಾಗಿದೆ. ಹಾಗಾಗಿ ತಿರುಪತಿಗೆ ಹೋಗುವವರ ಸಂಖ್ಯೆಯೂ ದೊಡ್ಡದಿದೆ. ನೀವೂ ತಿರುಪತಿಗೆ ಹೋಗಲು ಪ್ಲಾನ್ ಮಾಡ್ತಿದೀರಾದ್ರೆ ಈ ವಿಷಯ ನಿಮ್ಮ ಗಮನದಲ್ಲಿರಲಿ ಏ.5 ಭಾನುವಾರ ಒಂದೇ ದಿನದಲ್ಲಿ  83,271 ಭಕ್ತರು ತಿಮ್ಮಪ್ಪನ ದರ್ಶನ ಮಾಡಿರುತ್ತಾರೆ. 25,018 ಜನರು ಕೆಲ ಸೇವೆಗಳಲ್ಲೂ ಭಾಗವಹಿಸಿದ್ರು. ಹೋದ […]

ನಿಮ್ಮ ಮರಣದ ನಂತರವೂ ನಿಮ್ಮ ಕುಟುಂಬದವರು ನೆಮ್ಮದಿಯಿಂದ ಜೀವನ ನಡೆಸಬೇಕೇ? ಪೋಸ್ಟ್ ಆಫೀಸ್ ನ ಈ ಸ್ಕೀಮ್ ಮಾಡಿಸಿ- ಇಲ್ಲದಿದ್ದರೆ ಖಂಡಿತವಾಗಿಯೂ ಪರಿತಪಿಸುತ್ತೀರಿ

ಪೋಸ್ಟ್ ಆಫೀಸ್ ಅಂತಂದ್ರೆ ಕೇವಲ ಮನೆ ಮನೆಗೆ ಅಂಚೆ, ಮನಿ ಆರ್ಡರ್ ಹಂಚುವ ಆಫೀಸ್ ಎಂಬ ಮನೋಭಾವ ಇನ್ನೂ ಹಲವರಲ್ಲಿದೆ. ಆದರೆ ಇಲ್ಲಿರುವಂತಹಾ ಲಾಭದಾಯಕ ಹಣದ ಉಳಿತಾಯ ಯೋಜನೆಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಅದರಲ್ಲೂ ನಿಮ್ಮ ಮರಣಾ ನಂತರವೂ ನಿಮ್ಮ ಕುಟುಂಬದವರಿಗೆ ಹಣ ಸಿಗುವಂತಹಾ ಈ ಇನ್ಸೂರೆನ್ಸ್ ಪ್ಲಾನ್ ಬಗ್ಗೆ ನೀವು ಚಿಂತಿಸಲೇಬೇಕು. ನಿಮ್ಮ ಕುಟುಂಬದಲ್ಲಿ ನೀವೊಬ್ಬರೇ ದುಡಿಯುವವರಾಗಿದ್ರೆ ಖಂಡಿತಾ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ನೀವು ಮಾಡಿಸಲೇಬೇಕು. ಏನಿದು ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಗ್ರಾಮೀಣ ಜನತೆಗಾಗಿಯೇ, ಅಂಚೆ […]