ಉಡುಪಿ: ಎ.11ರಂದು ಕಟಪಾಡಿ ಎಸ್‌ವಿಎಸ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ “ಶ್ರೀನಿವಾಸ ಕಲ್ಯಾಣೋತ್ಸವ”

ಉಡುಪಿ: ಕಟಪಾಡಿ ಎಸ್‌ವಿಎಸ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಏ. 11ರಂದು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ತಿರುಪತಿಯಿಂದಲೇ ದೇವರ ವಿಗ್ರಹ ತಂದು, ತಿರುಪತಿ ತಿರುಮಲ ದೇವಸ್ಥಾನ ಸಮಿತಿಯ ಪ್ರಧಾನ ಅರ್ಚಕರಿಂದಲೇ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನ ಜರಗಲಿವೆ. ಮಧ್ಯಾಹ್ನ 3.30ಕ್ಕೆ ಕಟಪಾಡಿ ಪೇಟೆಯಲ್ಲಿ ಶ್ರೀನಿವಾಸ ದೇವರನ್ನು ಸ್ವಾಗತಿಸಿ, ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪದ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು’ ಎಂದರು. ಕೆ. ಕೃಷ್ಣಮೋಹನ್ ಪೈ ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ವತಿಯಿಂದ ಕಟಪಾಡಿ […]
ಉಡುಪಿ: ಬೆಳ್ಳಂಪಳ್ಳಿಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಅದ್ದೂರಿಯಾಗಿ ಉದ್ಘಾಟನೆಗೊಂಡ ‘ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ’ಯ ಶಾಖೆ

ಉಡುಪಿ: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಬೆಳ್ಳಂಪಳ್ಳಿ ಶಾಖೆಯು ಹವಾನಿಯಂತ್ರಿತವಾಗಿ ನವೀಕೃತಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭ ಎ. 8 ರಂದು ಅದ್ಧೂರಿಯಾಗಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿ, ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಾರ್ವಜನಿಕ ರಂಗಕ್ಕೆ ಅತ್ಯದ್ಬುತವಾದ ಸೇವೆಯನ್ನು ನೀಡಿದೆ. ಪದಾಧಿಕಾರಿಗಳು, ಸಿಬಂಧಿಗಳು, ಗ್ರಾಹಕರು ಎಲ್ಲರೂ ಸೇರಿ ಈ ಸಂಸ್ಥೆಯನ್ನು ಬೆಳೆಸಿದ್ದಾರೆ. ಎಲ್ಲರ […]
ನಾಳೆ(ಎ.9) ಪ್ರಕಟವಾಗಲಿದೆ ಪಿಯುಸಿ ಫಲಿತಾಂಶ !

ಬೆಂಗಳೂರು, : ದ್ವಿತೀಯ ಪಿಯುಸಿ ಫಲಿತಾಂಶ ನಾಳೆ, ಏಪ್ರಿಲ್ 9ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಹಿನ್ನೆಲೆ, ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಧ್ಯಾಹ್ನ ಸುಮಾರು 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಗತ್ಯವಿರುವ ಎಲ್ಲಾ ತಾಂತ್ರಿಕ ಸಿದ್ಧತೆಗಳನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ. ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯದ 1,217 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ […]
ಬ್ರಹ್ಮಾವರದ ಎಸ್ ಎಂ ಎಸ್(SMS) ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ.

ಉಡುಪಿ: ಬ್ರಹ್ಮಾವರದ ಜನಪ್ರಿಯ ಸೇಂಟ್ ಮೇರಿಸ್ ಸಿರಿಯನ್ ಪಿಯು ಕಾಲೇಜು, ಎಲ್ಲರೂ ಪ್ರೀತಿಯಿಂದ SMS ಪಿಯು ಕಾಲೇಜು ಎಂದು ಕರೆಯುವ ಸಂಸ್ಥೆಯಿದು. 1953 ರಲ್ಲಿ ಬ್ರಹ್ಮಾವರ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಗ್ರಾಮೀಣ ಜನರಿಗೆ ಪ್ರೌಢಶಾಲಾ ಶಿಕ್ಷಣವನ್ನು ಒದಗಿಸಲು ಸ್ಥಾಪಿಸಲಾಯಿತು. ಇದನ್ನು SMS ಕ್ಯಾಥೆಡ್ರಲ್ ಬ್ರಹ್ಮಾವರಕ್ಕೆ ಸೇರಿದ ಆರ್ಥೊಡಾಕ್ಸ್ ಸಿರಿಯನ್ ಕ್ಯಾಥೋಲಿಕ್ ಎಜುಕೇಷನಲ್ ಸೊಸೈಟಿ ನಿರ್ವಹಿಸುತ್ತದೆ. ವಿಕಾರ್ ಫಾದರ್ RFZ ನೊರೊನ್ಹಾ ಅವರ ನೇತೃತ್ವದಲ್ಲಿ SMS ಕ್ಯಾಥೆಡ್ರಲ್ ಎರಡು ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದೆ, ಅವುಗಳೆಂದರೆ ಬ್ರಹ್ಮಾವರದಲ್ಲಿ (1916) ಮತ್ತು […]
ಮೂಡುಅಲೆವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮೋಹನ ತಂತ್ರಿ ನಿಧನ

ಉಡುಪಿ: ಮೂಡು ಅಲೆವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮೋಹನ ತಂತ್ರಿ (82) ಬುಧವಾರ ನಿಧನರಾದರು. ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದಲ್ಲಿಯೂ ಹಲವು ವರ್ಷಗಳಿಂದ ಮುಖ್ಯ ತಂತ್ರಿಗಳಾಗಿ ವೈದಿಕ, ಧಾರ್ಮಿಕ ಆಚರಣೆಗಳಿಗೆ ಮಾರ್ಗದರ್ಶಕರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.