ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ, ಮಾರ್ಚ್ 31: ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಬೈಲೂರು ಎನ್.ಜಿ.ಒ ಕಾಲೋನಿ ನಿವಾಸಿ ಬಿ ಭಾಸ್ಕರ್ ನಾಯ್ಕ್ (65) ಎಂಬ ವ್ಯಕ್ತಿಯು 2023 ರ ಜನವರಿ ಮಾಹೆಯಲ್ಲಿ ಮನೆ ಬಿಟ್ಟು ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.5 ಅಡಿ 3 ಇಂಚು ಎತ್ತರ, ಸಾಧಾರಣ ಶರೀರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು […]

ಸೆನ್ಶಿಯಾದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು ಚಾಂಪಿಯನ್

ಕಾರ್ಕಳ: ಮೂಡಬಿದಿರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಇ) ಆಯೋಜಿಸಿದ್ದ ‘ಸೆನ್ಶಿಯಾ 2026’ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಅತಿ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಚಾಂಪಿಯನ್ ಶಿಪ್ ನ್ನು ತನ್ನದಾಗಿಸಿಕೊಂಡಿದೆ.

ಎಪ್ರಿಲ್ 6 ರಿಂದ 18ವರೆಗೆ ಮಣಿಪಾಲದ ಶ್ರೀ ಶಾರದಾ ಇನ್ಸ್ಟಿಟ್ಯೂಟ್‍ನಲ್ಲಿ ಬೇಸಿಗೆ ಶಿಬಿರ.

ಮಣಿಪಾಲ: ಇತ್ತೀಚಿನ ಟಿ.ವಿ, ಮೊಬೈಲ್ ಹಾಗೂ ಇಂಟರ್‍ನೆಟ್ ಆಕರ್ಷಣೆಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮಕ್ಕಳಲ್ಲಿ ಶಾರೀರಿಕ ಶ್ರಮದ ಬಗ್ಗೆ ಅರಿವೇ ಇಲ್ಲದಂತಾಗಿದೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿ ಮಣಿಪಾಲದ ಶ್ರೀ ಶಾರದಾ ಇನ್ಸ್ಟಿಟ್ಯೂಟ್‍ನಲ್ಲಿ ದಿನಾಂಕ ಎಪ್ರಿಲ್ 6 ರಿಂದ ಎಪ್ರಿಲ್ 18ವರೆಗೆ “ಚಿಣ್ಣರ ಜಾಗರ” ಬೇಸಿಗೆ ಶಿಬಿರವನ್ನು 7 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಆಯೋಜಿಸಲಾಗಿದೆ.ಈ ಶಿಬಿರದಲ್ಲಿ ಕಥೆ, ಪ್ರಹಸನ, ಡಾನ್ಸ್, ಮುಖವಾಡ ಹಾಗೂ ಕ್ರಾಫ್ಟ್ ತಯಾರಿಕೆ, ಚಿತ್ರಕಲೆ, ಆಟೋಟ, ರಂಗೋಲಿ, ಯೋಗ, […]

ಉಡುಪಿ: ಏ.05 ರಿಂದ ಮೇ.05 ರವರೆಗೆ ಲಿಟ್ಲ್ ಏಂಜಲ್ಸ್ ನಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮ

ಬ್ರಹ್ಮಗಿರಿ: ಕಿಡ್ಸ್ ಐಲ್ಸ್ ಪ್ಲೇ ಸ್ಕೂಲ್, ಬ್ರಹ್ಮಗಿರಿಯಿಂದ ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.ಬೇಸಿಗೆ ರಜೆಯ ಪ್ರಯುಕ್ತ ಮಕ್ಕಳಿಗಾಗಿ ಈಜು, ಕರಾಟೆ, ಚಿತ್ರ ಬಿಡಿಸುವುದು, ನೃತ್ಯ, ಗಾಯನ, ಒಳಾಂಗಣ ಆಟಗಳು, ಹೊರಾಂಗಣ ಆಟಗಳು ಆಯೋಜಿಸಿದ್ದು,ಆಹಾರ ತಿಂಡಿಗಳು ಮತ್ತು ಸಾರಿಗೆ ಸೌಲಭ್ಯಗಳು ಲಭ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: 9480641998, 9483301698, 8748058569, 9901866998ಸ್ಥಳ : ಫಾರ್ಚೂನ್ ಕ್ಯಾಂಪಸ್, ಬ್ರಹ್ಮಗಿರಿ, ಉಡುಪಿ.

ಪ್ರಿಸ್ಮ್ ಡಾನ್ಸ್ ಅಂಡ್ ಫಿಟ್ನೆಸ್ ಸ್ಟುಡಿಯೋ ವತಿಯಿಂದ ಕರಾಟೆ ಕ್ಲಾಸ್ ಆರಂಭ

ಉಡುಪಿ: ಮಣಿಪಾಲದ ಪ್ರಿಸ್ಮ್ ಡಾನ್ಸ್ ಅಂಡ್ ಫಿಟ್ನೆಸ್ ಸ್ಟುಡಿಯೋ ವತಿಯಿಂದ ಕರಾಟೆ ಕ್ಲಾಸ್ ಆರಂಭ.ಪ್ರಾರಂಭ ದಿನಾಂಕ: 12-04-2026ತಿಂಗಳ ಶುಲ್ಕ: 500ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: : 8197603640