ಕುಂದಾಪುರ: ಕಾರು – ಕ್ಯಾಂಟರ್ ನಡುವೆ ಭೀಕರ ಅಪಘಾತ; ಇಬ್ಬರು ಮೃತ್ಯು, ನಾಲ್ವರಿಗೆ ಗಾಯ.

ಕುಂದಾಪುರ: ಕಾರು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದಿದೆ. ಮೃತರು ಮಮತಾ (36), ಅವರ ಪುತ್ರಿ ದೃತಿಕಾ (14). ಮಮತಾ ಅವರ ಪತಿ ನೆಲಮಂಗಲ ನಿವಾಸಿ ರಾಘು, ಪುತ್ರಿ ಜಾಹ್ನವಿ, ಕಾರಿನಲ್ಲಿದ್ದ ಚಾರ್ವಿ, ಕಿರಣ್ ಅವರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ಕಾರಿನಲ್ಲಿ ಬೆಂಗಳೂರಿನಿಂದ ಉಡುಪಿಗೆ ಆಗಮಿಸಿ ಗೋಕರ್ಣದತ್ತ ಸಾಗುತ್ತಿದ್ದಾಗ ಈ ದುರ್ಘಟನೆ […]
ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಅರೆಸ್ಟ್ – ಈತ ಶೀರೂರು ಕಳ್ಳತನ ಪ್ರಕರಣದಲ್ಲೂ ಭಾಗಿ.!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.ಪೌಜಾನ್ ಅಹ್ಮದ್ ಬಂಧಿತ ಆರೋಪಿ. ಈತ ಶಿರೂರು ಗ್ರಾಮದ ಕೋಣಮಕ್ಕಿ ಎಂಬಲ್ಲಿ ಪಾತಿಮಾ ಎಂಬವರ ಮನೆಯಲ್ಲಿ ಕಳ್ಳತನ ಯತ್ನ ನಡೆಸಿದ್ದನು. ಪಾತಿಮಾ ಅವರು ಮಲಗಿದ್ದ ವೇಳೆ, ಮನೆಯ ಹಿಂಬಾಗಿಲನ್ನು ಒಡೆದು ಒಳನುಗ್ಗಿ, ಮನೆಯಲ್ಲಿದ್ದ ಗೋದ್ರೇಜ್ ಅಲಮಾರಿಯನ್ನು ತೆರೆದು ಹುಡುಕಾಡುತ್ತಿದ್ದನು. ಈ ವೇಳೆ ಪಾತಿಮಾ ಅವರು ಎಚ್ಚರಗೊಂಡು ಬೊಬ್ಬೆ ಹಾಕಿದಾಗ, ಆರೋಪಿ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಈ ಕುರಿತು ಪಾತಿಮಾ […]
ಸದ್ದು ಮಾಡುತ್ತಲೇ ಇದೆ ಯಕ್ಷಗಾನದ ಸಿಳ್ಳೆ ಪ್ರಕರಣ: ಕಲಾವಿದನ ನಡೆಗೆ ಹೆಚ್ಚಿದ ಆಕ್ರೋಶ, ಯಕ್ಷಪ್ರಿಯರು ಮತ್ತಷ್ಟು ಗರಂ

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡತೊಡಗಿದ ಯಕ್ಷಗಾನ ಸಿಳ್ಳೆ ಪ್ರಕರಣ, ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೀಡಾಗುತ್ತಿರುವ ಹಾಟ್ ಟಾಪಿಕ್ ಆಗಿದೆ. ಯಕ್ಷಗಾನ ಬಯಲಾಟದಲ್ಲಿ ಕೆಲವರು ಪ್ರೇಕ್ಷಕರು ಶಿಳ್ಳೆ ಹೊಡೆದಾಗ ಕೃಷ್ಣ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಕೋಪಗೊಂಡು ರಂಗಸ್ಥಳದಿಂದಲೇ ತರಾಟೆಗೆ ತೆಗೆದುಕೊಂಡು ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ, ದೊಂಬರಾಟ ಅಲ್ಲ ಇದು. ನನಗೆ ದಾಕ್ಷಿಣ್ಯ ಇಲ್ಲ, ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ ನಿಮಗೆ ನೋಡಲಾಗದಿದ್ದರೆ ಬನ್ಸ್ ತಿಂದು ಹೋಗಿ […]
ಮಣಿಪಾಲದ : MSDC ಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಸಮರ್ ಕ್ಯಾಂಪ್; ಆತ್ಮ ವಿಶ್ವಾಸ ಹೆಚ್ಚಿಸುವ ಈ ಶಿಬಿರದಲ್ಲಿ ನೀವೂ ಭಾಗವಹಿಸಿ

ಮಣಿಪಾಲ: MSDC (Manipal Skill Development Center) ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಸಮರ್ ಕ್ಯಾಂಪ್ ನ್ನು ಏಪ್ರಿಲ್ 20, 2026 ರಿಂದ ಏಪ್ರಿಲ್ 30 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ವರೆಗೆ ಆಯೋಜಿಸಲಾಗಿದೆ. 10 ದಿನಗಳ ಈ ಶಿಬಿರದಲ್ಲಿ ಮನರಂಜನೆ, ಕೌಶಲ್ಯಾಭಿವೃದ್ಧಿ ಹಾಗೂ ಹೊಸ ವಿಷಯಗಳ ಅನ್ವೇಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಶಿಬಿರ ಉತ್ತಮ ಅವಕಾಶವಾಗಿದ್ದು ಆಸಕ್ತರು ಮಿಸ್ ಮಾಡ್ಕೊಬೇಡಿ ಈ ಕ್ಯಾಂಪ್ ನ ವಿಶೇಷ:• 10 […]
ಪಕ್ಷದ ಶಾಸಕರ ಅವಹೇಳನ ಸಹಿಸಲಾಗದು – ಜನ ಸಾಮಾನ್ಯರ ಸಮಸ್ಯೆಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಪಂದಿಸಲಿ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ.

ಉಡುಪಿ: ವ್ಯಕ್ತಿಗಿಂತ ಪಕ್ಷ ಮೇಲು, ಪಕ್ಷಕ್ಕಿಂತ ದೇಶ ಮೇಲು’ ಎಂಬ ಉದಾತ್ತ ಚಿಂತನೆಯುಳ್ಳ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಓರ್ವ ಸಾಮಾನ್ಯ ಕಾರ್ಯಕರ್ತನೂ ಪಕ್ಷ ನಿಷ್ಠೆ ಹಾಗೂ ಬದ್ಧತೆಯಿಂದ ಹಂತ ಹಂತವಾಗಿ ಎತ್ತರಕ್ಕೇರುವ ಅವಕಾಶಗಳು ಪಕ್ಷದ ಚೌಕಟ್ಟಿನಲ್ಲಿದೆ. ಈ ನಿಟ್ಟಿನಲ್ಲಿ ಕೆಲವು ಪ್ರಚಲಿತ ವಿದ್ಯಮಾನಗಳಲ್ಲಿ ನಡೆಯುತ್ತಿರುವ ನಮ್ಮ ಪಕ್ಷದ ಶಾಸಕರ ಅವಹೇಳನವನ್ನು ಸಹಿಸಲಾಗದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಶಾಸಕರುಗಳ ಬಗ್ಗೆ ಪಕ್ಷ ಹಾಗೂ […]