ಮಣಿಪಾಲ: ರಸ್ತೆ ಕಾಂಕ್ರೀಟೀಕರಣ ಕಾಮಗಾರಿ; ವಾಹನ ಸಂಚಾರ ನಿರ್ಬಂಧ

ಉಡುಪಿ, ಮಾ.27: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ ವಾರ್ಡಿನ ಇಂಡಸ್ಟ್ರಿಯಲ್ ಏರಿಯಾ ಕಲ್ಯಾಣಿ ಆರ್.ಎಂ.ಸಿಯಿಂದ ಕೆ.ಇ.ಬಿ ಕಚೇರಿವರೆಗಿನ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಹಾಗೂ ಕಾಮಗಾರಿ ಪೂರ್ಣ ಗೊಳ್ಳುವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ಜಿಲ್ಲೆಯ ಇಬ್ಬರು ಆರೋಪಿಗಳು ಗಡಿಪಾರು

ಉಡುಪಿ: ಜಿಲ್ಲೆಯ ಇಬ್ಬರು ಆರೋಪಿಗಳಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ.ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ನೌಫಿಲ್ ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಹಾನ್ ಪೂಜಾರಿ ಇವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮಾ.26 ರಂದು ಗಡಿಪಾರು ಆದೇಶ ಜಾರಿಗೊಳಿಸಿದ್ದಾರೆ.ಶಿರ್ವ ಠಾಣಾ ವ್ಯಾಪ್ತಿಯ ಸೂರ್ಯಗುಡ್ಡೆ, ಕಳತ್ತೂರು ಗ್ರಾಮ ನಿವಾಸಿ ಮಹಮ್ಮದ್ ನೌಫಿಲ್ ವಿರುದ್ಧ ಐದು ಪ್ರಕರಣಗಳು ದಾಖಲಾಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಹಾಗೆ, ಮಲ್ಪೆ ಠಾಣಾ […]

ಕೊಡೇರಿ ಶ್ರೀ ರಾಮ ಭಜನಮಂದಿರ: ವೈಭವದ ಶ್ರೀರಾಮ ತೊಟ್ಟಿಲೋತ್ಸವ ಸಂಪನ್ನ.

ನಾಗೂರು: ಕೊಡೇರಿ ಹಕ್ರೆಮಠ ಶ್ರೀ ರಾಮ ಭಜನ ಮಂದರಿದಲ್ಲಿ ರಾಮ ನವಮಿಯ ಅಂಗವಾಗಿ ವರ್ಷಂಪ್ರತಿ ನಡೆಯುವ ಶ್ರೀ ರಾಮ ತೊಟ್ಟಿಲೋತ್ಸವವು ಶುಕ್ರವಾರ ಮಂದಿರಲ್ಲಿ ಅದ್ದೂರಿಯಾಗಿ ನಡೆಯಿತು.ಬೆಳಗ್ಗೆ ಉದಯಕಾಲದ ಪೂಜೆಯೊಂದಿಗೆ ಏಕಹ ಭಜನೆ ಆರಂಭಗೊಂಡು, ತೊಟ್ಟಿಲೋತ್ಸವದ ಪ್ರಯುಕ್ತ ಬಾಲರಾಮನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ತೊಟ್ಟಿಲೊಳಗೆ ಇಟ್ಟು ಮಾತೆಯರ ಒಡಗೂಡಿ ತೊಟ್ಟಿಲು ತೂಗುವ ಶಾಸ್ತ್ರ ನಡೆಯಿತು. ಅನಂತರ ತುಲಾಭಾರ ಸೇವೆ, ಅನ್ನಸಂತರ್ಪಣೆ ಜರಗಿತು. ಸಂಜೆ ದೇವರ ಪುರಮೆರವಣಿಗೆ ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ವರೆಗೂ ಸಾಗಿ ಮಂದಿರಕ್ಕೆ ವಾಪಸ್ ಆಗಿದೆ. ಊರ, […]

ಉಡುಪಿ: ಮಾರ್ಚ್ 28-29ರಂದು ಉಪ ನೋಂದಣಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಣೆ

ಉಡುಪಿ: ರಾಜ್ಯದ ಎಲ್ಲಾ ಉಪ ನೊಂದಣಿ ಕಚೇರಿಗಳು ಮಾರ್ಚ್ 28 ಮತ್ತು 29 ರಂದು ಕರ್ತವ್ಯ ನಿರ್ವಹಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಗಳು ಶನಿವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸಲಿದೆ ಎಂದು ಉಡುಪಿ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿದ `ಧುರಂಧರ್ 2′: ಕಡಿಮೆ ಅವಧಿಯಲ್ಲಿ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಸಿನಿಮಾ.!

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ `ಧುರಂಧರ್ 2′ ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿದೆ. ಯಶಸ್ವಿ ಪ್ರದರ್ಶನದೊಂದಿಗೆ ಒಂದರ ನಂತರ ಒಂದರಂತೆ ದಾಖಲೆಗಳನ್ನು ಮುರಿಯುತ್ತಿದೆ. ವಿಶ್ವದಾದ್ಯಂತ ಒಟ್ಟು 1,006 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಚಿತ್ರವಾಗಿ ಗುರುತಿಸಿಕೊಂಡಿದೆ. ಆರು ದಿನಗಳಲ್ಲಿ 1,000 ಕೋಟಿ ರೂ.ಗಳ ಗಡಿ ದಾಟಿದ್ದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪಾ 2′ ಮೊದಲ […]