ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ.

ಉಡುಪಿ: ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ಮಾರ್ಪಡಿಸಿ ಸರಕಾರ ಆದೇಶ ಹೊರಡಿಸಿದೆ.ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಅಧಿಸೂಚನೆ-1 & 11ರ ಕೋಷ್ಟಕದ ಕ್ರಮ ಸಂಖ್ಯೆ (5) ರಲ್ಲಿ ಈ ಬದಲಾವಣೆ ಮಾಡಲಾಗಿದೆ. ಈ ರಜೆಯನ್ನು ನೆಗೋಷಿಯಬಲ್ ಇನ್ನು ಮೆಂಟ್ ಆಕ್ಟ್, 1881 (1881ರ ಅಧಿನಿಯಮ ಸಂಖ್ಯೆ:26) ರನ್ವಯ ಸಹ ಘೋಷಿಸಿದೆ.

ಮಣಿಪಾಲ: ಮಾ.27ರಂದು MSDC’ಯಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ

ಉಡುಪಿ: ಮಣಿಪಾಲದ ಈಶ್ವರ ನಗರದಲ್ಲಿರುವ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌, ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC)ದಲ್ಲಿ ಯುಬಿಯುಎನ್ ಟಿಯು ಕನ್ಸೋರ್ಟಿಯಂ ಹಾಗೂ ಉಡುಪಿಯ ಪವರ್‌ ಸಂಸ್ಥೆಯ ವತಿಯಿಂದ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ ಇದೇ 27ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ನಡೆಯಲಿದೆ ಎಂದು ಪವರ್‌ ಸಂಸ್ಥೆಯ ಸಂಸ್ಥಾಪಕಿ ರೇಣು ಜಯರಾಮ್‌ ಮತ್ತು ಅಧ್ಯಕ್ಷೆ ವೀಣಾ ಕುಡ್ವಾ ತಿಳಿಸಿದರು. ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಹಿಳೆಯರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ […]

ಏ.16 ರಿಂದ ಏ.20ರವರೆಗೆ ‘ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ ವೈಭವ-2026’: ಉಸ್ತುವಾರಿ ಸಚಿವರಿಗೆ ಆಹ್ವಾನ.

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ತಾ.16.4.2026ರಿಂದ ತಾ. 20.4.2026ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌ರವರಿಗೆ ನೀಡಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ‌ ಅಧ್ಯಕ್ಷರಾದ ಮಾಧವ ಪೂಜಾರಿ ಬನ್ನಂಜೆ, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾದ ರಮೇಶ್ ಕಾಂಚನ್, ದೇವಸ್ಥಾನದ ಅರ್ಚಕರಾದ ಮಧುಸುಧನ್ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುದೇಶ್ ಶೇಟ್, ಪ್ರಭಾಕರ್ ಶೆಟ್ಟಿ, ರಾಜೇಶ್ ಬನ್ನಂಜೆ, […]

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಬೊಳ್ಜೆ ಉದ್ಯಾವರ: ಅಧ್ಯಕ್ಷರಾಗಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆ

ಉಡುಪಿ : ಉದ್ಯಾವರ ಬೊಳ್ಜೆಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ (ರಿ.) ಯ 2026-29 ನೇ ಸಾಲಿಗೆ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಉದ್ಯಮಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆಯಾಗಿದ್ದಾರೆ. ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಹೀಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ್ ಬೊಳ್ಜೆ, ಉಪಾಧ್ಯಕ್ಷರಾಗಿ ಸುಧಾಕರ್ ಕೋಟ್ಯಾನ್ ಬೊಳ್ಜೆ, ಕೋಶಾಧಿಕಾರಿ ಜಯಕುಮಾರ್, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕೆ. ಪೂಜಾರಿ, ಸಚಿನ್ ಎಂ ಸಾಲ್ಯಾನ್ ಬೊಳ್ಜೆ, ಗುರಿಕಾರರಾಗಿ ವಿಠಲ ಕೆ. ಕೋಟ್ಯಾನ್, ವೇಣುಗೋಪಾಲ್ ಉದಿಯಾವರ್, […]

ಹೆಬ್ರಿ: ಏಣಿಯಿಂದ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು: ರಜೆಯಲ್ಲಿ ಕೆಲಸ ಮಾಡಿ ಮನೆಗೆ ಆಧಾರಸ್ತಂಭವಾಗಿದ್ದ ವಿದ್ಯಾರ್ಥಿ.!

ಉಡುಪಿ: ಏಣಿಯಿಂದ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಹೆಬ್ರಿ ಹುತುರ್ಕೆ ಎಂಬಲ್ಲಿ ನಡೆದಿದೆ.ಹೆಬ್ರಿ ತಾಲೂಕಿನ ಬೇಳಂಜೆ ನಿವಾಸಿ ಸಾತ್ವಿಕ್ ಮೃತದುರ್ದೈವಿ. ಈತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ರಜೆಯಲ್ಲಿ ತನ್ನ ವಿದ್ಯಾಭ್ಯಾಸಕ್ಕೂ, ಮನೆಯ ಖರ್ಚಿಗೂ ಸಹಾಯವಾಗಲಿ ಎಂಬ ಉದ್ದೇಶದಿಂದ ಕೆಲಸಕ್ಕೆ ಹೋಗಿದ್ದರು. ಆದರೆ ಹೆಬ್ರಿ ಹುತುರ್ಕೆ ಎಂಬಲ್ಲಿ ಕೆಲಸ ಮಾಡುವಾಗ ಏಣಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.ಈತ ಕೇವಲ ವಿದ್ಯಾರ್ಥಿ ಮಾತ್ರವಲ್ಲ, ಮನೆಯ ಆಧಾರವಾಗಿದ್ದನು. ಸಾತ್ವಿಕ್ ಗೆ ಕೃಷಿಯ ಬಗ್ಗೆ ಅರಿವು ಇತ್ತು. ಮೊನ್ನೆಯಷ್ಟೆ ಪಿಯುಸಿ ಪರೀಕ್ಷೆ […]