ಆದಿತ್ಯ ಬಿರ್ಲಾ ಪಾಲಾದ RCB; IPL ಇತಿಹಾಸದಲ್ಲೇ ಅತಿದೊಡ್ಡ ಮಾರಾಟ.!

ಬೆಂಗಳೂರು: ಹಾಲಿ ಚಾಂಪಿಯನ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಇತಿಹಾಸದಲ್ಲೇ ಭಾರೀ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ. ನಾಲ್ಕು ದೈತ್ಯ ಕಂಪನಿಗಳು ಜಂಟಿಯಾಗಿ ಆರ್ ಸಿಬಿ ಫ್ರಾಂಚೈಸಿಯನ್ನು ಬರೋಬ್ಬರಿ 178 ಬಿಲಿಯನ್ ಡಾಲರ್(16,600 ಕೋಟಿ ರೂ.)ಗೆ ಖರೀದಿ ಮಾಡಿದೆ ಎಂದು ವರದಿಯಾಗಿದೆ. ಡಿಯಾಜಿಯೊ ಸಂಸ್ಥೆಯಿಂದ ಆರ್ ಸಿಬಿ ತಂಡವನ್ನು ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಡ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ ಜಂಟಿಯಾಗಿ ಖರೀದಿ ಮಾಡಿದೆ […]
RCB’ಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್ ನಂದಿನಿ.

ಬೆಂಗಳೂರು: ಪ್ರತಿಷ್ಠಿತ ಐಪಿಎಲ್ ಟಿ-20 ಲೀಗ್ ಪಂದ್ಯಾವಳಿಯು ಇದೇ 28ರಿಂದ ಆರಂಭವಾಗುತ್ತಿದ್ದು, ರಾಜ್ಯದ ಹೆಮ್ಮಯ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಂದಿನಿ ಬ್ರ್ಯಾಂಡ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಡೇರಿ ಪಾಲುದಾರರಾಗಿ ಕೈಜೋಡಿಸಿದೆ. ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಮತ್ತು ಯುವ ಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯವನ್ನು ಹೊಂದಿದ್ದು, ರಾಜ್ಯದ ಹೆಮ್ಮೆಯ ಎರಡು ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ‘ನಂದಿನಿ ಮತ್ತು ಆರ್‌ಸಿಬಿ’ ಒಂದಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ. […]
ಬ್ರಹ್ಮಾವರ: ಪ್ರಖ್ಯಾತ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ ಹೃದಯಘಾತದಿಂದ ಮೃತ್ಯು.

ಉಡುಪಿ: ಪ್ರಖ್ಯಾತ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ ಇಂದು (ಮಾ.24) ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ನಡೂರು ಗ್ರಾಮದ ನಿವಾಸಿಯಾಗಿರುವ ಪ್ರಕಾಶ್ ಕುಲಾಲ್(35). ಅತ್ಯಂತ ಚುರುಕಿನ, ಪ್ರತಿಭಾಶಾಲಿ ಯುವ ಭಜನಾ ತರಬೇತುದಾರರಾಗಿದ್ದು, ನಿನ್ನೆ ಸಂಜೆ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದ್ದರು. ಬೆಳಿಗ್ಗೆ ಅವರಿಗೆ ಆತ್ಮೀಯರೊಬ್ಬರು ಕರೆ ಮಾಡಿದಾಗ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆಯ ಮಾಡಿನ ಹಂಚು ತೆಗೆದು ಒಳಗೆ ಹೋಗಿ ನೋಡಿದಾಗ ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಪ್ರಕಾಶ್ […]
ಆಳ್ವಾಸ್ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವ

ಮೂಡುಬಿದಿರೆ: ಜೀವನದಲ್ಲಿ ನಿಜವಾದ ಯಶಸ್ಸು ಪದವಿ ಅಥವಾ ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಕಂಡ ಕನಸುಗಳನ್ನು ಸಾಧಿಸುವುದರಲ್ಲಿದೆ ಎಂದು ಕಮೋಡೊರ್ ಬೆನ್ ಹೆಚ್ ಬೆರ್ಸನ್ ನುಡಿದರು.ಅವರು ಮಂಗಳವಾರ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.ಮಾರ್ಟಿನ್ ಲೂಥರ್ ಕಿಂಗ್ ಜ್ಯೂರವರ ಮಾತುಗಳನ್ನು ಉಲ್ಲೇಖಿಸಿ, ಭವಿಷ್ಯ ರೂಪಿಸುವಲ್ಲಿ ದೂರದೃಷ್ಟಿ ಮತ್ತು ವ್ಯಕ್ತಿತ್ವದ ಮಹತ್ವವನ್ನು ವಿವರಿಸಿದರು. ವಾಲ್ಟ್ ಡಿಸ್ನಿ ಹಾಗೂ ಡಾ ಸಾಸ್‌ರಂತವರು ಅನೇಕ ವಿಫಲತೆಗಳನ್ನು ಮೀರಿ ಸಾಧನೆ ಮಾಡಿದ ಉದಾಹರಣೆಗಳನ್ನು ನೀಡಿದರು. ತಮ್ಮ ಜೀವನ ಅನುಭವಗಳನ್ನು ಹಂಚಿಕೊAಡ […]
ಕಾರ್ಕಳ: ಮಾಳದಲ್ಲಿ ಟಿಪ್ಪರ್ – ಸ್ಕೂಟರ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಉಡುಪಿ: ಟಿಪ್ಪರ್ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನಪ್ಪಿದ ದುರ್ಘಟನೆ ಮಾ. 24ರಂದು ಬೆಳಿಗ್ಗೆ ಕಾರ್ಕಳ ಮಾಳ ಮುಳ್ಳೂರಿನಲ್ಲಿ ನಡೆದಿದೆ.ನವೀನ್ ಬಜಗೋಳಿ (45) ಮೃತ ದುರ್ದೈವಿ. ನವೀನ್ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದು, ಹಾವು ಹಿಡಿಯುವ ಕೆಲಸವನ್ನು ಮಾಡುತ್ತಿದ್ದರು. ಇಂದು ಬೆಳಿಗ್ಗೆ ಎಲ್ಲಿಯೋ ಹಾವು ಹಿಡಿದು ಕಾಡಿಗೆ ಬಿಡಲೆಂದು ಹೋಗುತ್ತಿರುವಾಗ ಅವಘಡ ಸಂಭವಿಸಿದೆ. ಪರಿಣಾಮವಾಗಿ ನವೀನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಕೂಟಿಯ ಸಹಸವಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ […]