ಬಾಕ್ಸಾಫೀಸ್‌ನಲ್ಲಿ ‘ಧುರಂಧರ್‌ 2’ ದಾಖಲೆಯ ಗಳಿಕೆ; ಕಲೆಕ್ಷನ್‌ ಎಷ್ಟು?

ಆದಿತ್ಯ ಧಾರ್‌ ನಿರ್ದೇಶನದ, ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್‌ 2’ ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ ಕೇವಲ ಮೂರು ದಿನಗಳಲ್ಲೇ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿದ್ದು, ವಿಶ್ವದಾದ್ಯಂತ 500 ಕೋಟಿ ರೂ. ಕ್ಲಬ್‌ ಸೇರಿದೆ. ಮೂರನೇ ದಿನ 113 ಕೋಟಿ ರೂ. ಸಂಗ್ರಹ:ಬಿಡುಗಡೆಯಾದ ಎರಡು ದಿನಗಳಲ್ಲಿ ಭಾರತದಲ್ಲಿ ಸಿನಿಮಾ 226.27 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 113 ಕೋಟಿ ರೂ. ಸಂಗ್ರಹಿಸಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ಹೇಳಿದ್ದಾರೆ. ದೇಶದಲ್ಲಿ […]

ವೈಯಕ್ತಿಕ ದ್ವೇಷದಿಂದ ನನ್ನ ರೆಸಾರ್ಟ್ ನಿರ್ಮಾಣಕ್ಕೆ ಉಡುಪಿ ಶಾಸಕರಿಂದ ಅಡ್ಡಗಾಲು: ಕೆ.ರಘುಪತಿ ಭಟ್ ಆರೋಪ

ಉಡುಪಿ: ಬಡನಿಡಿಯೂರಿನ ಸಮುದ್ರ ತೀರದಲ್ಲಿ ರೆಸಾರ್ಟ್ ನಿರ್ಮಿಸಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲದೇ ಇದ್ದರೂ ವೈಯಕ್ತಿಕ ದ್ವೇಷದಿಂದ ಶಾಸಕ ಯಶ್ವಾಲ್ ಸುವರ್ಣ ಅವರು ರೆಸಾರ್ಟ್ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.ಕರಂಬಳ್ಳಿಯ ಅವರ ನಿವಾಸದಲ್ಲಿ ಕರೆಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಿಂತ ಮೊದಲು ನಾನು ಉದ್ಯಮಿ. ರಾಜಕೀಯ ನನ್ನ ವೃತ್ತಿಯಲ್ಲಿ ಪ್ರವೃತ್ತಿ. ಹೋಟೆಲ್ ಉದ್ಯಮ ನಡೆಸಿಕೊಂಡು ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಕಡಲ ತೀರದಲ್ಲಿ 1.60 ಎಕರೆ ಜಾಗದಲ್ಲಿ ರೆಸಾರ್ಟ್ ಮಾಡಲು ಹೊರಟಿದ್ದೆ. ಅನುಮತಿ […]

ಹೈದರಾಬಾದ್’ನಲ್ಲಿರುವ ಹೋಟೆಲ್’ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: 45 ವರ್ಷಗಳ ಪಾರಂಪರ್ಯ ಹೊಂದಿರುವ ಖ್ಯಾತ ಆತಿಥ್ಯ ಬ್ರ್ಯಾಂಡ್ ಹೈದರಾಬಾದ್‌ನಲ್ಲಿ ಹೊಸ ಔಟ್‌ಲೆಟ್ ಆರಂಭಿಸುತ್ತಿದ್ದು, ವಿವಿಧ ಹುದ್ದೆಗಳಿಗೆ ಕರಾವಳಿ ಭಾಗದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಲಭ್ಯವಿರುವ ಹುದ್ದೆಗಳು: ಮ್ಯಾನೇಜರ್CDP – ಸೌತ್ ಇಂಡಿಯನ್ ಕ್ಯುಸಿನ್,ಕಮೀ – ಸೌತ್ ಇಂಡಿಯನ್ ಜ್ಯೂಸ್ ಕೌಂಟರ್ ಸ್ಟಾಫ್ಚಾಟ್ ಸ್ಟಾಫ್ಡೆಸೆರ್ಟ್ ಸ್ಟಾಫ್ಕ್ಯಾಪ್ಟನ್ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9916737966

ಉಡುಪಿ: ಮಹಿಳಾ ಆಯುರ್ವೇದ ವೈದ್ಯರು ಬೇಕಾಗಿದ್ದಾರೆ.

ಉಡುಪಿ: ನಗರದ ಪ್ರತಿಷ್ಠಿತ ಹಿರಿಯ ಆಯುರ್ವೇದ ಔಷಧ ತಯಾರಿಕಾ ಘಟಕವಾದ ಸ್ವದೇಶಿ ಔಷದ ಭಂಡಾರ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಪ್ರೊಡಕ್ಷನ್ ಇಂಚಾರ್ಜ್ ಹುದ್ದೆಗೆ ಮಹಿಳಾ ಆಯುರ್ವೇದ ವೈದ್ಯರು ಬೇಕಾಗಿದ್ದಾರೆ. BAMS ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880029841, 9845151070