ಮಲ್ಹಾರ್ ಫ್ಯಾಷನ್ ಮೇಳ 2026: ಉಡುಪಿಯಲ್ಲಿ ಮಾ.14 ಮತ್ತು 15 ರಂದು ಎರಡು ದಿನಗಳ ಭರ್ಜರಿ ಮಾರಾಟ

ಉಡುಪಿ: ಉಡುಪಿಯ ಜೋಡುಕಟ್ಟೆಯ ಡಯಾನಾ ಹೋಟೆಲ್‌ನಲ್ಲಿ ಮಾರ್ಚ್ 14 ಮತ್ತು 15 ರಂದು “ಮಲ್ಹಾರ್ ಫ್ಯಾಷನ್ ಫೇರ್ 2026” ಎಂಬ ಹೆಸರಿನಲ್ಲಿ ಭರ್ಜರಿ ಫ್ಯಾಷನ್ ಮೇಳ ಆಯೋಜಿಸಲಾಗಿದೆ. ಈ ಫ್ಯಾಷನ್ ಮೇಳದಲ್ಲಿ ವಿವಿಧ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು ಸೇರಿದಂತೆ ಹಲವಾರು ಹೊಸ ಫ್ಯಾಷನ್ ಉಡುಪುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಜೊತೆಗೆ ಕೊರಿಯನ್ ಜುವೆಲ್ಲರಿ, ಆಂಟಿಕ್ ಜುವೆಲ್ಲರಿ, ಒನ್ ಗ್ರಾಮ್ ಜುವೆಲ್ಲರಿ, ಬ್ಯಾಗ್‌ಗಳು ಮತ್ತು ಬೆಡ್‌ಶೀಟ್‌ಗಳು ಸಹ ವಿಶೇಷ ರಿಯಾಯಿತಿಯಲ್ಲಿ ದೊರೆಯಲಿವೆ. ಮಾರ್ಚ್ 14 ಮತ್ತು 15ರಂದು ಬೆಳಗ್ಗೆ […]
ಉಡುಪಿ:ಯುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ಭೂಮಿಕಾ ಮೇಸ್ತಾ ಆಯ್ಕೆ

ಉಡುಪಿ: ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿನಿ ಭೂಮಿಕಾ ಮೇಸ್ತಾ ಅವರು ಕರ್ನಾಟಕ ರಾಜ್ಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ. ಭುಬನೇಶ್ವರ (ಒಡಿಶಾ) ನಲ್ಲಿ ಮಾರ್ಚ್ 15ರಿಂದ 20ರವರೆಗೆ ನಡೆಯಲಿರುವ 26ನೇ ಯುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಪರವಾಗಿ ಭೂಮಿಕಾ ಮೇಸ್ತಾ ಭಾಗವಹಿಸಲಿದ್ದಾರೆ. ಮಿಲಾಗ್ರೆಸ್ ಕಾಲೇಜು ಕಲ್ಯಾಣಪುರವು ಇತ್ತೀಚೆಗೆ NAAC ನಿಂದ A+ ಗ್ರೇಡ್ ಪಡೆದುಕೊಂಡಿದ್ದು, ವಿದ್ಯಾರ್ಥಿನಿಯ ಈ ಸಾಧನೆ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ […]
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗ್ರಾಮೀಣ ಅಧ್ಯಕ್ಷರ ನೇಮಕಾತಿ

ಕಾಪು: ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರ ನಿರ್ದೇಶನದಂತೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ವೈ. ಸುಕುಮಾರ್ ಅವರು ಹೆಜಮಾಡಿ, ಪಡುಬಿದ್ರಿ, ಉಚ್ಚಿಲ ಮತ್ತು ಮಲ್ಲಾರು ಗ್ರಾಮೀಣ ಕಾಂಗ್ರೆಸ್ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಬೋದ್ ಚಂದ್ರ ಹೆಜಮಾಡಿ ಅವರನ್ನು ನೇಮಕ ಮಾಡಲಾಗಿದೆ. ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ರಮೀಝ್ ಹುಸೈನ್ ಅವರನ್ನು ನೇಮಕ ಮಾಡಲಾಗಿದೆ. ಉಚ್ಚಿಲಾ ಬಡಾ ಗ್ರಾಮೀಣ ಕಾಂಗ್ರೆಸ್ […]
ಉಡುಪಿ:ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಮಿಕ ರೋಗಗಳ ಘಟಕ ಎನ್.ಸಿ.ಡಿ, ಜಿಲ್ಲಾ ಆಸ್ಪತ್ರೆ ಉಡುಪಿ ಎನ್.ಸಿ.ಡಿ ವಿಭಾಗ ಹಾಗೂ ವಾಮನ ವಿಠ್ಠಲ ಟ್ರಸ್ಟ್ ಶಿರೂರು ಮಠ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆಸ್ಪತ್ರೆಯ ರೇಡಿಯೋಲಾಜಿಸ್ಟ್ ಡಾ.ಆಮ್ನಾ ಹೆಗ್ಡೆ ಮಾತನಾಡಿ, ಈ ಹಿಂದೆ ಅಬಲೆಯೆಂದು ಕರೆಸಿಕೊಳ್ಳುತ್ತಿದ್ದ ಮಹಿಳೆಯರು ಇಂದು ಸಬಲೆಯಾಗಿ, ಉತ್ತಮ ಶಿಕ್ಷಣವನ್ನು […]
ಉಡುಪಿ:ಸಾಲಿಗ್ರಾಮ ಪ.ಪಂ. ಉದ್ಯಮ ಪರವಾನಿಗೆ ನವೀಕರಣ: ಅರ್ಜಿ ಆಹ್ವಾನ

ಉಡುಪಿ:ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಎಲ್ಲಾ ಉದ್ಯಮದಾರರ 2026-27 ನೇ ಸಾಲಿನ ಉದ್ಯಮಪರವಾನಿಗೆ ನವೀಕರಣ ಅವಧಿಯು ಏಪ್ರಿಲ್ 2026 ರಿಂದ ಪ್ರಾರಂಭವಾಗಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಉದ್ಯಮದಾರರು ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ನಿಗದಿತ ದಾಖಲೆ ಸಹಿತಆನ್‌ಲೈನ್ ಮೂಲಕ ಅಥವಾ ಪಟ್ಟಣ ಪಂಚಾಯತ್‌ಗೆ ಅರ್ಜಿ ನಮೂನೆ ಹಾಗೂ ದಾಖಲೆ ಸಹಿತ ಶುಲ್ಕ ಪಾವತಿಸಿ ಉದ್ಯಮಪರವಾನಿಗೆ ನವೀಕರಿಸಿಕೊಳ್ಳಬಹುದಾಗಿದೆ. ನಿಗದಿತ ಅವಧಿಯಲ್ಲಿ ಉದ್ಯಮ ಪರವಾನಿಗೆ ನವೀಕರಿಸದಿದ್ದಲ್ಲಿ ಅಧಿಸೂಚನೆಯಂತೆ ದಂಡ ಸಹಿತ ಬಾಕಿ ಶುಲ್ಕವನ್ನುಪಾವತಿಸಬೇಕು. ಈಗಾಗಲೇ ಉದ್ಯಮ ಸ್ಥಗಿತಗೊಳಿಸಿದ್ದಲ್ಲಿ […]