ಏಂಜೆಲ್ ಝುಂಬಾ ಫಿಟ್ನೆಸ್ ಸ್ಟುಡಿಯೋ 4ನೇ ವರ್ಷದ ಸಂಭ್ರಮ: ಉಡುಪಿಯಲ್ಲಿ ಜುಂಬಾ ಮಾಸ್ಟರ್ ಕ್ಲಾಸ್

ಉಡುಪಿ: ಏಂಜೆಲ್ ಝುಂಬಾ ಮತ್ತು ಫಿಟ್ನೆಸ್ ಸ್ಟುಡಿಯೋ ವತಿಯಿಂದ “ಜುಂಬಾ ಮಾಸ್ಟರ್ ಕ್ಲಾಸ್” ಹಾಗೂ ಸಂಸ್ಥೆಯ 4ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಮಾರ್ಚ್ 28, 2026ರಂದು ಸಂಜೆ 6:30ಕ್ಕೆ ಉಡುಪಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಝುಂಬಾ ತರಬೇತುದಾರರಾದ ZIN ಪೂರ್ಣಿಮಾ ಪೆರ್ಗನ್ನ ಹಾಗೂ ಪುಣೆಯಿಂದ ವಿಶೇಷ ಅತಿಥಿಯಾಗಿ ಆಗಮಿಸುವ ZIN ಕರಿಷ್ಮಾ ಭಾಗವಹಿಸಿ ವಿಶೇಷ ಝುಂಬಾ ತರಗತಿಯನ್ನು ನಡೆಸಲಿದ್ದಾರೆ. ಫಿಟ್ನೆಸ್ ಹಾಗೂ ನೃತ್ಯ ಪ್ರಿಯರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಲು ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವನ್ನು […]

ಉಡುಪಿ:ಮಂಜುನಾಥ ಐ-ಕೇರ್ ಸೂಪರ್ ಸ್ಪೆಷಾಲಿಟಿ ಸಂಸ್ಥೆಯ ಸುರತ್ಕಲ್ ಶಾಖೆಯ ಶುಭಾರಂಭ

ಉಡುಪಿ:ಉಡುಪಿ,ಕುಂದಾಪುರಗಳಲ್ಲಿ ಎರಡು ಶಾಖೆ ಹೊಂದಿ ಕಳೆದ ಸುಮಾರು 20 ವರ್ಷಗಳಿಂದ ಮನೆಮಾತಾಗಿರುವ ಮಂಜುನಾಥ ಐ ಕೇರ್ ಸೂಪರ್ ಸ್ಪೆಷಾಲಿಟಿ ಐಕೇರ್ ಸೆಂಟರ್‌ನ ಮೂರನೇ ಸುಸಜ್ಜಿತ ಶಾಖೆ ಸುರತ್ಕಲ್ ಗೋವಿಂದದಾಸ ಕಾಲೇಜು ಎದುರು ರಾಷ್ಟ್ರೀಯ ಹೆದ್ದಾರಿ. ಪಕ್ಕದಲ್ಲಿ ಭಾನುವಾರ ಶುಭಾರಂಭಗೊಂಡಿತು. ಶಾಸಕ ಡಾ. ಭರತ್ ಶೆಟ್ಟಿ ಶಾಖೆ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಭಾಗದ ಜನರಿಗೆ ಸುಸಜ್ಜಿತ ಐ-ಕೇರ್ ಕೇಂದ್ರವನ್ನು ಸರಿಯಾದ ಜಾಗದಲ್ಲಿ ಈ ಸಂಸ್ಥೆ ಆರಂಭಿಸಿದೆ. ದೇಶದಲ್ಲಿಯೇ ನಂ. 1 ವೈದ್ಯಕೀಯ ಕೇಂದ್ರವಾಗಿ ಮಂಗಳೂರು ಗುರುತಿಸಿಕೊಂಡಿದ್ದು, ಇಲ್ಲಿ ಉತ್ತಮ […]

ಉಡುಪಿ:ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಸಲಕರಣೆಗಳ ಕಿಟ್ (Sports Kit) ವಿತರಿಸಲಾಯಿತು. ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಷನ್ ಕುಮಾರ್ ಶೆಟ್ಟಿ ಅವರು ಕಿಟ್ ಅನ್ನು ಸಂಘದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗಣೇಶ ಕೋಟ್ಯಾನ್, ಕಾರ್ಯದರ್ಶಿ ಗಿರೀಶ್, ಸದಸ್ಯರಾದ ಸುನಿಲ್, ಮಂಜುನಾಥ್ ಎನ್., ದಾಮೋದರ ಭಟ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.