ಮಧ್ಯಪ್ರಾಚ್ಯದಲ್ಲಿ ಯುದ್ದದ ಉದ್ವಿಗ್ನತೆ: ಉಡುಪಿ ಧರ್ಮಪ್ರಾಂತ್ಯದಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

ಉಡುಪಿ: ಮಧ್ಯಪ್ರಾಚ್ಯ ಪ್ರದೇಶದಲ್ಲಿ, ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನು ಒಳಗೊಂಡ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ನೀಡದಂತೆ ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಭಾನುವಾರ ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.ಭಾನುವಾರ ಬೆಳಗ್ಗಿನ ಬಲಿಪೂಜೆಯ ವೇಳೆ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚುಗಳಲ್ಲಿ ಧರ್ಮಗುರುಗಳು ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ವಿವಿಧ ಚರ್ಚುಗಳಲ್ಲಿ ಬಲಿಪೂಜೆಗೂ ಮುನ್ನ ಪರಮಪ್ರಸಾದದ ಆರಾಧನೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಯುದ್ದದ ಭೀತಿ ಕಡಿಮೆಯಾಗಿ ಮಧ್ಯಪ್ರಾಚ್ಯ […]
ಉಡುಪಿ: ವೀಣಾ ಎಸ್. ಶೆಟ್ಟಿಗೆ ವೀರವನಿತೆ-2026 ಪ್ರಶಸ್ತಿ

ಬೆಂಗಳೂರಿನ ಚಿತ್ರಸಂತೆ ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ “ವೀರವನಿತೆ 2026” ವರ್ಷದ ಮಹಿಳೆ ಪ್ರಶಸ್ತಿಗೆ ಉಡುಪಿಯ ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿ ಆಯ್ಕೆಯಾಗಿದ್ದು, ಮಾರ್ಚ್ 6 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ಚಲನಚಿತ್ರ ತಾರ ಅನುರಾದ ಪ್ರಶಸ್ತಿ ಪ್ರದಾನ ಮಾಡಿದರು. ವೀಣಾ ಶೆಟ್ಟಿ ಅವರು ಸುಮಾರು ಮೂವತ್ತು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹೀಗೆ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಮಾರಂಭದಲ್ಲಿ ಚಿತ್ರಸಂತೆ ಸಂಸ್ಥೆಯ ಪ್ರಮುಖರಾದ ಅರುಣ್ […]
ಬದುಕಿನ ಕಷ್ಟಗಳನ್ನು ಮೆಟ್ಟಿ ಸಾವಯವ ಕೃಷಿಯಲ್ಲಿ ಗೆದ್ದ ಮಹಿಳೆಯ ಸಕ್ಸಸ್ ಸ್ಟೋರಿಯಿದು :ಮಹಿಳಾ ದಿನದ ವಿಶೇಷ ಕೃಷಿಗಾಥೆ

2014ರ ಆಗಸ್ಟ್ ತಿಂಗಳಲ್ಲಿ ಕೇರಳದ ಕೆ.ಎಸ್. ಶೀಜ ಅವರ ಜೀವನದಲ್ಲಿ ಅನಿರೀಕ್ಷಿತ ಸಂಕಷ್ಟ ಎದುರಾಯಿತು. ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಅವರ ಮಗ ಕೊಯಂಬತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿಗೆ ದೊಡ್ಡ ಹಾನಿಯಾಯಿತು. ಮಗನ ಚಿಕಿತ್ಸೆಗಾಗಿ ಶೀಜ ಮತ್ತು ಅವರ ಕುಟುಂಬ ತಮಿಳುನಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡು, ಆಸ್ಪತ್ರೆಯ ಸಮೀಪದಲ್ಲಿರುವ ಮನೆವೊಂದರಲ್ಲಿ ಸುಮಾರು ಒಂದೂವರೆ ವರ್ಷ ವಾಸವಿದ್ದರು. ಆ ಅವಧಿಯಲ್ಲಿ ಆಸ್ಪತ್ರೆ ಓಡಾಟ ಹಾಗೂ ನಿರಂತರ ಚಿಕಿತ್ಸೆಯಿಂದ ಶೀಜ ಮಾನಸಿಕವಾಗಿ ಬಹಳ ಒತ್ತಡ ಅನುಭವಿಸಿದರು. ಈ ಸಮಯದಲ್ಲಿ […]
ಉಡುಪಿ: ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕಳವು ಪ್ರಕರಣ: ಇಬ್ಬರು ಕುಖ್ಯಾತ ಅಂತರ್‌ರಾಜ್ಯ ಕಳ್ಳರ ಬಂಧನ

ಉಡುಪಿ: ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಜ.30ರಂದು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.ತಮಿಳುನಾಡು ರಾಜ್ಯದ ತಿರುನಲ್ವೇಲಿ ತಿರುಕ್ಕುರುಂಕುಡಿಯ ಎಸಾಕ್ಕಿ ರಾಜ (28) ಹಾಗೂ ಆತನ ಸಹಚರ ನಂಬಿ ರಾಜ (23) ಬಂಧಿತ ಆರೋಪಿಗಳು.ಕಾಪು ದಿವಾಕರ ಶೆಟ್ಟಿ ಕುಟುಂಬದವರು ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿರುವ ಮನೆಗೆ ಬೀಗ ಹಾಕಿ ಮುಂಬಯಿಗೆ ಹೋಗಿದ್ದು, ಈ ಸಂದರ್ಭದಲ್ಲಿ ಮನೆಯ ಮುಖ್ಯ ಬಾಗಿಲ ಬೀಗವನ್ನು ಒಡೆದು ನುಗ್ಗಿದ […]