ಕಾರ್ಕಳ: ಸಾಣೂರು ಸೇಣರಬೆಟ್ಟು ಕೋಟಿಚೆನ್ನಯ ಜೋಡುಕರೆ ಕಂಬಳ‌- ನೂತನ ಕಂಬಳ ಕರೆಗೆ ಭೂಮಿಪೂಜೆ

ಉಡುಪಿ: ಕಾರ್ಕಳ ತಾಲೂಕಿನ ಸಾಣೂರು ಸೇಣರಬೆಟ್ಟು ಕೋಟಿಚೆನ್ನಯ ಜೋಡುಕರೆ ಕಂಬಳ‌ ಸಮಿತಿಯ ಆಶ್ರಯದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ “ಕೋಟಿಚೆನ್ನಯ ಜೋಡುಕರೆ ಕಂಬಳ‌”ದ ನೂತನ ಕಂಬಳ ಕರೆ ನಿರ್ಮಾಣದ ಭೂಮಿಪೂಜೆ ಗುರುವಾರ ಸಾಣೂರು ಸೇಣರಬೆಟ್ಟು ಎಂಬಲ್ಲಿ ನಡೆಯಿತು. ಸಾಣೂರು ಸೇಣರಬೆಟ್ಟು ಕೋಟಿಚೆನ್ನಯ ಜೋಡುಕರೆ ಕಂಬಳ‌ ಸಮಿತಿ ಅಧ್ಯಕ್ಷ ಜಗದೀಶ್ ಪೂಜಾರಿ ಹಾಗೂ ಗೌರವಾಧ್ಯಕ್ಷ ಅಶೋಕ್ ಕೋಟ್ಯಾನ್ ಕೊಳಕೆ ಇರ್ವತ್ತೂರು ಅವರು ನೂತನ ಕಂಬಳ ಕರೆಯ ಶಂಕುಸ್ಥಾಪನೆ ನೇರವೇರಿಸಿದರು. ಪುರೋಹಿತರಾದ ಶ್ರೀರಾಮ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. […]

ಎಸ್‌.ಆರ್ ಪಬ್ಲಿಕ್ ಸ್ಕೂಲ್ ಹೆಬ್ರಿ‌: ವಿಜ್ಞಾನ ಮಾದರಿ ತಯಾರಿ

ಹೆಬ್ರಿ: ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ – ಲರ್ನಿಂಗ್ ಲಿಂಕ್ ಫೌಂಡೇಶನ್ ಸೈನ್ಸ್, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ, ಕಾರ್ನಿವಲ್-2026 ಈ ಕಾರ್ಯಕ್ರಮದಲ್ಲಿ ಹೆಬ್ರಿಯ ಎಸ್.ಆರ್. ಪಬ್ಲಿಕ್ ಸ್ಕೂಲ್ನ 8ನೇ ತರಗತಿಯ ವಿದ್ಯಾರ್ಥಿಗಳಾದ ವಿನೀಶ್ ಆಚಾರ್ಯ, ಆರುಷ್ ಶೆಟ್ಟಿ, ಆಕರ್ಷ್ ಎ. ಶೆಟ್ಟಿ ತಯಾರಿಸಿದ Solar Powered Recycling Bot ಮಾದರಿಯನ್ನು ಪ್ರದರ್ಶಿಸಿ ಪ್ರಥಮ ಸಮಾಧಾನಕರ ಬಹುಮಾನವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಂದ ಪಡೆದಿದ್ದಾರೆ. ಇವರನ್ನು ಎಸ್‌.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ […]

ಮಾ.8 ರಂದು ಸುರತ್ಕಲ್‌ನಲ್ಲಿ ಮಂಜುನಾಥ ಐ ಕೇರ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಉಡುಪಿ:ಸುರತ್ಕಲ್ ಸಮೀಪದ ಇಡ್ಡ್ಯದಲ್ಲಿರುವ ಗೋವಿಂದ ದಾಸ ಕಾಲೇಜಿನ ಎದುರು ಭಾಗದಲ್ಲಿ “ಮಂಜುನಾಥ ಐ ಕೇರ್ ಸೂಪರ್ ಸ್ಪೆಷಾಲಿಟಿ ಐ ಸೆಂಟರ್” ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ಮಾರ್ಚ್ 8, ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಮಂಗಳೂರು ನಾರ್ತ್ ನ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರೀಶ್ ಆಚಾರ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂಡಿಯಾನಾ ಆಸ್ಪತ್ರೆಯ MD, ಹಾಗೂ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ […]

ಪೆರ್ಡೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂತೋಷ್ ಕುಲಾಲ್ ಪುನರಾಯ್ಕೆ

ಪೆರ್ಡೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪೆರ್ಡೂರು ಇದರ ಅಧ್ಯಕ್ಷರಾಗಿ ಸಂತೋಷ್ ಕುಲಾಲ ಪಕ್ಕಾಲ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹರೀಶ ಕುಲಾಲ ಹಂದಿಬೆಟ್ಟು, ನಿರ್ದೇಶಕರಾಗಿ ಯು. ಸುಂದರ ಕುಲಾಲ ಅಲೆವೂರು, ಶೇಖರ ಕುಕ್ಕಿಕಟ್ಟೆ, ಶಂಕರ್‌ ಪೆರಂಪಳ್ಳಿ, ಜಗನ್ನಾಥ ಕುಲಾಲ ಶಿವಪುರ, ಯೋಗೀಶ್ ಬೋಳುಗುಡ್ಡೆ, ರವೀಂದ್ರ ಕುಲಾಲ ಚೇರ್ಕಾಡಿ, ಗಣೇಶ ಕುಲಾಲ ಪಕ್ಕಾಲು,ಸುರೇಶ ಕುಲಾಲ ಗುಂಡ್ಯಡ್ಕ, ಮಂಜುನಾಥ ಕುಲಾಲ ಕುಬ್ರಿ ಮುಳ್ಳುಗುಡ್ಡೆ, ಪ್ರಪುಲ್ಲ ಎಸ್. ಕುಲಾಲ ಬೈರಂಪಳ್ಳಿ, ಶ್ಯಾಮಲ ಕೆ.ಕುಲಾಲ ಪೆರ್ಡೂರು ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರ […]

ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ : ಪದವಿ ಪ್ರದಾನ ಸಮಾರಂಭ

ಬ್ರಹ್ಮಾವರ: ಫಾರ್ಚ್ಯೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಆಡಳಿತಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್‌ನ ಬಿ.ಎಸ್ಸಿ. ನರ್ಸಿಂಗ್, ಜನರಲ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಕಾರ್ಯಕ್ರಮ ದಿನಾಂಕ 01.03.2026 ರಂದು ಕಾಲೇಜಿನ ಆಡಿಟೋರಿಯಂನಲ್ಲಿ ಜರುಗಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ| ಮಹಾಬ ಲೇಶ ಶೆಟ್ಟಿ, ಡೀನ್ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಸಂಶೋಧನಾ ಕೇಂದ್ರ ಮೂಡಬಿದ್ರಿ ಇವರು ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ,ವಿದ್ಯಾರ್ಥಿಗಳಿಗೆ ಶುಭ […]