ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಂದ ಭರ್ಜರಿ ಹೋಳಿ ಆಚರಣೆ

ದೇಶದಾದ್ಯಂತ ರಂಗುರಂಗಿನ ಹಬ್ಬ ಹೋಳಿ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದು, ಕರಾವಳಿಯಲ್ಲಿಯೂ ಬಣ್ಣಗಳ ಸಂಭ್ರಮ ಕಂಗೊಳಿಸಿತು. ಉಡುಪಿಯ ಮಣಿಪಾಲ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಹರ್ಷೋದ್ಗಾರಗಳ ನಡುವೆ ಹೋಳಿ ಹಬ್ಬವನ್ನು ಆಚರಿಸಿದರು. ವಿಶ್ವವಿದ್ಯಾನಿಲಯದಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡುತ್ತಿರುವ ಹಿನ್ನೆಲೆ, ಹೋಳಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಪ್ರತೀ ವರ್ಷ ಹೋಳಿ ದಿನ ಕಾಲೇಜಿಗೆ ರಜೆ ಇರುವುದರಿಂದ ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಒಂದೇ ವೇದಿಕೆಯಲ್ಲಿ ಸೇರಿ ಹಬ್ಬವನ್ನು ಸಂಭ್ರಮಿಸುತ್ತಾರೆ. ವಿದ್ಯಾರ್ಥಿಗಳು ಪರಸ್ಪರ ಬಣ್ಣ […]

ಕಾಫಿಗೂ ತಟ್ಟಿತು ಇರಾನ್-ಇಸ್ರೇಲ್ ಯುದ್ಧದ ಬಿಸಿ: ಜಾಗತಿಕ ಮಟ್ಟದಲ್ಲಿ ದುಬಾರಿಯಾಗಲಿದೆ ಕಾಫಿ! ಕಾಫಿ ಪ್ರಿಯರಿಗೆ ಶಾಕ್

ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ತೀವ್ರತೆ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆ ವ್ಯತ್ಯಯ ಉಂಟಾಗಿದೆ. ಈ ಜಲಸಂಧಿ ಜಾಗತಿಕ ತೈಲ ಸರಬರಾಜಿನ ಪ್ರಮುಖ ದ್ವಾರವಾಗಿರುವುದರಿಂದ, ಇಲ್ಲಿ ಉಂಟಾದ ಅಡಚಣೆ ಇಂಧನ ಮಾರುಕಟ್ಟೆಗೂ ಹಾಗೂ ಜಾಗತಿಕ ವ್ಯಾಪಾರಕ್ಕೂ ಹೊಡೆತ ನೀಡಿದೆ. ಇದರಿಂದ ತೈಲ ಮತ್ತು ಅನಿಲದ ಬೆಲೆಗಳು ಏರಿಕೆಯಾಗಿರುವುದರ ಜೊತೆಗೆ, ಕಾಫಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ದರಗಳಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಸೋಮವಾರದ ವಹಿವಾಟಿನ […]

ಮಲ್ಪೆ ಬಂದರಿನಲ್ಲಿ ಶ್ರಮಿಕರ ಮೇಲಿನ ಗೂಂಡಾಗಿರಿ ಖಂಡಿಸಿ ಪ್ರತಿಭಟನೆ

ಉಡುಪಿ: ಮಲ್ಪೆ ಬಂದರಿನಲ್ಲಿ ಶ್ರಮಿಕರ ಮೇಲಿನ ಗೂಂಡಾಗಿರಿ ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕ‌ರ್ ವಾದ), ಸಹಬಾಳ್ವೆ ಉಡುಪಿ ಜಿಲ್ಲೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. ದಲಿತ ಮುಖಂಡರಾದ ಸುಂದರ್ ಮಾಸ್ಟರ್ ಮಾತನಾಡಿ, ಮಲ್ಪೆ ಬಂದರಿನಲ್ಲಿ ಎಲ್ಲರಿಗೂ ಸಮಾನವಾಗಿ ದುಡಿಯುವ ಹಕ್ಕಿದೆ. ಸರ್ವ ಜನರಿಗೂ ದುಡಿಯುವ ಹಕ್ಕು ಇದೆ. ಅಲ್ಲಿರುವ ಬಲಾಡ್ಯರು ಹಿರಿಯರು ಮಾಡಿದ ಬಂದರು ಎನ್ನುವಂತೆ […]

ಉಡುಪಿ:ಸಹಕಾರಿ ಕ್ಷೇತ್ರದಲ್ಲಿ ಹೋಳಿ ಹಬ್ಬದ ಆಚರಣೆ

ಉಡುಪಿ:ಕರಾವಳಿಯಲ್ಲಿ ಬಹುವೈಶಿಷ್ಟ್ಯತೆಯಿಂದ ಮರಾಠಿ, ಕುಡುಬಿ ಹಾಗೂ ಖಾರ್ವಿ ಸಮುದಾಯಗಳು ಆಚರಿಸುವ ಹೋಳಿ ಕುಣಿತವನ್ನು ಉಡುಪಿ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಹೋಳಿ ಕುಣಿತದಲ್ಲಿ ವಿಶೇಷ ಆಕರ್ಷಣೆಯಾಗಿ ಹಕ್ಕಿಯ ಬಾಲದ ಗರಿ, ಸುರಗಿ ಸುರ ಸಂಪಿಗೆ ಹೂವು, ಅಬ್ಬಲಿ ಮಾಲೆಯ ಹೂವು, ವೇಷಭೂಷಣ, ಹೂವಿನಿಂದ ಅಲಂಕೃತ ಪೇಟವನ್ನು ತೊಟ್ಟು ಸಾಂಪ್ರದಾಯಿಕ ಕುಣಿದೊಂದಿಗೆ ಸಂಭ್ರಮಿಸಿದರು. ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಸಿ. ನಾಯ್ಕ್ ಅವರ ನೇತೃತ್ವದಲ್ಲಿ ಸಂಘದ ಪ್ರಧಾನ ಕಚೇರಿ ಸಹಕಾರಿ […]

ಉಡುಪಿ:ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಚಂದನಾ ಶೆಣೈ ಆಲ್‌ ಇಂಡಿಯಾ 36ನೇ ರಾಂಕ್

ಉಡುಪಿ:ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜನವರಿ 2026 ರಲ್ಲಿ ನಡೆಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಚಂದನಾ ಶೆಣೈ ಉತ್ತೀರ್ಣರಾಗಿದ್ದು ಗ್ರೂಪ್ ಒಂದರ ವಿಷಯ ಹಾಗೂ ಅಂಕಗಳು Financial Reporting 71, Advanced Financial Management 79, Advanced Auditing, Assurance and Professional Ethics 68, ಮತ್ತು ಗ್ರೂಪ್ ಎರಡರ Direct Tax Laws & International Taxation 59, Indirect Tax Laws 55, Integrated Business Solutions 68 ಒಟ್ಟು 400 ಅಂಕಗಳನ್ನು ಗಳಿಸಿ […]