ಸಂಧಾನ ವಿಫಲವಾದ ಬೆನ್ನಲ್ಲೇ ಇರಾನ್ ವಿರುದ್ಧ ಇಸ್ರೇಲ್ ಭೀಕರ ದಾಳಿ.!

ಅಮೆರಿಕದೊಂದಿಗಿನ ಸಂಧಾನ ವಿಫಲವಾದ ಬೆನ್ನಲ್ಲೇ ಇರಾನ್ ವಿರುದ್ಧ ಇಸ್ರೇಲ್ ದಿಢೀರ್ ಸೇನಾ ಕಾರ್ಯಾಚರಣೆ ಶುರು ಮಾಡಿದೆ. ಇರಾನ್‌ಗೆ ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ಅಮೆರಿಕ ಮತ್ತು ಇಸ್ರೇಲ್ ಎಚ್ಚರಿಕೆ ನೀಡಿದ್ದವು. ಆದರೂ ಇರಾನ್ ಮಣಿಯದೇ, ಸಂಧಾನಕ್ಕೂ ಒಪ್ಪದೇ ಹಿಂದೆ ಸರಿದಿತ್ತು. ಈಗಾಗಲೇ ಅಮೆರಿಕಾದ ಬಲಿಷ್ಟ ಸೇನೆ ಇರಾನ್‌ ಗಡಿಯಲ್ಲಿತ್ತು. ಇದೇ ವೇಳೆ ಇಸ್ರೇಲ್‌ ಅಧಿಕೃತವಾಗಿ ಯುದ್ಧ ಸಾರಿದೆ. ಬೃಹತ್‌ ಕ್ಷಿಪಣಿಗಳು ಇರಾನ್‌ ವಾಯು ಗಡಿಯ ಮೇಲೆ ದಾಳಿ ನಡೆಸಿವೆ. ಇರಾನ್‌ ತಕ್ಷಣ ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದಿದ್ದರೇ […]

ಹಿರಿಯಡ್ಕ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ: ಹಿರಿಯಡ್ಕ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ದೇವಾಡಿಗ ಸಭಾಭವನದ ಬಳಿ ನಡೆದಿದೆ. ಸುವೀಕ್ಷಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಓದಲು ಹೇಳಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಇನ್ಮುಂದೆ ಪಾರ್ಸ್ ಪೋರ್ಟ್ ವೆರಿಫಿಕೇಶನ್ ಗೆ ಹೊಸ ನಿಯಮ.!

ಬೆಂಗಳೂರು: ಡಿಜಿ & ಐಜಿಪಿ ಸೂಚನೆಯಂತೆ ಸಿಲಿಕಾನ್ ಸಿಟಿಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌’ಗೆ ಹೊಸ ನಿಯಮ ಜಾರಿಗೆ ತರಲಾಗಿದೆ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೊಸ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದ್ದು, ಪಾಸ್‌ಪೋರ್ಟ್ ಪರಿಶೀಲನೆಗೆ ವೇಳೆ ಬಾಡಿ ವೋರ್ನ್‌ ಕ್ಯಾಮೆರಾ ಕಡ್ಡಾಯವಾಗಿರಬೇಕು. ಪಾಸ್‌ಪೋರ್ಟ್ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸಬಾರದು. ಬದಲಿಗೆ ಅಧಿಕಾರಿಗಳು ಅರ್ಜಿದಾರರು ನೀಡಿರುವ ವಿಳಾಸಕ್ಕೆ ಕಡ್ಡಾಯವಾಗಿ ಭೇಟಿ ನೀಡಿ, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಬೇಕು. ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಎಸ್‌ಎಂಎಸ್ […]

ಮಂಗಳೂರು-ಮಸ್ಕತ್ ಮಧ್ಯೆ ಮಾ.1ರಿಂದ ನೇರ ವಿಮಾನಯಾನ ಸೇವೆ ಆರಂಭ: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ದ.ಕ., ಉಡುಪಿ ಹಾಗೂ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ಮಧ್ಯೆ ನೇರ ವಿಮಾನಯಾನ ಸೇವೆಯು ಮಾ.1ರಿಂದ ಪುನರಾರಂಭಗೊಳ್ಳಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟನೆ ನೀಡಿರುವ ಅವರು ಕರಾವಳಿ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಮಸ್ಕತ್‌ಗೆ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಗೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ತಾನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ […]

ಮಣಿಪಾಲ: MSDC ಯಲ್ಲಿದೆ ಉದ್ಯೋಗಾಧಾರಿತ ಬಾಷ್ LEAP ಪ್ರೋಗ್ರಾಂ: ಆಟೋಮೊಬೈಲ್ ಕ್ಷೇತ್ರದ ಆಸಕ್ತರಿಗೆ ಅದ್ಬುತ ಅವಕಾಶ

ಮಣಿಪಾಲ: ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುವ ಆಸಕ್ತರಿಗೆ ಮಣಿಪಾಲದ MSDC ಯಲ್ಲಿ ಜ್ಞಾನಾಧಾರಿತ ತರಬೇತಿ, ಶೇ.100 ಉದ್ಯೋಗ ಖಾತರಿಯೊಂದಿಗೆ ಲಭ್ಯವಿದೆ.ಇಲ್ಲಿ ಕಲಿತ ಮೊದಲ ಬ್ಯಾಚ್ ಅಭ್ಯರ್ಥಿಗಳಿಗೆ ಈಗಾಗಲೇ ಬೆಂಗಳೂರಿನಲ್ಲಿ ಉದ್ಯೋಗ ದೊರೆತಿದ್ದು ಒಳ್ಳೆ ವೃತ್ತಿ ಅನುಭವ ಪಡೆಯುತ್ತಿದ್ದಾರೆ. ಕಾರ್ಯಕ್ರಮ ಅವಧಿ:ಅವಧಿ : 2 ತಿಂಗಳುಗಳು (8 ವಾರಗಳು)ಸ್ಥಳ: ಎಂ.ಎಸ್.ಡಿ.ಸಿ. ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್,ಕುಕ್ಕಿಕಟ್ಟೆ, ಉಡುಪಿ ಉದ್ಯೋಗ-ಕೇಂದ್ರಿತ ಆಟೋಮೊಬೈಲ್ ತರಬೇತಿಯಾರು ಅರ್ಜಿ ಸಲ್ಲಿಸಬಹುದು? 10ನೇ / 12ನೇ ತರಗತಿ / ಡಿಪ್ಲೊಮಾ ಪಾಸಾದವರುಪ್ರತಿ ಆಸಕ್ತರು ಮತ್ತು ಉದ್ಯೋಗ ಬಯಸುವ […]