ಮಾ. 4ರಂದು ಉಡುಪಿ ಕಂಬಳದ ಶಂಕುಸ್ಥಾಪನೆ

ಉಡುಪಿ: ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ 80 ಬಡಗಬೆಟ್ಟು ಇಲ್ಲಿ ನಡೆಯಲಿರುವ ಉಡುಪಿ ಕಂಬಳದ ಶಂಕುಸ್ಥಾಪನೆಯನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಮಾರ್ಚ್ 4 ರಂದು ನೆರವೇರಿಸಲಿದ್ದಾರೆ. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಮತ್ತು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಉಡುಪಿ:ಇನ್ಸೈಟ್ ಸೊಲ್ಯೂಷನ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಪ್ಲೇಸ್‌ಮೆಂಟ್ ಆರಂಭ

ಉಡುಪಿ: ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಇನ್ಸೈಟ್ ಸೊಲ್ಯೂಷನ್ಸ್ ಸಂಸ್ಥೆ ವಿದ್ಯಾರ್ಥಿಗಳಿಗಾಗಿ “ಟ್ರೈನಿಂಗ್ & ಪ್ಲೇಸ್‌ಮೆಂಟ್ ” ಕಾರ್ಯಕ್ರಮವನ್ನು ಆರಂಭಿಸಿದೆ. ಮುಖ್ಯ ವಿಶೇಷತೆಗಳು: 🔹ತಜ್ಞರಿಂದ LED ತರಬೇತಿ🔹ಕಟಿಂಗ್ ಎಡ್ಜ್ ಪಠ್ಯಕ್ರಮ🔹ಲೈವ್ ಪ್ರಾಜೆಕ್ಟ್‌ಗಳ ಮೂಲಕ ಅನುಭವ🔹ಪ್ರಮುಖ ಕಂಪನಿಗಳಲ್ಲಿ ನೇರ ಪ್ಲೇಸ್‌ಮೆಂಟ್ ಅವಕಾಶ ವಿದ್ಯಾರ್ಥಿಗಳಿಗೆ 100% ಪ್ಲೇಸ್‌ಮೆಂಟ್ ಅಸಿಸ್ಟೆನ್ಸ್ ನೀಡಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ. ಆಸಕ್ತ ವಿದ್ಯಾರ್ಥಿಗಳು ತಕ್ಷಣ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 9880782393📧 [email protected]
ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

ಉಡುಪಿ ಫೆಬ್ರವರಿ 27: ಕಳೆದ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ಗ್ರಾಮದ ಲಿಂಗೊಟ್ಟಿಗುಡ್ಡೆ ನಿವಾಸಿ ಸುರೇಶ್ ಪೂಜಾರಿ (54) ಎನ್ನುವ ವ್ಯಕ್ತಿಯು ಫೆಬ್ರವರಿ 21 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೊರಹೋಗಿದ್ದು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 163 ಸೆಂ.ಮೀ ಎತ್ತರ, ಸಾಮಾನ್ಯ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಮಾತಾಡಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಕಂಟ್ರೋಲ್ ರೂಂ ದೂ.ಸಂ:0820-2520444, […]
ಹಿರಿಯಡಕ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ(ರಿ). ಕೊಂಡಾಡಿ ಭಜನೆಕಟ್ಟೆ; ಫೆ.28 ರಂದು ವಿಶ್ವಕರ್ಮ ಟ್ರೋಫಿ 2026 ಹಗ್ಗಜಗ್ಗಾಟ ಪಂದ್ಯಾಟ

ಹಿರಿಯಡಕ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ). ಕೊಂಡಾಡಿ ಭಜನೆಕಟ್ಟೆ ಹಿರಿಯಡಕ ಇವರ ಸಾರಥ್ಯದಲ್ಲಿ ವಿಶ್ವಕರ್ಮ ಟ್ರೋಫಿ 2026 ಫೆಬ್ರವರಿ 28 ಶನಿವಾರದಂದು ಹೊನಲು ಬೆಳಕಿನ ಪುರುಷರ ವಿಭಾಗದ 500+10 ಕೆ ಜಿ ಗ್ರಿಪ್ ಮಾದರಿಯ ಹಾಗೂ ಆಹ್ವಾನಿತ ಮಹಿಳಾ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟವು ಕೊಂಡಾಡಿ ಬೊಮ್ಮರಬೆಟ್ಟು ಶಾಲಾ ಮೈದಾನದಲ್ಲಿ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ 9481978881
ಸುಮನಸಾ ಕೊಡವೂರು ‘ರಂಗಹಬ್ಬ-14’ ಸಂಘಟನೆಗೆ ಮತ್ತೊಂದು ಹೆಸರು ಸುಮನಸಾ; ಡಾ.ತಲ್ಲೂರು ಶಿವರಾಮ ಶೆಟ್ಟಿ ಅಭಿಮತ

ಉಡುಪಿ: ಸಂಘಟನೆ ಎಂದರೆ ಏನು ? ಎತ್ತ ? ಎಂಬುದನ್ನು ಕೊಡವೂರಿನ ಸುಮನಸಾ ಸಾಂಸ್ಕೃತಿಕ ಸಂಘಟನೆಯಿoದ ನೋಡಿ ಕಲಿಯಬೇಕು. ಯಾವುದೇ ಸಂಘಟನೆಯು ಅದರ ಸದಸ್ಯರ ಒಗ್ಗಟ್ಟಿನ ಆಧಾರದಲ್ಲಿ ಮುಂದುವರಿಯುತ್ತದೆ, ಬೆಳೆಯುತ್ತದೆ. ತನು ಮನ ಧನ ಮಾತ್ರವಲ್ಲ ಪ್ರೇಕ್ಷಕರ ಪ್ರೋತ್ಸಾಹವೂ ಸಿಗಬೇಕು ಆಗ ಮಾತ್ರ ಸಂಘ ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಬುಧವಾರ ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ನ ಬಯಲು ರಂಗಮoದಿರದಲ್ಲಿ ಕೊಡವೂರಿನ ಸಾಂಸ್ಕೃತಿಕ ಸಂಘಟನೆ […]