ಉಡುಪಿ: ನಗರಸಭೆಯಲ್ಲಿ ತೆರಿಗೆ ಪಾವತಿ ರಶೀದಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಉಡುಪಿ ನಗರ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ.

ಉಡುಪಿ: ಉಡುಪಿ ನಗರ ಸಭೆಯಲ್ಲಿ ತೆರಿಗೆ ಪಾವತಿ ರಶೀದಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಉಡುಪಿ ನಗರ ವತಿಯಿಂದ ನಗರಾಧ್ಯಕ್ಷ ದಿನೇಶ್ ಅಮೀನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ನಗರಸಭೆಯಲ್ಲಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಗರಸಭೆಯ ಪೌರಾಯುಕ್ತರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ತಿಳಿದು ಬಂದಿರುತ್ತದೆ. ಮೇಲ್ನೋಟಕ್ಕೆ ಆರೋಪಿಗಳೆಂದು ಕಂಡು ಬಂದಿರುವ ಮೂರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ತೆರಿಗೆ ಪಾವತಿ ಚಲನ್ ಗಳಿಗೆ ನಕಲಿ […]
ಮಣಿಪಾಲ: ರೂಮ್ ಕ್ಲೀನರ್’ಗೆ ಜನ ಬೇಕಾಗಿದ್ದಾರೆ.

ಉಡುಪಿ: ಮಣಿಪಾಲದಲ್ಲಿರುವ ಪ್ರತಿಷ್ಠಿತ ಹೋಟೆಲ್’ನಲ್ಲಿ ರೂಮ್ ಕ್ಲೀನರ್ ಗೆ ಜನ ಬೇಕಾಗಿದ್ದಾರೆ. ಮಹಿಳೆಯರು/ ಯುವಕರು/ ಪುರುಷರು ಸಂಪರ್ಕಿಸಬಹುದು.ಮೊ: 7022084165
ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ಶಿವಳ್ಳಿ ಗ್ರಾಮದ ರುದ್ರಪ್ರಿಯ ನಗರದ ನಿವಾಸಿ ಅಮರ್ ನಾಯ್ಕ್(29) ಎನ್ನುವ ವ್ಯಕ್ತಿಯು ಗೋವಾದಲ್ಲಿ ಕೆಲಸದಲ್ಲಿದ್ದು ಕೆಲದಿನಗಳ ಹಿಂದೆ ಮನೆಗೆ ಮರಳಿದ್ದು ಉಡುಪಿಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ ಎಣ್ಣೆ ಕಪ್ಪು ಮೈಬಣ್ಣ ಅಗಲ ಮುಖ ಹೊಂದಿದ್ದು ಕನ್ನಡ, ತುಳು, ಹಿಂದಿ ಮಾತಾಡಬಲ್ಲವರಾಗಿರುತ್ತಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕರು ದೂ.ಸಂ: 9480805448, ಪಿ.ಎಸ್.ಐ ಮಣಿಪಾಲ ಠಾಣೆ ದೂ.ಸಂ:9480805475/8277988945, ಮಣಿಪಾಲ ಪೊಲೀಸ್ ಠಾಣೆ ದೂ.ಸಂ:0820-2526444 […]