ಕುಂದಾಪುರ:ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು: ಗುಣಮಟ್ಟದ ಶಿಕ್ಷಣದ ವಿಶ್ವಾಸಾರ್ಹ ಸಂಸ್ಥೆ

ಕುಂದಾಪುರ:ಶಿಕ್ಷಣವೆಂದರೆ ಕೇವಲ ಪುಸ್ತಕದ ಪಾಠವಲ್ಲ.ಅದು ವ್ಯಕ್ತಿತ್ವದ ರೂಪುರೇಷೆ ಅದು ಕನಸುಗಳಿಗೆ ದಿಕ್ಕು.ಅದು ಜೀವನಕ್ಕೆ ಬೆಳಕು.ಈ ಸತ್ಯವನ್ನು ಹೃದಯಂಗಮ ಮಾಡಿಕೊಂಡು, ಕುಂದಾಪುರದ ಪವಿತ್ರ ನೆಲದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ಶ್ರೀ ವೆಂಕಟರಮಣ ದೇವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಿ. ಕುಂದಾಪುರ ಇದರ ಕನಸಿನ ಕೂಸಾಗಿ 2010ರಲ್ಲಿ ಸ್ಥಾಪನೆಯಾಯಿತು. ಕೇವಲ 34 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಕಾಲೇಜು, ಇಂದು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದು […]
ಕಾರ್ಕಳ :ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್‌ನಲ್ಲಿ ಮೊದಲ ಹಂತದ ಪಲಿತಾಂಶ

ಕಾರ್ಕಳ :ಎನ್.ಟಿ.ಎ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್- 2026ರ ವಿಭಾಗದ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ನಿಶಾನ್ ಎನ್. ಸಾಲ್ಯಾನ್ 99.8525917 ಪರ್ಸಂಟೈಲ್ (ಬಿ.ಆರ್ಕ್), ಅನಿರುದ್ಧ್ ಆರ್ ಉಡುಪ 99.7009541 ಪರ್ಸಂಟೈಲ್ (ಬಿ.ಪ್ಲಾನ್) ಹಾಗೂ 99.1045499 ಪರ್ಸಂಟೈಲ್ (ಬಿ.ಆರ್ಕ್),ಇಶಾಂತ್ ಪಾಟೀಲ್ ಜಿ.ಎಂ 99.6629800 ಪರ್ಸಂಟೈಲ್ (ಬಿ.ಪ್ಲಾನ್),ಕನಿಷ್ಕ್ ಎಸ್ ಅಮಿನ್ 99.6501804 ಪರ್ಸಂಟೈಲ್ (ಬಿ.ಆರ್ಕ್) ಮತ್ತು 99.0553947 ಪರ್ಸಂಟೈಲ್ (ಬಿ.ಪ್ಲಾನ್),ಪ್ರಣವ್ ಪಿ ಶೆಟ್ಟಿ 99.3164665 ಪರ್ಸಂಟೈಲ್ […]
ಉಡುಪಿ:The High Point Lounge ನಲ್ಲಿ ಉದ್ಯೋಗಾವಕಾಶಗಳು

ಮಣಿಪಾಲ: The High Point Lounge ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಖಾಲಿ ಹುದ್ದೆಗಳು: ▪️ ಚೆಫ್ ಕುಕ್ – 04 (ಸ್ಥಳೀಯರಿಗೆ ಆದ್ಯತೆ)▪️ ವೇಯ್ಟರ್ಸ್ – 06▪️ ಲೇಡಿ ಸ್ಟಾಫ್ – 02▪️ ಹಾಸ್ಟೆಸ್ – 01▪️ ಕ್ಲೀನಿಂಗ್ – 02▪️ ಹೌಸ್ ಕೀಪಿಂಗ್ – 04 ಸ್ಥಳ: ಮಣಿಪಾಲಸಂಪರ್ಕ: 📞+91 8618629503ವಾಟ್ಸಪ್: 📞+971553342596
ಕಾರ್ಕಳದ ಮಹಾಮಸ್ತಕಾಭಿಷೇಕ ಮತ್ತು ಪ್ರಮುಖ ಯೋಜನೆಗಳ ಅಭಿವೃದ್ಧಿ: ಸಿಎಂ’ಗೆ ಶಾಸಕ ವಿ.ಸುನಿಲ್ ಕುಮಾರ್ ಮನವಿ

ಕಾರ್ಕಳ: ನೂತನವಾಗಿ ನಿರ್ಮಾಣವಾಗಿರುವ ಡಾ| ಬಿ. ಆರ್ ಅಂಬೇಡ್ಕರ್ ಭವನ ಲೋಕಾರ್ಪಣೆ ಮತ್ತು ಕಿಸಾನ್ ಸಭಾಭವನದ ಉದ್ಘಾಟನೆ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ಕಾರ್ಕಳಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಕಾರ್ಕಳ ಮಹಾ ಮಸ್ತಕಾಭಿಷೇಕ ಸೇರಿದಂತೆ ಕಾರ್ಕಳ ಕ್ಷೇತ್ರದ ವಿವಿಧ ಅಭಿವೃದ್ದಿ ಪ್ರಮುಖ ಯೋಜನೆಗಳಿಗೆ ಅನುದಾನ ಒದಗಿಸುವಂತೆ ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಮನವಿ ಸಲ್ಲಿಸಿದರು. ಮುಖ್ಯವಾಗಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಕಾರ್ಕಳಕ್ಕೆ ಆಗಮಿಸುವ ಅಸಂಖ್ಯಾತ ಯಾತ್ರಿಕರು […]
ಫೆ.28ರಿಂದ ಪಯಣ ಚಿತ್ರಕಲೆ- ಛಾಯಾಚಿತ್ರ ಪ್ರದರ್ಶನ

ಉಡುಪಿ: ಉಡುಪಿಯ ಆರ್ಟಿಸ್ಟ್ಸ್ ಫೋರಂ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ ‘ಪಯಣ’ ಫೆ.28ರಿಂದ ಮಾ.2ರವರೆಗೆ ಉಡುಪಿಯ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ಗ್ಯಾಲರಿ ದೃಷ್ಠಿಯಲ್ಲಿ ನಡೆಯಲಿದೆ ಎಂದು ಫೋರಂ ಅಧ್ಯಕ್ಷ ರಮೇಶ್ ರಾವ್ ತಿಳಿಸಿದರು. ಗ್ಯಾಲರಿ ದೃಷ್ಠಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರದರ್ಶನವನ್ನು ಫೆ.28ರಂದು ಸಂಜೆ 5ಗಂಟೆಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಲಿರುವರು.ಪ್ರದರ್ಶನದಲ್ಲಿ ಒಟ್ಟು 27 ಕಲಾವಿದರ ಒಟ್ಟು 40 ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ ಎಂದರು. ಈ ಪ್ರದರ್ಶನದಲ್ಲಿ ರಮೇಶ್ ರಾವ್, […]