ಬ್ರಹ್ಮಾವರ: ಮಾ.1ರಂದು ಮರಾಟಿ ಹೋಳಿ ಸಂಭ್ರಮ

ಉಡುಪಿ: ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ವತಿಯಿಂದ “ಮರಾಟಿ ಹೋಳಿ ಸಂಭ್ರಮ -2026” ಅನ್ನು ಇದೇ ಮಾರ್ಚ್ 1ರಂದು ಸಂಜೆ 4ಗಂಟೆಗೆ ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಆರ್.ಕೆ. ಪಾಟ್ಕರ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಉಮೇಶ್ ಎ. ನಾಯ್ಕ್ ಚೇರ್ಕಾಡಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಈ ಸಂಪ್ರದಾಯವನ್ನು ವಿಶ್ವಕ್ಕೆ ಪಸರಿಸಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. […]
ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮದ ಸಮಾರೋಪ: ಫೆ.28ಕ್ಕೆ “ಯುವ ಸಂಗಮ” ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಮಾ.1ಕ್ಕೆ ಯುವ ಬಿಲ್ಲವ ಸಮಾವೇಶ

ಉಡುಪಿ: ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮದ ಸಮಾರೋಪ ಸಮಾರಂಭವು ಇದೇ ಫೆ. 28 ಮತ್ತು ಮಾರ್ಚ್ 1ರಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ದಯಾನಂದ ಕರ್ಕೇರ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಜತ ಸಂಭ್ರಮದ ಸವಿ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಯುವ ಸ್ಪಂದನಾ, ಯುವ ಪ್ರೇರಣಾ, ಗುರು ಸನ್ಮತಿ, ಅಸಹಾಯಕ ಕುಟುಂಬಕ್ಕೆ ತಲೆಗೊಂದು ಸೂರಿನ ಯೋಜನೆಯಾದ ಮನೆ ನಿರ್ಮಾಣ, ವಿದ್ಯಾರ್ಥಿ ವೇತನದ ವಿದ್ಯಾನಿಧಿ, ವಿವಿಧ ಕಾರ್ಯಾಗಾರ, […]
ತನ್ನ ತಾಯಿಗೆ ಕೊನೆಯ ಸಂದೇಶ ಕಳುಹಿಸಿ ಬಿಎಸ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ.!

ಹೈದರಾಬಾದ್: ಬಿಎಸ್‌ಸಿ ವಿದ್ಯಾರ್ಥಿನಿ ಹಾಗೂ ಯೂಟ್ಯೂಬರ್ ಬೋನು ಕೋಮಲಿ (21) ಸೋಮವಾರ ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈಕೆ ಸಾವಿಗೂ ಮೊದಲು ಕುವೈತ್‌ನಲ್ಲಿರುವ ತನ್ನ ತಾಯಿಗೆ ‘ಐ ಲವ್ ಯೂ ಸೋ ಮಚ್ ಅಮ್ಮ’ ಎಂದು ಸಂದೇಶ ಕಳುಹಿಸಿದ್ದರು ಎಂದು ವರದಿಯಾಗಿದೆ. ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ತನ್ನ ತಾಯಿಗೆ ‘ಐ ಲವ್ ಯು ಸೋ ಮಚ್’ ಎಂದು ಮೆಸೇಜ್ ಮಾಡಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಆಂಧ್ರ ಮೂಲದ ಕೋಮಲಿ ಕಳೆದ 11 ತಿಂಗಳಿಂದ […]
ದೆಂದೂರು ತೋಟದಮನೆಯ ಸುಧಾಕರ ಪೂಜಾರಿ ನಿಧನ

ಉಡುಪಿ: ದೆಂದೂರು ಕಟ್ಟೆಯ ತೋಟದಮನೆಯ ಸುಧಾಕರ ಪೂಜಾರಿ (44) ಅವರು ಬುಧವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.ಅವರು ನಿನ್ನೆ ಬೆಳಿಗ್ಗೆ ಮನೆಯಲ್ಲಿ ದಿಢೀರ್ ಆಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಕಳ: ಫೇಸ್ ಬುಕ್ ನಲ್ಲಿ ಪ್ರಧಾನಿಗೆ ಅವಮಾನ- ಮಹಿಳೆ ವಿರುದ್ಧ ದೂರು ದಾಖಲು

ಉಡುಪಿ: ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಫೋಸ್ಟ್ ನ್ನು ಹಾಕಿದ ಬಿಂದು ಸಿರ ಎಂಬ ಮಹಿಳೆ ವಿರುದ್ಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ, ಕಾರ್ಕಳದ ರಮಿತಾ ಸೂರ್ಯವಂಶಿ ಈ ದೂರು ದಾಖಲಿಸಿದ್ದಾರೆ. ಬಿಂದು ಸಿರ ಎಂದು ಹೇಳುವ ಮಹಿಳೆ ಕರ್ನಾಟಕ ಕಾಂಗ್ರೆಸ್ ನ ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡಿದ್ದು ತನ್ನ ಸಾಮಾಜಿಕ ಜಾಲತಾಣದಲ್ಲಿ ಭಾರತ ದೇಶದ ಪ್ರಧಾನಿಗೆ ಅವಮಾನವಾಗುವ ಪೋಸ್ಟ್ ಅನ್ನು ಹರಿಬಿಟ್ಟಿರುತ್ತಾರೆ. ಭಾರತದ ಪ್ರಜೆಯಾಗಿ ದೇಶದ ಪ್ರಧಾನಿಗೆ […]