ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಮಾರ್ಗದಲ್ಲಿ ಬದಲಾವಣೆಗೆ ಹುನ್ನಾರ- ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ‌ ಆರೋಪ

ಉಡುಪಿ: ಬೆಂಗಳೂರು- ಮಾಡ್ಗಾಂವ್ ಮಾರ್ಗದಲ್ಲಿ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲು ಕೆಲ ಲಾಬಿ ನಡೆಯುತ್ತಿದೆ. ಮಂಗಳೂರಿನ ಸಿಟಿ ಒಳಗೆ ರೈಲು ಸಂಚಾರ ಮಾಡುವಂತೆ ಒತ್ತಡ ತರಲಾಗುತ್ತಿದ್ದು, ಇದರಿಂದ ರೈಲಿನ ಸಂಚಾರದಲ್ಲಿ ಬಹಳಷ್ಟು ವಿಳಂಬವಾಗಲಿದೆ. ದೂರದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಆಗಲಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ‌ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲತೆಯ […]

ಬ್ರಹ್ಮಾವರದಲ್ಲಿ ಪ್ರೊಫೆಷನಲ್ ಕರಿಯರ್‌ಗೆ ಸುವರ್ಣ ಅವಕಾಶ

ಬ್ರಹ್ಮಾವರ: ನಿವೃತ್ತ ಸರ್ಕಾರಿ ಹಾಗೂ ಖಾಸಗಿ ನೌಕರರು, ವಿ.ಆರ್‌.ಎಸ್ ಪಡೆದವರು, ಪಿಂಚಣಿದಾರರು, ನಿವೃತ್ತ ಬ್ಯಾಂಕ್ ನೌಕರರು ಮತ್ತು ಹಿರಿಯ ನಾಗರಿಕರಿಗೆ ಪ್ರೊಫೆಷನಲ್ ಕರಿಯರ್ ನಿರ್ಮಾಣಕ್ಕೆ ಸುವರ್ಣ ಅವಕಾಶ ಒದಗಿಸಲಾಗಿದೆ. ಇತರೆ ಸೌಲಭ್ಯಗಳು:ನಿಶ್ಚಿತ ವರಮಾನ,ಅತಿರಿಕ್ತ ವರಮಾನ, ಪ್ರಾವಿಡೆಂಟ್ ಫಂಡ್,ಇಎಸ್ಐ, ಗ್ರಾಚುಟಿ, ವಿದೇಶ ಪ್ರಯಾಣ,ಬಂಡವಾಳ ರಹಿತ ಕೆಲವೇ ಅವಕಾಶಗಳಿಗಾಗಿ ಕರೆ ಮಾಡಿ ಸದುಪಯೋಗಪಡಿಸಿಕೊಳ್ಳಿ. ಭಾರತದ ಅತ್ಯಂತ ಮೌಲ್ಯಯುತ ಮತ್ತು ಸರ್ಕಾರಿ ಮಾನ್ಯತೆ ಪಡೆದ ಬ್ಯಾಂಕಿಂಗ್ ಬ್ರಾಂಡ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶಗಳ ಕುರಿತು ವಿವರವಾದ ಮಾಹಿತಿ ಸಭೆಯಲ್ಲಿ ನೀಡಲಾಗುತ್ತದೆ. ಉಡುಪಿ ಬ್ರಹ್ಮಾವರದಲ್ಲಿ ವೃತ್ತಿ […]

ಮೇನಲ್ಲಿ ಪ್ರಥಮ ಬಾರಿಗೆ ವಿಧಾನಸೌಧ ಮೆಟ್ಟಿಲು ಮೇಲೆ ಯಕ್ಷಗಾನ ಪ್ರದರ್ಶನ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ವಿಧಾನಸಭಾ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಇದೇ ಪ್ರಥಮ ಬಾರಿಗೆ ಉಭಯತಿಟ್ಟುಗಳ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಮುಂಬರುವ ಮೇ ತಿಂಗಳಲ್ಲಿ ಆಯೋಜಿಸಲಾಗುವುದು ಎಂದು ವಿಧಾನಸೌಧದ ಸ್ಪೀಕರ್‌ ಯು. ಟಿ .ಖಾದರ್‌ ತಿಳಿಸಿದ್ದಾರೆ. ಈ ಬಗ್ಗೆ ಕರ್ನಾ ಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ಅಕಾಡೆಮಿ ನಿಯೋಗ ಮಂಗಳವಾರ ವಿಧಾನಸೌಧದ ಸ್ಪೀಕರ್‌ […]

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ – ನ್ಯಾಯಾಲಯ ತೀರ್ಪು

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೊಕ್ಸ್‌-ಎಫ್‌ಟಿ ಎಸ್‌ಸಿ-2 ) ನ್ಯಾಯಾಧೀಶ ಮಾನು ಕೆ.ಎಸ್. 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನಗರದಲ್ಲಿ ಆಟೋ ಚಾಲಕನಾಗಿರುವ ಮೂಲತ: ಬಾಗಲಕೋಟೆಯ ನಾಗರಾಜ್ ಶಿವಪ್ಪದುರಗಣ್ಣವರ (21) ಶಿಕ್ಷೆಗೊಳಗಾದ ಆರೋಪಿ.ಈತ ತನ್ನ ತಾಯಿಯ ಪರಿಚಯದ ಮಹಿಳೆಯ ಪುತ್ರಿಯ ಜೊತೆಗೆ ಅನ್ನೋನ್ಯವಾಗಿದ್ದು, ಆಕೆಯ ಮನೆಗೂ ಆಗಾಗ್ಗೆ ಹೋಗುತ್ತಿದ್ದ ಎನ್ನಲಾಗಿದೆ. 2025ರ […]

ಕೋಡಿ ಬ್ಯಾರೀಸ್ ಕಾಲೇಜು ಮತ್ತು ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಮಧ್ಯೆ ಶೈಕ್ಷಣಿಕ ಒಪ್ಪಂದ.

ಕುಂದಾಪುರ: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಮತ್ತು ಮಣಿಪಾಲದ ಡಾ.ಟಿ.ಎಂ.ಎ ಪೈ ಫೌಂಡೇಶನ್‌ನ ಅಂಗಸಂಸ್ಥೆ ಮಣಿಪಾಲ್ ಸ್ಕಿಲ್ ಡೆವಲಪ್ಟೆಂಟ್ ಸೆಂಟ‌ರ್(ಎಂಎಸ್‌ಡಿಸಿ) ನಡುವೆ ಶೈಕ್ಷಣಿಕ ಒಪ್ಪಂದದ ಸಹಿ ಸಮಾರಂಭವು ಬ್ಯಾರೀಸ್ ನಾಲೆಡ್ಜ್ ಕ್ಯಾಂಪ್‌ನ ಬೀಹೈವ್ ಕನ್ವೆನ್ನನ್‌ ಹಾಲ್‌ನಲ್ಲಿ ಜರಗಿತು. ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು, ಪ್ರಮುಖವಾಗಿ ಟ್ಯಾಲಿ, ಜಿಎಸ್‌ಟಿ ಅಕೌಂಟಿಂಗ್‌ ಮತ್ತು ಡೇಟಾ ಸೈನ್ಸ್‌ ಕೋರ್ಸ್‌ಗಳ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಖ್ಯ ಅತಿಥಿಯಾಗಿ ಎಂಎಸ್‌ಡಿಸಿ ಅಧ್ಯಕ್ಷ ಬ್ರಿಗೇಡಿಯ‌ರ್ ಡಾ.ಸುರ್ಜಿತ್ ಸಿಂಗ್ ಪಬ್ಲಾ […]