ಒಂದು  ನೆಲ್ಲಿಕಾಯಿಯಲ್ಲಿ ಅಡಗಿದೆ ಸೂಪರ್  ಪವರ್ : ನೆಲ್ಲಿಕಾಯಿ ಯಾಕೆ ತಿನ್ನಬೇಕು? ಹೇಗೆ ತಿನ್ನಬೇಕು?

ನೆಗಡಿ, ಕೆಮ್ಮು, ಜ್ವರದಂತಹ ತೊಂದರೆಗಳು ಈಗೀಗ ನಮ್ಮಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಅದಕ್ಕಾಗಿ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಸೇವಿಸುವುದು ಅಗತ್ಯ. ನಮಗೆ ಸುಲಭವಾಗಿ ದೊರೆಯುವ ಮತ್ತು ಅತ್ಯಂತ ಉಪಯುಕ್ತವಾದ ಸೂಪರ್‌ಫುಡ್ ಎಂದರೆ ನೆಲ್ಲಿಕಾಯಿ. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ನಮ್ಮ ದೇಹಕ್ಕೆ ನೆಲ್ಲಿಕಾಯಿ ಯಾಕೆ […]

ಕುಂದಾಪುರ: ಎನ್ಎಸ್ಎಸ್ ಕ್ಯಾಂಪ್ ಗೆ ತೆರಳುತ್ತಿದ್ದ ಕಾಲೇಜ್ ಬಸ್ ಪಲ್ಟಿ

ಉಡುಪಿ: ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಹಳ್ಳಿಹೊಳೆ ಸಮೀಪದ ಶೆಟ್ಟಿಪಾಲು ಎಂಬಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಹಳ್ಳಿಹೊಳೆ ಗ್ರಾಮದ ಸುಳಗೊಡು ಶಾಲೆಯಲ್ಲಿ ನಡೆಯುತ್ತಿದ್ದ ಎನ್ನೆಸ್ಸೆಸ್ ಶಿಬಿರಕ್ಕೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಉರುಳಿ ಬಿದ್ದಿದೆ. ಈ ವೇಳೆ ಬಸ್ ತೆಂಗಿನ ಮರಕ್ಕೆ ಢಿಕ್ಕಿಯಾಗಿ ನಿಂತಿದ್ದರಿಂದ ಭಾರೀ ಅನಾಹು ತಪ್ಪಿದೆ. ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಸ್ಸಿನ […]

ಶಾಸಕ ಗುರುರಾಜ್‌ ಗಂಟಿಹೊಳೆ ಅವರಿಂದ ದಲಿತ ದಂಪತಿಯ ಪಾದಪೂಜೆ

ಉಡುಪಿ: ಇತ್ತೀಚೆಗಷ್ಟೇ ಕರಾವಳಿಯ ಅತ್ಯಂತ ಹಿಂದುಳಿದ ಸಮುದಾಯವಾದ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿ, ಕೊರಗ ಬಂಧುಗಳೊಂದಿಗೆ ಊಟೋಪಚಾರ, ಸಂವಾದ ನಡೆಸಿ ಸುದ್ದಿಯಾಗಿದ್ದ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಇದೀಗ ಎಸ್‌ಸಿ ಕಾಲನಿಯಲ್ಲಿ ಸಹಭೋಜನ ನಡೆಸಿದ್ದಾರೆ. ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆ ಅಂಗಡಿ ಪ್ರದೇಶದ ಎಸ್‌ಸಿ ಕಾಲೋನಿ ಶಶಿಕುಮಾರ್ ಅವರ ಮನೆಗೆ ಭೇಟಿ ನೀಡಿ, ದಂಪತಿಗಳ ಪಾದಪೂಜೆ ನೆರವೇರಿಸಿ ಸಹಭೋಜನದಲ್ಲಿ ಭಾಗಿಯಾದರು. ಗಂಟಿಹೊಳೆ ಅವರ ಈ ನಡೆಯ ಬಗ್ಗೆ, ಪರಿಶಿಷ್ಟ ಕಾಲನಿಯ ಬಂಧುಗಳು ಸಂತಸ ವ್ಯಕ್ತಪಡಿಸಿದ್ದು […]

ವಿಟ್ಲ: ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ.!

ವಿಟ್ಲ: ಕೊಡಂಗಾಯಿ ಬಳಿಯ ಮೂರ್ಕಜೆ ಎಂಬಲ್ಲಿರುವ ಮೈತ್ರೇಯಿ ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಗುರುಕುಲದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿನಿ ಬೆಂಗಳೂರು ಮೂಲದ ವೈಗ ಲಕ್ಷ್ಮೀ ಮೃತಪಟ್ಟರು. ವೈಗ ಲಕ್ಷ್ಮೀ ರವಿವಾರ(ಫೆ.22)ದಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಇಂದು ಗುರುಕುಲದ ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮೇಲಕ್ಕೆತ್ತಿ, ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಫೆ. 25 ರಂದು ಕಾರ್ಕಳ ಡಾ.ಬಿ.ಆರ್ ಅಂಬೇಡ್ಕರ್ ಭವನ ನೂತನ ಕಟ್ಟಡ ಉದ್ಘಾಟನೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಕಾರ್ಕಳ ತಾಲೂಕಿನ ಕಾಬೆಟ್ಟುವಿನಲ್ಲಿ ಫೆಬ್ರವರಿ 25 ರಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹಾಗೂ […]