ಉಡುಪಿ: ನವೀಕೃತ “ಮನ್ ಪಸಂದ್ ಫ್ಯಾಮಿಲಿ ರೆಸ್ಟೋರೆಂಟ್” ಉದ್ಘಾಟನೆ

ಉಡುಪಿ: ಉಡುಪಿ ಹಳೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಉಡುಪಿಯ ಪ್ರಖ್ಯಾತ ಶಾಂಭವಿ ಹೋಟೆಲ್ಸ್ ನ ಅಂಗಸಂಸ್ಥೆಯಾದ ಸಂಪೂರ್ಣ ನವೀಕೃತಗೊಂಡ “ಮನ್ ಪಸಂದ್ ಫ್ಯಾಮಿಲಿ ರೆಸ್ಟೋರೆಂಟ್” ಭಾನುವಾರ ಉದ್ಘಾಟನೆಗೊಂಡಿತು. ಉಜ್ವಲ್ ಡೆವಲರ್ಪ್ ಪ್ರವರ್ತಕ ಪುರುಷೋತ್ತಮ ಶೆಟ್ಟಿ ಹಾಗೂ ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ನವೀಕೃತ ಹೋಟೆಲ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ನೌಕರರ ಹಿತ ಕಾಪಾಡಿದಾಗ ಒಂದು ಸಂಸ್ಥೆ ಅಭಿವೃದ್ಧಿ ಹೊಂದಲು […]

ಕುಂದಾಪುರ: ಬಾಲಕನ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಪ್ರಕರಣ- ಇಬ್ಬರ ಬಂಧನ

ಉಡುಪಿ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡೂರು ಪೇಟೆಯಲ್ಲಿ ಕಟಿಂಗ್ ಶಾಪ್‌ನಲ್ಲಿ ನಡೆದ ಘಟನೆಯನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಪ್ರಚೋದನೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶಶಾಂಕ ಭಂಡಾರಿ (30) ಮತ್ತು ಪ್ರಮೋದ ಡಿಸೋಜ (25) ಬಂಧಿತ ಆರೋಪಿಗಳು. ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಕಂಡೂರು ಪೇಟೆಯಲ್ಲಿರುವ ಕಟಿಂಗ್ ಶಾಪ್‌ನಲ್ಲಿ ಹೇಳಿದ ವಿಷಯವನ್ನು ಕೆಲವರು ವಿಡಿಯೋ ಮಾಡಿ, ಸಾರ್ವಜನಿಕರನ್ನು ಪ್ರಚೋದನೆಗೊಳಿಸಿ ಗಲಾಟೆ ಸೃಷ್ಟಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ […]

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಕೇಂದ್ರದಲ್ಲಿ ಸುಧಾರಿತ ಮಕ್ಕಳ ಕ್ಯಾನ್ಸರ್ ಅಸ್ಥಿ ಮಜ್ಜೆ ಕಸಿ ಘಟಕ ಮತ್ತು ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ಆಪರೇಷನ್ ಥಿಯೇಟರ್ ಉದ್ಘಾಟನೆ

ಮಣಿಪಾಲ, ಫೆಬ್ರವರಿ 24: ಕರ್ನಾಟಕದ ಪ್ರಮುಖ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳಲ್ಲಿ ಒಂದಾದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಇಂದು ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಕೇಂದ್ರದಲ್ಲಿ ಹೊಸದಾಗಿ ಸ್ಥಾಪಿಸಲಾದ ಮಕ್ಕಳ ಕ್ಯಾನ್ಸರ್ ಅಸ್ಥಿ ಮಜ್ಜೆ ಕಸಿ ಘಟಕ ಮತ್ತು ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ಆಪರೇಷನ್ ಥಿಯೇಟರ್ ಉದ್ಘಾಟಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಹೊಸದಾಗಿ ಉದ್ಘಾಟನೆಗೊಂಡ ಮಕ್ಕಳ ಆಂಕೊಲಾಜಿ ಬಿಎಂಟಿ ಘಟಕವು ಸುಧಾರಿತ ಮೂಲಸೌಕರ್ಯ, ವಿಶೇಷ ಐಸೋಲೇಷನ್ ಕೊಠಡಿಗಳು ಮತ್ತು ಅಸ್ಥಿ ಮಜ್ಜೆಯ ಕಸಿಗೆ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು […]

ಉಡುಪಿ:ನವೀನತೆ ಮೂಲಕ ಕಲ್ಪನೆಗಳ ರೂಪಣೆ ಮತ್ತು ಸಮಸ್ಯೆಗಳ ಗುರುತಿಸುವಿಕೆ ಬಗ್ಗೆ ಕಾರ್ಯಾಗಾರ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗವು ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಪಠ್ಯೇತರ ಚಟುವಟಿಕೆ ವಿಭಾಗದ ಸಹಯೋಗದೊಂದಿಗೆ , 20 ಫೆಬ್ರವರಿ 2026 ರಂದು “ನವೀನತೆಮೂಲಕ ಕಲ್ಪನೆಗಳ ರೂಪಣೆ ಮತ್ತು ಸಮಸ್ಯೆಗಳ ಗುರುತಿಸುವಿಕೆ” ಎಂಬವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಈ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೈಂಟ್ ಜೋಸೆಫ್ ಇಂಜಿನಿಯರಿ೦ಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಆಲ್ಡಿçನ್ ಕ್ಲೇಟಸ್ ವಾಜ್ ಇವರು ಭಾಗವಹಿಸಿದ್ದರು. ಇವರು ಐಒಟಿ ಎಂಬಡೆಡ್ ಸಿಸ್ಟಮ್ಸ್, ವಿದ್ಯಾರ್ಥಿಗಳು […]

ಉಡುಪಿ: ಮನರೇಗಾ ಯೋಜನೆಯ ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ ಯೋಜನೆ)ಯ ಹೆಸರು ಬದಲಾವಣೆ ಖಂಡಿಸಿ ಉಡುಪಿ ಜಿಲ್ಲಾ‌ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೂ ಮುನ್ನ ಮಣಿಪಾಲದ ಕಾಯಿನ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಲಾಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನಾ […]