ಸಿದ್ಧಾಪುರದ ಹೀರೋ ಶಕ್ತಿ ಮೋಟಾರ್ಸ್‌ನಲ್ಲಿ ಉದ್ಯೋಗಾವಕಾಶ

ಉಡುಪಿ:ಸಿದ್ಧಾಪುರ ಶಾಖೆಯ ಹೀರೋ ಶಕ್ತಿ ಮೋಟಾರ್ಸ್‌ನಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳಿಗಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔹ಬ್ರಾಂಚ್ ಮ್ಯಾನೇಜರ್ – 1🔹ಸೇಲ್ಸ್ ಎಕ್ಸಿಕ್ಯೂಟಿವ್ಸ್ – 2🔹ಸರ್ವಿಸ್ ಅಡ್ವೈಸರ್ – 1🔹ಹೌಸ್ ಕೀಪಿಂಗ್ – 1 ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಆಯ್ಕೆಯಾದವರಿಗೆ ಆಕರ್ಷಕ ವೇತನದೊಂದಿಗೆ PF / ESI ಹಾಗೂ ಪ್ರೋತ್ಸಾಹಧನ ಸೌಲಭ್ಯಗಳಿವೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 7996210666.

ಮುನಿಯಾಲು ಶ್ರೀಮನ್ನಾಗಮಂಡಲದಲ್ಲಿ ‘ರೈತಪೀಠ’ ಪ್ರಶಸ್ತಿ ಪ್ರದಾನ‌:ಸಾವಯವ ಕೃಷಿಯಿಂದ ಮಾತ್ರ ಬದುಕು ಉಳಿಯಲಿದೆ: ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ‌ ಅಭಿಮತ

ಹೆಬ್ರಿ: ಪ್ರಕೃತಿ ನಾಶ ಮಾಡಿದರೆ, ಮನುಷ್ಯ ನಾಶವಾದಂತೆ. ಪ್ರಕೃತಿ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿದ್ದೇವೆ ಎಂದರ್ಥ. ಪ್ರಕೃತಿಯನ್ನು ನಾಶ ಮಾಡಿ ಬೆಳವಣಿಗೆ ಎನ್ನುವುದು ಅಸಾಧ್ಯ. ಮುಂದಿನ ಪೀಳಿಗೆಗೆ ನಾವು ಪರಿಶುದ್ಧ ಪ್ರಕೃತಿಯನ್ನು ಬಿಟ್ಟುಹೋಗಬೇಕು, ಅಂತಹ ಮಹಾನ್‌ ಕಾರ್ಯವನ್ನು ಮುನಿಯಾಲು ಸಂಜೀವಿನಿ ಗೊಧಾಮದ ಮೂಲಕ ರಾಮಕೃಷ್ಣ ಆಚಾರ್ಯರು ಮಾಡುತ್ತಿದ್ದಾರೆ. ಕೃಷಿಯಿಂದಲೇ ದೇಶದ ಭವ್ಯ ಬೆಳವಣಿಗೆ ಸಾಧ್ಯವಿದೆ. ಅದು ಮುಂದಿನ ಅನಿವಾರ್ಯ ಕೂಡ ಆಗಲಿದೆ, ಅಂತಹ ಮಹಾನ್‌ ಕಾರ್ಯಗಳು ನಮ್ಮಿಂದಲೇ ಆರಂಭವಾಗಬೇಕು. ಗೋಧಾಮದಲ್ಲಿ ಕೃಷಿ ಪೂರಕ ಉತ್ತಮ ಚಟುವಟಿಕೆ ನಡೆಯುತ್ತಿರುವುದು ಅಭಿನಂದನೆ […]

ಉಡುಪಿ:ತೆರಿಗೆ ಪಾವತಿ ಚಲನ್ ಪರಿಶೀಲನೆಗೆ ಸೂಚನೆ

ಉಡುಪಿ: ಉಡುಪಿ ನಗರಸಭೆಗೆ ಪಾವತಿಸುವ ತೆರಿಗೆಯಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ನಗರಸಭೆ ಖಾತೆಗೆಜಮಾ ಮಾಡದೇ ಯೂನಿಯನ್ ಬ್ಯಾಂಕ್ ಸೀಲ್‌ನ್ನು ಹಾಕಿರುವ ಚಲನ್‌ಗಳು ಈ ಕಛೇರಿಗೆ ಬರುತ್ತಿದ್ದು, ಆರೋಪಿಗಳು ಬ್ಯಾಂಕ್ ಸೀಲ್‌ನ್ನು ದುರ್ಬಳಕೆ ಮಾಡಿ ತೆರಿಗೆ ವಂಚಿಸಿರುವುದು ಕಂಡು ಬಂದಿದ್ದು, ಈಗಾಗಲೇ ಪ್ರಕರಣ ದಾಖಲಾಗಿರುತ್ತದೆ. ಉಡುಪಿ ನಗರಸಭೆ ಆಸ್ತಿತೆರಿಗೆ ಹಾಗೂ ಇತರೇ ಸೇವೆಯ ಚಲನ್‌ಗಳನ್ನು ಮಾಡಲು ಮೂರನೇ ವ್ಯಕ್ತಿಗೆ ನಗದನ್ನು ನೀಡಿ ತೆರಿಗೆ ಪಾವತಿಸಿದ್ದಲ್ಲಿ,ಚಲನ್‌ನೊಂದಿಗೆ ಕಛೇರಿಗೆ ಭೇಟಿ ನೀಡಿ ಕಂದಾಯ ವಿಭಾಗದಲ್ಲಿ ಪರಿಶೀಲಿಸಿಕೊಳ್ಳುವುದು ಹಾಗೂ ತೆರಿಗೆ […]

ಉಡುಪಿ:ತಮಿಳುನಾಡು ಮೂಲಕ ದಂಪತಿಗೆ ಮಗುವಿನ ದತ್ತು ಆದೇಶ ನೀಡಿದ ಜಿಲ್ಲಾಧಿಕಾರಿಗಳು

ಉಡುಪಿ: ತಮಿಳುನಾಡು ಮೂಲದ ದಂಪತಿಗೆ ಒಂದು ಮಗುವಿನ ಅಂತಿಮ ದತ್ತು ಆದೇಶವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ 2021ರ ಸೆಕ್ಷನ್ 56 (1) 58 ಮತ್ತು 61ರ ಅಡಿಯಲ್ಲಿ ಕುಟುಂಬದ ಪ್ರೀತಿ […]

ಉಡುಪಿ:ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ

ಉಡುಪಿ: ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿ ವತಿಯಿಂದ ಬ್ಯಾಂಕಿನ 102 ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿಜಿಲ್ಲಾ ಆಸ್ಪತ್ರೆ ರಕ್ತ ನೀಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಮತ್ತು ಗಾಂಧಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ, ಉಡುಪಿಯ ಅಂಬಾಗಿಲಿನ ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿ ಯಲ್ಲಿ ಬುಧವಾರ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಹಲಸೆ ಮಾತನಾಡಿ, ರಕ್ತದಾನ ದಂತಹ ಮಹತ್ ಕಾರ್ಯದಲ್ಲಿ ಅರ್ಹರುಪಾಲ್ಗೊಳ್ಳುವುದರೊಂದಿಗೆ, […]