ಫೆ. 22 ರಂದು ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್, ಕಾರ್ಕಳ ದಲ್ಲಿ ನೇರ ಸಂದರ್ಶನ

ಕಾರ್ಕಳ: ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ಕಾರ್ಕಳ , ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಶಿಕ್ಷಕರ ಹುದ್ದೆಗಳಿಗಾಗಿ ಫೆ. 22 ರಂದು ಸಂದರ್ಶನ ನಡೆಯಲಿದೆ. ಅಗತ್ಯವಿರುವ ಶಿಕ್ಷಕರ ವಿಷಯಗಳು:ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್, ಹಿಂದಿ ಹಾಗೂ ಸಂಸ್ಕೃತ. ಅರ್ಹತೆ:🔹ಪದವಿ/ಪೋಸ್ಟ್ ಗ್ರಾಜುಯೇಶನ್ ಜೊತೆಗೆ B.Ed ಪದವಿ.🔹ಅನುಭವ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಈವರೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳೂ ಕೂಡ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ತಮ್ಮ ರೆಸ್ಯೂಮ್ ಅನ್ನು ಕಡ್ಡಾಯವಾಗಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : […]

ವಿವಿಧ ದೇಶಗಳ ಮೇಲೆ ಟ್ರಂಪ್ ವಿಧಿಸಿದ್ದ ಸುಂಕ ರದ್ದು: ಭಾರತಕ್ಕೂ ಈಗ ಕೊಂಚ ನಿರಾಳ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಈ ತೀರ್ಪು ಟ್ರಂಪ್‌ ಅಡಳಿತಕ್ಕೆ ಬಲುದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.ಟ್ರಂಪ್‌ ಅವರು ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 6:3 ಬಹುಮತದ ತೀರ್ಪು ನೀಡಿತು. ‘ಸುಂಕಗಳನ್ನು ಒಳಗೊಂಡಂತೆ ಎಲ್ಲ ರೀತಿಯ ತೆರಿಗೆಗಳನ್ನು ವಿಧಿಸುವ ಅಧಿಕಾರವು ಕಾಂಗ್ರೆಸ್‌ಗೆ (ಸಂಸತ್ತು) ಮಾತ್ರ ಇದೆ ಎಂಬುದನ್ನು ಸಂವಿಧಾನದಲ್ಲಿ ‘ಬಹಳ ಸ್ಪಷ್ಟವಾಗಿ’ ಹೇಳಲಾಗಿದೆ’ […]

ಬ್ರಹ್ಮಾವರ: ಗೂಡ್ಸ್ ವಾಹನ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು.

ಬ್ರಹ್ಮಾವರ: ಗೂಡ್ಸ್ ವಾಹನವೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಆರೂರು ಕ್ರಾಸ್ (ಕುಂಜಾಲು) ಎಂಬಲ್ಲಿ ಫೆ.20ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಆರೂರಿನ ಶೇಖರ್ ಟಿ.ಕುಲಾಲ್ ಎಂದು ಗುರುತಿಸಲಾಗಿದೆ. ಆರೂರು ಮುಖ್ಯ ರಸ್ತೆಯನ್ನು ದಾಟಿ ಡಿವೈಡರ್ ಪಾಸ್ ಮಾಡುತ್ತಿದ್ದ ಸ್ಕೂಟರ್‌ಗೆ ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶೇಖರ್ ಕುಲಾಲ್ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. […]

ಶಿರ್ವ: ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾದ ಯುವಕರ ತಂಡ

ಉಡುಪಿ: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಮೂರು ಮಂದಿ ಯುವಕರ ತಂಡವೊಂದು ವೃದ್ದೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಶಂಕರಪುರದಲ್ಲಿ ನಡೆದಿದೆ. ಹೆಲೆನ್ ಡಿಸೋಜಾ (70) ಸರ ಕಳೆದುಕೊಂಡ ವೃದ್ಧ ಮಹಿಳೆ. ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಈಕೆ ಮನೆಯಲ್ಲಿರುವಾಗ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದ ಯುವಕರ ತಂಡ ಅಕ್ಕ ಪಕ್ಕದ ಮನೆಯವರ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಮಹಿಳೆಯ ಮೊಬೈಲ್ ನಂಬ‌ರ್ ಕೇಳಿ ಬರೆಯುತ್ತಿದ್ದಂತೆ […]

ಉಡುಪಿ: ಫೆ. 25ರಂದು ಕಾರ್ಕಳಕ್ಕೆ ಸಿಎಂ ಭೇಟಿ – ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. 25ರಂದು ಜಿಲ್ಲೆಗೆ ಆಗಮಿಸಿ, ಕಾರ್ಕಳ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ. 25ರ ಬೆಳಿಗ್ಗೆ 11.30ರಿಂದ ಕಾರ್ಕಳ ಕಾಡಬೆಟ್ಟುವಿನಲ್ಲಿ ಅಂಬೇಡ್ಕ‌ರ್ ಭವನ ಉದ್ಘಾಟನೆ, ಅನಂತರ ಕುಕ್ಕುಂದೂರಿನಲ್ಲಿ ಮಹಾತ್ಮಗಾಂಧಿ ವಸತಿ ಶಾಲೆಯ ಕಿಸಾನ್ ಸಭಾಂಗಣ ಉದ್ಘಾಟನೆ ಹಾಗೂ ಶಾಲೆಯ 35ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅನಂತರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಅನಂತರ ನಿರ್ಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.