ಕಾರ್ಕಳ: ಮನೆಯಲ್ಲಿ ಕುಸಿದುಬಿದ್ದು ಯುವಕ ಮೃತ್ಯು

ಕಾರ್ಕಳ: ಮನೆಯಲ್ಲಿ ಕುಳಿತಿದ್ದ ಯುವಕನೋರ್ವ ದಿಢೀರ್ ಆಗಿ ಕುಸಿದುಬಿದ್ದು ಮೃತಪಟ್ಟ ಘಟನೆ ಫೆ. 19ರಂದು ಕಾರ್ಕಳ ತಾಲೂಕಿನ ಎರ್ಲಪಾಡಿಯಲ್ಲಿ ನಡೆದಿದೆ. ಎರ್ಲಪಾಡಿಯ ನಿವಾಸಿ ಸುಹೇಶ್ (22) ಮೃತಪಟ್ಟ ಯುವಕ. ಇವರು 15 ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದು, ಔಷಧಿ ತೆಗೆದುಕೊಳ್ಳುತ್ತಿದ್ದರು. ಗುರುವಾರ ಮನೆಯಲ್ಲಿ ಕುಳಿತಿದ್ದವರು ಒಮ್ಮೇಲೆ ಕೆಳಗೆ ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸುಹೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ‌. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ […]

ಉಡುಪಿ: ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಸಂಪನ್ನ

ಉಡುಪಿ: ಶ್ರೀ ಕೃಷ್ಣಮಠ ಪರಿಸರದ ರಥಬೀದಿಯಲ್ಲಿರುವ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಸಂಪನ್ನಗೊಂಡಿತು. ರಥೋತ್ಸವ ಪ್ರಯುಕ್ತ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ ಉತ್ಸವ, ಮಧ್ಯಾಹ್ನ ಪಲ್ಲಪೂಜೆ, ಅನ್ನಸಂತರ್ಪಣೆಯೊಂದಿಗೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿತು. ಈ ಸಂದರ್ಭ ದೇವಸ್ಥಾನವನ್ನು ವಿವಿಧ ಬಗೆಯ ಹೂವು ಮತ್ತು ತರಕಾರಿಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಯಿತು. ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥಾರೋಹಣ ನಡೆಯಿತು. ದೇವಸ್ಥಾನದ ಆಡಳಿತ […]

ಬೈಂದೂರು: ಟಯರ್ ಸ್ಫೋಟಗೊಂಡು ಸೇತುವೆ ಮೇಲೆಯೇ ಹೊತ್ತಿಉರಿದ ಲಾರಿ- ಲಕ್ಷಾಂತರ ರೂ. ನಷ್ಟ

ಉಡುಪಿ: ಟಯರ್ ಸ್ಫೋಟಗೊಂಡು ಲಾರಿಯೊಂದು ಸೇತುವೆ ಮೇಲೆ ಹೊತ್ತಿ ಉರಿದ ಘಟನೆ ಗುರುವಾರ ಮಧ್ಯರಾತ್ರಿ ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿದೆ. ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿಯು ರಾತ್ರಿ 1ಗಂಟೆ ಸುಮಾರಿಗೆ ಬಿಜೂರು ಬಳಿ ಆಗಮಿಸುತ್ತಿದ್ದ ವೇಳೆ ಅದರ ಹಿಂಬದಿಯ ಟಯರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಲಾರಿ ಹೊತ್ತಿಉರಿದಿದ್ದು, ಭಾಗಶಃ ಲಾರಿ ಸಹಿತ ಒಳಗಿದ್ದ ಪಶು ಆಹಾರಗಳು ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಲಾರಿ ಚಾಲಕ ಚಂದ್ರಕಾಂತ್ ಎನ್ನುವರು ಅಪಾಯದಿಂದ […]

ಹೆಬ್ರಿಯ ಎಸ್.ಆರ್. ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಹೆಬ್ರಿ:ಹೆಬ್ರಿಯಲ್ಲಿರುವ ಎಸ್.ಆರ್. ಗ್ರೂಪ್ ಆಫ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ವಿವಿಧ ಶಿಕ್ಷಕ ಹಾಗೂ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಎಸ್.ಆರ್. ಪಿಯು ಕಾಲೇಜು:▪️ಕಂಪ್ಯೂಟರ್ ಸೈನ್ಸ್, ಗಣಿತ, ▪️ಕಾಮರ್ಸ್, ಸ್ಟಾಟಿಸ್ಟಿಕ್ಸ್, ಸಂಸ್ಕೃತ ವಿಷಯಗಳಿಗೆ ಶಿಕ್ಷಕರ ಅಗತ್ಯವಿದೆ. ಅರ್ಹತೆ: ಮಾಸ್ಟರ್ ಡಿಗ್ರಿ ಜೊತೆ B.Ed / BE (ಕಂಪ್ಯೂಟರ್ ಸೈನ್ಸ್).ಅನುಭವ ಹಾಗೂ ಉತ್ತಮ ಸಂವಹನ ಕೌಶಲ್ಯ ಅಗತ್ಯ. ಎಸ್.ಆರ್. ಪಬ್ಲಿಕ್ ಸ್ಕೂಲ್ (CBSE), ಹೆಬ್ರಿ:▪️ಗಣಿತ, ಸೈನ್ಸ್, ಪ್ರಿ-ಕೆಜಿ, ಕಂಪ್ಯೂಟರ್,▪️ಹಿಂದಿ, ಸಂಗೀತ, ಡ್ರಾಯಿಂಗ್ ವಿಷಯಗಳಿಗೆ ಶಿಕ್ಷಕರ ಅಗತ್ಯವಿದೆ. ಅರ್ಹತೆ: MA / M.Sc […]

ಪೆರ್ಡೂರು: ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ. ಪೆರ್ಡೂರು ಗ್ರಾಮದ ಪಾಡಿಗಾರು ನಿವಾಸಿ ರಾಘವೇಂದ್ರ (36) ಮತ್ತು ಕುಂಜದಕಟ್ಟೆ ನಿವಾಸಿ ಸುಧೀಂದ್ರ ಶೆಟ್ಟಿ ಯಾನೆ ಬಾಬು (36) ಬಂಧಿತ ಆರೋಪಿಗಳು. ಈ‌ ಇಬ್ಬರು ಫೆ.17 ರಂದು ರಾತ್ರಿ ಸುಮಾರು 10:30ಕ್ಕೆ ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು […]