ಕಾರ್ಕಳ: ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆ.

ಕಾರ್ಕಳ: ಕಾರ್ಕಳದಲ್ಲಿ ಮುಂದಿನ ವರ್ಷ 2027 ರಲ್ಲಿ ಐತಿಹಾಸಿಕ ಶ್ರೀ ಬಾಹುಬಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ದೇಶ ವಿದೇಶಗಳಿಂದ ಸಹಸ್ರಾರು ಯಾತ್ರಾತ್ರಿಗಳು, ಪ್ರವಾಸಿಗರು ಕಾರ್ಕಳ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ ಎಂ ಏನ್ ರಾಜೇಂದ್ರ ಕುಮಾರ್ ಹಾಗೂ ಮಹಾವೀರ್ ಹೆಗ್ಡೆಯವರ ನೇತೃತ್ವದಲ್ಲಿ ಮಾಜಿ ಸಚಿವರು, ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನೀಲ್ ಕುಮಾರ್ ರವರೊಂದಿಗೆ […]
ಕಲ್ಮಾಡಿಯಲ್ಲಿ ಶಿವಗಾನಾಮೃತ’ ಭಜನೆ ಕಾರ್ಯಕ್ರಮ ಉದ್ಘಾಟನೆ

ಉಡುಪಿ : ಭಜನೆ ಭಗವಂತನನ್ನು ಒಲಿಸಿಕೊಳ್ಳುವ ಕ್ಷಿಪ್ರ ಸಾಧನವಾಗಿದೆ ಅಲ್ಲದೆ ಅಧ್ಯಾತ್ಮಿಕ ಸಾಧನೆಗೆ ಮೂಲಾಧಾರವಾಗಿದೆ. ಭಜನೆಯಿಂದ ಭಗವಂತನ ಕೃಪೆ ಮಾತ್ರವಲ್ಲದೆ ಇಹಪರ ಸಾಧನೆಗೂ ಪೂರಕ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಸಹಕಾರದಲ್ಲಿ ಮಲ್ಪೆ ಕಲ್ಮಾಡಿಯ ಶ್ರೀ ಭಗವತಿ ಮಾರಿಕಾಂಬಾ ಸನ್ನಿದಿಯ ಆವರಣದಲ್ಲಿ ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ‘ಶಿವಗಾನಾಮೃತ’ ಭಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […]
ಉಡುಪಿ: ಬಿಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ಬಿಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಫ್ರೆಶರ್‌ಗಳು ಸಹ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆ ತಿಳಿಸಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಕಳುಹಿಸಿ ಅರ್ಜಿ ಸಲ್ಲಿಸಬಹುದು.📧 ಇಮೇಲ್: [email protected]
ಉಡುಪಿ: ಸರಕಾರಿ ಬಾಲಕರ ಬಾಲಮಂದಿರದೊಳಗೆ ನುಗ್ಗಿದ ಹಾವಿನ ರಕ್ಷಣೆ

ಉಡುಪಿ: ದೊಡ್ಡಣಗುಡ್ಡೆಯ ಸರಕಾರಿ ಬಾಲಕರ ಬಾಲಮಂದಿರದ ಒಳಾಂಗಣದಲ್ಲಿ ಹಾವೊಂದು ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿಯಾಯಿತು. ತಕ್ಷಣ ಬಾಲಮಂದಿರದ ಮೇಲ್ವಿಚಾರಕರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ನೆರವಿಗೆ ಬಂದ ಒಳಕಾಡುರವರು, ಉರಗರಕ್ಷಕರಾದ ಬಶೀರ್ ಎಂಬವರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಹಾವನ್ನು ಸೆರೆಹಿಡಿಸಿ, ಸುರಕ್ಷಿತ ಸ್ಥಳಕ್ಕೆ ಬಿಡುಗಡೆಗೊಳಿಸುವ ವ್ಯವಸ್ಥೆಗೊಳಿಸಿದರು. ರಕ್ಷಿಸಲ್ಪಟ್ಟ ಹಾವು ವಿಷಕಾರಿ ಅಲ್ಲವೆಂದು ಉರಗತಜ್ಞರು ಖಚಿತಪಡಿಸಿದರು.
ಉಡುಪಿ: ನಗರ ಕುಟುಂಬ ಕಲ್ಯಾಣ ಕೇಂದ್ರ ಸ್ಥಗಿತ; ಪುನರಾರಂಭಿಸಲು ಆಗ್ರಹ

ಉಡುಪಿ: ಕುಕ್ಕಿಕಟ್ಟೆ ಡಯಾನ ಚಿತ್ರಮಂದಿರದ ಎದುರು ಸುಮಾರು ಇಪ್ಪತ್ತು ವರ್ಷಗಳಿಂದ ಸೇವಾ ನಿರತವಾಗಿದ್ದ ನಗರ ಕುಟುಂಬ ಕಲ್ಯಾಣ ಕೇಂದ್ರವು ಸೇವೆಯನ್ನು ಸ್ಥಗಿತಗೊಳಿಸಿದ್ದು, ಬಾಗಿಲಿಗೆ ಬೀಗ ಜಡಿಯಲಾಗಿದೆ. ಇದರಿಂದ ಪರಿಸರದ ಸುತ್ತಮುತ್ತಲಿನ ನಾಗರಿಕರು ಚಿಕಿತ್ಸೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಶಿಶುಗಳಿಗೆ ಲಸಿಕೆ, ಚುಚ್ಚುಮದ್ದು ಹಾಗೂ ಗರ್ಭಿಣಿಯರಿಗೆ ತಪಾಸಣೆ, ಅಗತ್ಯ ಚಿಕಿತ್ಸೆಗಳು ಕ್ಲಪ್ತ ಸಮಯದಲ್ಲಿ ದೊರೆಯುತಿತ್ತು. ಅಲ್ಲದೆ ಜ್ವರಬಾಧೆ, ಶೀತ, ಕೆಮ್ಮು ಮೊದಲಾದ ವ್ಯಾಧಿಗಳಿಂದ ಬಳಲುವ ರೋಗಿಗಳು ಚಿಕಿತ್ಸೆ ಪಡೆಯಲು ಅವಕಾಶವಿತ್ತು. ಕೇಂದ್ರ ಸ್ಥಗಿತಗೊಂಡಿರುವುದರಿಂದ ನಗರದ ಖಾಸಗಿ ಆಸ್ಪತ್ರೆಗಳಲ್ಲಿ […]