ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಪುನರಾಯ್ಕೆ

ಕಾರ್ಕಳ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾರ್ತಾಭಾರತಿ ಪತ್ರಿಕೆಯ ಮುಹಮ್ಮದ್ ಶರೀಫ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿ ಫೋರ್ ಚಾನೆಲ್‌ನ ಕೆ.ಎಂ. ಖಲೀಲ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಂಜೆ ಪ್ರಭ ಪತ್ರಿಕೆಯ ಹರೀಶ್ […]

ಉಡುಪಿ:ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿ:ಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ ಲಘು ಸಂಘಟಿತ ಅಪರಾಧ ಎಸಗಿದ ಆರೋಪದ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಆರೋಪಕ್ಕೆ ಸಂಬoಧಿಸಿದoತೆ ಲಾರಿಯ ಚಾಲಕನಾದ ವಸಂತ್‌ರವರನ್ನು ಬಂಧಿಸಿ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ಉಡುಪಿಗೆ ಹಾಜರು ಪಡಿಸಿದ ಸಮಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ನ್ಯಾಯಾಲಯವು ಆರೋಪಿಗೆ ಮಧ್ಯಂತರ ಜಾಮೀನು ಆದೇಶ ಮಾಡಿರುತ್ತದೆ. ಆರೋಪಿ ವಸಂತ್‌ರವರು ಇತರರೊಂದಿಗೆ ಸೇರಿಕೊಂಡು ಅಂಪಾರಿನ ದಕ್ಕೆಯಿಂದ ಮರಳನ್ನು […]

ಉಡುಪಿ: ಅಂದ‌ರ್-ಬಾಹ‌ರ್ ಇಸ್ಪೀಟ್ ಜೂಜಾಟದ ಅಡ್ಡೆಗೆ ಪೊಲೀಸರ ದಾಳಿ: ಐವರ ಬಂಧನ

ಉಡುಪಿ: ಅಂದ‌ರ್-ಬಾಹ‌ರ್ ಇಸ್ಪೀಟ್ ಜೂಜಾಟ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ, 4,90,920 ನಗದು ಸೇರಿದಂತೆ ವಾಹನಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಲ್ಲಾಳ ಅಂಬಲ್ಲಮೊಗರು ನಿವಾಸಿ ನಿತಿನ್ ರಾಜ್ (35), ಕಾಪು ಪಲಿಮಾರು ಗ್ರಾಮದ ಸಚಿನ್ ಆರ್ ಶೆಟ್ಟಿ (35), ಮಂಗಳೂರು ಕಂಕನಾಡಿ ಗ್ರಾಮದ ಸತೀಶ್ @ ಕಿಶೋರ್ (38), ಸುರತ್ಕಲ್ ನಿವಾಸಿಗಳಾದ ರಂಜಿತ್ ಕೆ ಅಮೀನ್ (39) ಹಾಗೂ ರವಿ (36) ಬಂಧಿತ ಆರೋಪಿಗಳು. ಸ್ಥಳದಲ್ಲಿದ್ದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು, […]

ಉಡುಪಿ: ಯುವ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆಗೈದ ಪ್ರಕರಣ: ಐವರು ಆರೋಪಿಗಳ ಬಂಧನ

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಎನ್ ಎಸ್ ಯು ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಎಂದು ಗುರುತಿಸಲಾಗಿದೆ. ಜನವರಿ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ಚಿಟ್ಟಾಡಿ ಬೈಲೂರು ಬಡಗುಬೆಟ್ಟು ನಿವಾಸಿ […]

ಉಡುಪಿಯ ಜನಾರ್ದನ ಹೋಟೆಲ್‌ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಜನಾರ್ದನ ಹೋಟೆಲ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು:🔸ರಿಸೆಪ್ಷನಿಸ್ಟ್ / ಫ್ರಂಟ್ ಆಫೀಸ್ ಅಸೋಸಿಯೇಟ್: (ಪುರುಷರು ಮಾತ್ರ) – 1 ಹುದ್ದೆ ▪ಕನಿಷ್ಠ 1 ವರ್ಷದ ಅನುಭವ ಇರಬೇಕು.▪ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪ್ರವೀಣತೆ ಅಗತ್ಯ ಇರಬೇಕು. 🔸ರೂಮ್ ಬಾಯ್ಸ್ (2 ಹುದ್ದೆ) ಆಸಕ್ತರು ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು:📞 7259123933 / 9845792366ಅಥವಾ ಇಮೇಲ್ ಕಳುಹಿಸಬಹುದು:📧 [email protected]