ಅಬಕಾರಿ ಸಚಿವ ತಿಮ್ಮಾಪುರ್ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ- ಪ್ರತಾಪಸಿಂಹ ನಾಯಕ್ ಆಗ್ರಹ

ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರಿಂದಲೇ ಮುಖ್ಯಮಂತ್ರಿ‌ ಹಾದಿಯಾಗಿ ಇಡೀ ಮಂತ್ರಿಮಂಡಲ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವರ ರಕ್ಷಣೆಯಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆರೋಪಿಸಿದರು. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಅಬಕಾರಿ ಡಿಸಿಯ ಆಡಿಯೋದಲ್ಲಿ ಸಚಿವರಿಗೆ ಒಂದು ಕೋಟಿ ಲಂಚ ಕೊಡಬೇಕಿದೆ ಎಂಬುವುದು […]

ಉಡುಪಿ: ಲಾಡ್ಜ್ ನಲ್ಲಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲೇ ವ್ಯಕ್ತಿ ಮೃತ್ಯು

ಉಡುಪಿ: ಉಡುಪಿ ನಗರದ ಹಳೆ ಸರಕಾರಿ ಬಸ್ ನಿಲ್ದಾಣದ ಬಳಿ ಇರುವ ವಸತಿಗೃಹದಲ್ಲಿ ಯಾತ್ರಾರ್ಥಿಯೊಬ್ಬರು ಕುಳಿತ ಕುರ್ಚಿಯಲ್ಲಿಯೇ ಸಾವನಪ್ಪಿರುವ ಘಟನೆ‌ ನಡೆದಿದೆ.‌ವ್ಯಕ್ತಿಯು ಕೊಠಡಿಯಿಂದ‌ ಹೊರಬರದಿರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ‌ಸಂಶಯಪಟ್ಟು ಬಾಗಿಲು‌ ತೆರೆದು‌ ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ. ಮೃತ ವ್ಯಕ್ತಿಯನ್ನು ದಾವಣಗೆರೆಯ ನಿವಾಸಿ ಮಹಾಂತೇಶ ಎಂ.ಜಿ. ಎಂದು ಗುರುತಿಸಲಾಗಿದೆ. ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ಮನೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಬಂದಿದ್ದನೆಂದು ತಿಳಿದುಬಂದಿದೆ. ನಗರ ಪೋಲಿಸ್ […]

ಕುಂದಾಪುರ: ಎಂಐಟಿಕೆ’ಯಲ್ಲಿ ‘ಬಜೆಟ್ ವಿಶ್ಲೇಷಣೆ-2026’

ಕುಂದಾಪುರದ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಇಲ್ಲಿನ ಡಿಪಾರ್ಟ್ಮೆಂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (MBA) ವತಿಯಿಂದ ಕಾಲೇಜಿನಲ್ಲಿ “ಬಜೆಟ್ ವಿಶ್ಲೇಷಣೆ–2026” ಕುರಿತ ಸ್ಪರ್ಧೆಯನ್ನು ಎಂ ಬಿ ಎ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಉಪಸ್ಥಿತರಿದ್ದು, ಸ್ಪರ್ಧೆಗೆ ಶುಭ ಹಾರೈಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಅವರು ತಿಳಿಸಿದರು. ಈ ಸ್ಪರ್ಧೆಯ ಉದ್ದೇಶ ವಿದ್ಯಾರ್ಥಿಗಳಿಗೆ ಕೇಂದ್ರ ಬಜೆಟ್ 2026 ಕುರಿತು […]

ಬಳ್ಳಾರಿ: ಉತ್ಖನನದಲ್ಲಿ ಸಿಕ್ಕಿತು ಮಾನವ ಅಸ್ಥಿಪಂಜರ, 5000 ವರ್ಷ ಹಳೆಯ ಅವಶೇಷ!!

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಉತ್ಪನನ ಹಾಗೂ ಶೋಧನಾ ಕಾರ್ಯದಲ್ಲಿ ಎರಡು ಪುರಾತನ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್‌ವಿಕ್ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಯೋಜನೆಯ ಸಹ ನಿರ್ದೇಶಕಿ ಡಾ. ನಮಿತಾ ಎಸ್ ಸುಗಂಧಿ ನೇತೃತ್ವದ ತಂಡ ಈ ಉತ್ಖನನ ಕಾರ್ಯ ನಡೆಸುತ್ತಿದೆ. ಕಳೆದ ವಾರ ಮಣ್ಣಿನೊಳಗೆ ಮಾನವ ಎಲುಬುಗಳು ಕಂಡುಬಂದಿದ್ದು, ನಂತರ ಶೋಧ ಕಾರ್ಯ ಮುಂದುವರೆಸಲಾಗಿತ್ತು. ಇದೀಗ ಎರಡು ಸಂಪೂರ್ಣ ಅಸ್ಥಿಪಂಜರಗಳು ಪತ್ತೆಯಾಗಿವೆ. ಪ್ರತಿ ಅಸ್ಥಿಪಂಜರವು ಸುಮಾರು […]

ಬೆಳಗಾವಿಯಲ್ಲಿ ಸೌಹಾರ್ದಯುತ ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ನೆರಳಾದ ಮುಸ್ಲಿಂ ದಂಪತಿ

ಹುಕ್ಕೇರಿ (ಬೆಳಗಾವಿ): ತಾಲ್ಲೂಕಿನ ಬಸ್ತವಾಡ ಗ್ರಾಮದ ಮುಸ್ಲಿಂ ದಂಪತಿಯು ಹಿಂದೂ ಧರ್ಮದ ಇಬ್ಬರು ಅನಾಥ ಮಕ್ಕಳನ್ನು ಸಾಕಿ ಬೆಳೆಸಿ, ಶಿಕ್ಷಣ ಕೊಡಿಸಿ, ಈಗ ಒಬ್ಬರ ಮದುವೆಯನ್ನೂ ಮಾಡಿದ್ದಾರೆ. ಗ್ರಾಮದ ಕಾಡಸಿದ್ದೇಶ್ವರ ಸಭಾಭವನದಲ್ಲಿ ಭಾನುವಾರ ಹಾಕಿದ್ದ ಮದುವೆ ಮಂಟಪದಲ್ಲಿ ವಧು–ವರರಷ್ಟೇ ಹಿಂದೂಗಳು. ಮದುವೆ ಜವಾಬ್ದಾರಿ, ಖರ್ಚು– ವೆಚ್ಚ, ಓಡಾಟ ಎಲ್ಲವೂ ಮುಸ್ಲಿಮರದ್ದು. ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಹಾಗೂ ನೂರಜಾನ್ ದಂಪತಿಯೇ ಭಾವೈಕ್ಯ ಮೆರೆದವರು. ದಂಪತಿಯ ನಿರ್ಧಾರಕ್ಕೆ ಅವರ ಇಡೀ ಕುಟುಂಬದವರು ಬೆಂಬಲವಾಗಿ ನಿಂತರು. ಇಡೀ ಬದುಕು […]