ಬಾಲಕಿ ಗರ್ಭಪಾತಕ್ಕೆ ಒಪ್ಪಿಗೆ ನೀಡಿದ ಕೋರ್ಟ್; ಗರ್ಭ ಧರಿಸಿರುವ ಸ್ಥಿತಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ತೀರ್ಪು.!

ನವದೆಹಲಿ: ‘ಯಾವುದೇ ಮಹಿಳೆ, ಅದರಲ್ಲೂ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಲ್ಲಿ, ಗರ್ಭ ಧರಿಸಿರುವ ಸ್ಥಿತಿಯನ್ನು ಮುಂದುವರಿಸುವಂತೆ ನ್ಯಾಯಾಲಯ ಆಕೆಗೆ ಬಲವಂತ ಮಾಡಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. 30 ವಾರಗಳ ಗರ್ಭಿಣಿಯಾಗಿರುವ 17 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸುವಂತೆ ಮುಂಬೈನ ಜೆ.ಜೆ.ಆಸ್ಪತ್ರೆಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ನೆರೆಮನೆ ಬಾಲಕನೊಂದಿಗೆ ಸಂಬಂಧ ಹೊಂದಿದ್ದ ಬಾಲಕಿಯು ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಉಜ್ಜಲ್‌ ಭುಯಾನ್ ಅವರು ಇದ್ದ ನ್ಯಾಯಪೀಠ ನಡೆಸಿತು. […]

ಡಿಜಿಟೆಲ್ ವಂಚನೆಯಾದ್ರೆ ರೂ.25 ಸಾವಿರ ಪರಿಹಾರ ನೀಡಲಾಗುವುದು: ರಿಸರ್ವ್ ಬ್ಯಾಂಕ್

ಮುಂಬೈ: ಡಿಜಿಟಲ್‌ ವಂಚನೆಗೆ ಒಳಗಾದ ಗ್ರಾಹಕರಿಗೆ ಒಂದು ಬಾರಿ ಪರಿಹಾರವಾಗಿ ₹25 ಸಾವಿರ ಪಾವತಿಸುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.‘ಒಟಿಪಿ’ ಹಂಚಿಕೊಂಡು ವಂಚನೆಗೆ ಒಳಗಾದ ಗ್ರಾಹಕರಿಗೂ ಪರಿಹಾರ ಲಭಿಸಲಿದೆ. ಆದರೆ, ಒಬ್ಬ ಗ್ರಾಹಕ ಜೀವಿತಾವಧಿ ಯಲ್ಲಿ ಒಂದು ಬಾರಿ ಮಾತ್ರ (ಒಂದು ವಂಚನೆ ವಹಿವಾಟಿಗೆ) ಪರಿಹಾರ ಪಡೆಯಲು ಅರ್ಹ ಎಂದಿರುವ ಆರ್‌ಬಿಐ, ಶೀಘ್ರದಲ್ಲೇ, ಪರಿಹಾರ ನೀತಿಯ ಕರಡನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟ ಮಾಡಲಾಗುವುದು ಎಂದಿದೆ. ಆರ್‌ಬಿಐ ನಿರ್ವಹಿಸುತ್ತಿರುವ ಸುಮಾರು ₹85 ಸಾವಿರ ಕೋಟಿ ಮೊತ್ತದ ಠೇವಣಿದಾರರ […]

ಫೆ.9ರಂದು ಕಾರ್ಕಳ ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್‌ನಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ

ಕಾರ್ಕಳ:ಕಾರ್ಕಳದ ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ವತಿಯಿಂದ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗೆ ಇಂಗ್ಲಿಷ್ ಮತ್ತು ಕನ್ನಡ ಟೈಪಿಂಗ್ ಕಡ್ಡಾಯವಾಗಿದೆ. ಸಂದರ್ಶನವು ಫೆ.9ರಂದು ಬೆಳಿಗ್ಗೆ 10.00 ಗಂಟೆಗೆ, ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜುದಲ್ಲಿ ನಡೆಯಲಿದೆ. ಯಾವುದೇ ಪದವಿ ಅಥವಾ ಸಂಬಂಧಿತ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸದವರೂ ಸಹ ಇಂಟರ್ವ್ಯೂಗೆ ಹಾಜರಾಗಬಹುದು. ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಕಡ್ಡಾಯವಾಗಿ ತರಬೇಕು.ಆಕರ್ಷಕ ವೇತನದೊಂದಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುತ್ತದೆ. […]

ದಿಶಾ ಡಿ.ಎನ್.ರಿಗೆ ಪಿಎಚ್‌ಡಿ ಪದವಿ

ಉಡುಪಿ: ನಿಟ್ಟೆಯ ಎನ್‌ಎಂಎಎಂ ಅಡ್ಯಂತಾಯ ಪರಿಗಣಿತ ವಿಶ್ವವಿದ್ಯಾನಿಲಯದ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿಶಾ ಡಿ.ಎನ್. ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ. ಇವರು ಪ್ರಿಡಿಕ್ಟಿವ್ ಅನಾಲಿಸಿಸ್ ಆಫ್ ಇನ್ಹೆರಿಟೆಡ್ ಡಿಸೀಸಸ್ ಯೂಸಿಂಗ್ ಮೆಷಿನ್ ಲರ್ನಿಂಗ್ ಟೆಕ್ನಿಕ್ಸ್ ಎಂಬ ವಿಷಯದಲ್ಲಿ ಪ್ರಸ್ತುತ ಪಡಿಸಿರುವ ಮಹಾಪ್ರಬಂಧವನ್ನು ಬೆಂಗಳೂರು ಎಂ.ಎಸ್.ರಾಮಯ್ಯ ತಾಂತ್ರಿಕ (ಸ್ವಾಯತ್ತ) ಮಹಾ ವಿದ್ಯಾಲಯದ ಡಾ.ಸೀಮಾ ಎಸ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ. ಫೆ.2ರಂದು ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ […]

ಉಡುಪಿ:ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ಬಿಡುಗಡೆ

ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮವು ಗೃಹಲಕ್ಷಿö್ಮ ಡಿಜಿಟಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, https://gruhalakshmidigital.org ವೆಬ್ ಸೈಟ್ ನಲ್ಲಿ ಮಹಿಳಾ ಉದ್ದಿಮೆದಾರರು ಉಚಿತವಾಗಿ ತಾವು ತಯಾರಿ/ವ್ಯಾಪಾರ ಮಾಡುವ ಉದ್ಯಮದ ಉತ್ಪನ್ನಗಳ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದ್ದು ಮಹಿಳಾ ಉದ್ದಿಮೆದಾರರು ತಮ್ಮ ವೈಯಕ್ತಿಕ ವಿವರದೊಂದಿಗೆ ಉತ್ಪನ್ನಗಳ ಫೋಟೋಗಳನ್ನು ಸಲ್ಲಿಸಿ ತಮ್ಮ ವಹಿವಾಟುಗಳನ್ನು ಹೆಚ್ಚಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಭಿವೃದ್ದಿ ನಿರೀಕ್ಷಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದಿ ನಿಗಮದ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, […]