ಮಣಿಪಾಲ: ರೋಡ್ ರೋಲರ್ ಬಳಸಿ ಮೊಡಿಫೈ ಸೈಲೆನ್ಸರ್ ಧ್ವಂಸ!

ಉಡುಪಿ: ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಹೊರಡಿಸುತ್ತಾ ಶಬ್ದ ಮಾಲಿನ್ಯ ಉಂಟು ಮಾಡುವ ದ್ವಿಚಕ್ರ ಸವಾರರ ವಿರುದ್ಧ ಮಣಿಪಾಲ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅತಿಯಾದ ಶಬ್ದ ಉಂಟು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 120 ದ್ವಿಚಕ್ರ ವಾಹನಗಳ ಮೊಡಿಫೈ ಸೈಲೆನ್ಸರ್ ಗಳನ್ನು ಕಿತ್ತು, ಅದರ ಮೇಲೆ ರೋಡ್ ರೋಲರ್ ಚಲಾಯಿಸಿ ಧ್ವಂಸ ಮಾಡಲಾಯಿತು.ಕಳೆದ 6 ತಿಂಗಳಿನಿಂದ ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯ ಆಯಾ ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ […]
ನಿಟ್ಟೆಯಲ್ಲಿ ಉದ್ಘಾಟನೆಗೊಂಡ ಐಸಿಇಟಿಇ -2026 ಮಲ್ಟಿಕಾನ್ಫರೆನ್ಸ್

ಕಾರ್ಕಳ: ‘ಭಾರತವು ಸಂಶೋಧನಾ ಕ್ಷೇತ್ರದಲ್ಲಿ ಲಭ್ಯವಿರುವ ಅನೇಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ. ದೇಶದ ಸಂಶೋಧನಾ ವಲಯವು ಕೇವಲ ಕಲಿಕೆಗಷ್ಟೇ ಸೀಮಿತವಾಗದೇ, ಜ್ಞಾನ ಸೃಜನಶೀಲತೆಯತ್ತ ಮುನ್ನಡೆಯಬೇಕು’ ಎಂದು ‘ಸಿಎಸ್ಐಆರ್ – ರಾಷ್ಟ್ರೀಯ ಓಶನೋಗ್ರಾಫಿ ಸಂಸ್ಥೆ’ (ಎನ್‌ಐಒ), ಗೋವಾದ ನಿರ್ದೇಶಕ ಡಾ. ಸುನಿಲ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು. ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಫೆ.5 ರಿಂದ 7 ರವರೆಗೆ ಆಯೋಜಿಸಿದ ಮೂರು ದಿನಗಳ ಮಲ್ಟಿಕಾನ್ಫರೆನ್ಸ್ ‘ಐಸಿಇಟಿಇ 2026’ ನ್ನು ಫೆಬ್ರವರಿ 5 ರಂದು ಉದ್ಘಾಟಿಸಿ […]
ವೆಂಕಟೇಶ ನಾಯಕ್ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಅರ್ಥಶಾಸ್ತ್ರ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ವೆಂಕಟೇಶ ನಾಯಕ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ಪ್ರದಾನ ಮಾಡಿದೆ. ವೆಂಕಟೇಶ ನಾಯಕ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ – ಒಂದು ಪ್ರಕರಣ ಅಧ್ಯಯನ” ಎಂಬ ವಿಷಯದ ಮೇಲೆ ತಮ್ಮ ಸಂಶೋಧನಾ ಪ್ರೌಢ ಪ್ರಬಂಧವನ್ನು ಸಲ್ಲಿಸಿದ್ದರು. ಈ ಅಧ್ಯಯನವು ವಿಶೇಷವಾಗಿ ಅತೀ ಅಸುರಕ್ಷಿತ ಜನಾಂಗ (PVTG) ಆಗಿರುವ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ ಕಾರ್ಯಕ್ರಮಗಳ ವ್ಯಾಪ್ತಿ, ಸವಾಲುಗಳು ಹಾಗೂ […]
ರೀಲ್ಸ್ ಚಿತ್ರೀಕರಣ ವೇಳೆ ದುರ್ಘಟನೆ: ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಮಹಿಳೆ ಮೃತ್ಯು.!

ಲಖನೌ: ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು, ವಿಡಿಯೊ ಚಿತ್ರೀಕರಿಸಲು ಪ್ರಯತ್ನಿಸುವಾಗ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. 27 ವರ್ಷದ ಮೋಹಿನಿ ಮೃತ ದುರ್ದೈವಿ. ಆಕೆ ತನ್ನ ಮನೆಯೊಳಗೆ ರೀಲ್ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರ ಪ್ರಕಾರ, ಮೋಹಿನಿ ನೇಣು ಬಿಗಿಯುವ ದೃಶ್ಯವನ್ನು ಸೃಷ್ಟಿಸುತ್ತಿದ್ದಳು. ಅವಳು ಕುತ್ತಿಗೆಗೆ ನೇಣು ಬಿಗಿದುಕೊಂಡು ಸ್ಟೂಲ್ ಮೇಲೆ ನಿಂತು ತನ್ನ ಮೊಬೈಲ್ ಫೋನ್‌ನಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಳು. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ದುರಂತ ತಿರುವು […]
ಉಡುಪಿ:ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನು ನೆನಪು ಮಾತ್ರ : ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನು ನೆನಪು ಮಾತ್ರ.ಬಸ್ರೂರು ಅಂದ ತಕ್ಷಣವೇ ನೆನಪಾಗುವುದು ಅಪ್ಪಣ್ಣ ಹೆಗ್ಡೆಯವರ ಹೆಸರು.ಅಪ್ಪಣ್ಣ ಹೆಗ್ಡೆವರ ಕಾರ್ಯ ಚಿಂತನೆಗಳು ಬಹು ಕ್ಷೇತ್ರ ಸ್ಪರ್ಶಿಯವಾದದ್ದು.ಶಿಕ್ಷಣ ಧಾಮಿ೯ಕತೆ ಸಾಮಾಜಿಕ ಕಾಳಜಿ ಮಾನವೀಯತೆಯ ಸಂಬಂಧ ರಾಜಕೀಯ ಮುತ್ಸದಿ ತನದ ವ್ಯಕ್ತಿತ್ವ.ಇವೆಲ್ಲ ಅವರ ಆಮೇೂಘವಾದ ವ್ಯಕ್ತಿತ್ವದ ಗುಣಗಳೇ ಹೆಗ್ಡೆ ಅವರ ಸಾಧನೆಯ ಪುಟಗಳನ್ನು ಉತ್ತುಂಗಕ್ಕೆ ಏರಿಸಿದೆ ಅಂದರೆ ತಪ್ಪಾಗಲಾರದು. ಅಪ್ಪಣ್ಣ ಹೆಗ್ಡೆ ಅವರ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಂಡಾಗ ಅಪ್ಪಣ್ಣ ಹೆಗ್ಡೆ ಅವರಿಗೂ ಮಣಿಪಾಲದ ಬ್ರಹ್ಮ ದಿ.ಮಾಧವ ಪೈಗಳಿಗೂ ಉಡುಪಿ ಎಂಜಿಎಂ.ಕಾಲೇಜಿಗೂ ಒಂದು […]