ಮಂಗಳೂರು: ಫೆ.7 ಮತ್ತು 8 ರಂದು ಉಚಿತ ಶ್ರವಣ ತಪಾಸಣಾ ಶಿಬಿರ

ಮಂಗಳೂರು: ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಕಾರದೊಂದಿಗೆ 7 ಮತ್ತು 8 ಫೆಬ್ರವರಿ 2026 ರಂದು ಉಚಿತ ಶ್ರವಣ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ಶಿಬಿರ ನಡೆಯಲಿದೆ ಎಂದು ಸಂಚಾಲಕ ಲವ ಬಂಗೇರಾ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಕಿವಿಯ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ […]
ಉಡುಪಿ:ಎಸಿ ಟೆಕ್ನಿಷಿಯನ್‌ಗಳಿಗೆ ಉದ್ಯೋಗಾವಕಾಶ

ಉಡುಪಿಯ ಶಿವಗಿರಿ ಕೂಲರ್ಸ್ ಸಂಸ್ಥೆಯಲ್ಲಿ ಎಸಿ ಟೆಕ್ನಿಷಿಯನ್ (A/C Technician) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಫ್ರೆಶರ್ಸ್ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. 10,000 ರಿಂದ 25,000 ವರೆಗೆ ವೇತನ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 99642 42188📞 98448 96933
ಉಡುಪಿ:ಬೀಡಿನಗುಡ್ಡೆ ಮೈದಾನದ ಹತ್ತಿರದ ಪ್ರದೇಶ(ಬ್ಲಾಕ್ ಸ್ಟಾಟ್) ದಲ್ಲಿ ಸುಂದರ ಗಾರ್ಡನ್ ನಿರ್ಮಾಣ

ಉಡುಪಿ: ಉಡುಪಿ ನಗರವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆ ಎಸ್.ಬಿ.ಎಂ 2.0 ರ ಐಇಸಿ ಘಟಕದ ಇಂಟರ್ ಪರ್ಸನಲ್ ಕಮ್ಯೂನಿಕೇಶನ್ ಸ್ಕಿಲ್ ಉಪಘಟಕದಡಿ ನೇಮಕಗೊಂಡ 24 ಮಂದಿ ಕಮ್ಯೂನಿಟಿ ಮೊಬಿಲೈಸರ್‌ಗಳು ಪೌರಾಯುಕ್ತರ ಮಾರ್ಗದರ್ಶನದಲ್ಲಿ ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷರು ಮತ್ತು ಸೂಪರ್ ವೈಸರ್ ಗಳ ಸಹಯೋಗದೊಂದಿಗೆ, ಉಡುಪಿ ನಗರವನ್ನು ಸ್ವಚ್ಛವಾಗಿರಿಸುವ ಕಾಯಕದಲ್ಲಿ ನಿರಂತರ ತೊಡಗಿದ್ದಾರೆ. ಮುಂದುವರಿದ ಭಾಗವಾಗಿ ಸಿಟಿ ವಿಭಾಗದ ಕಮ್ಯೂನಿಟಿ ಮೊಬಿಲೈಸರ್ ಗಳು ಬೀಡಿನಗುಡ್ಡೆ ಮೈದಾನದ ಹತ್ತಿರದ ಪ್ರದೇಶ(ಬ್ಲಾಕ್ ಸ್ಟಾಟ್)ದಲ್ಲಿ ಸುಂದರ ಗಾರ್ಡನ್ ನಿರ್ಮಿಸಿ ಮತ್ತೆ […]
ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ

ಉಡುಪಿ: ಉಡುಪಿ ತಾಲೂಕು ಪಂಚಾಯತ್‌ನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು ಫೆಬ್ರವರಿ 6 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ತಾಲೂಕು ಪಂಚಾಯತ್‌ನಲ್ಲಿ, ತಾಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ:ನಾಳೆ (ಫೆ.5)ಮಲ್ಪೆ ಬಂದರಿನಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಉಡುಪಿ: ಮೀನುಗಾರಿಕೆ ಇಲಾಖೆ ಉಡುಪಿ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ, ಕರಾವಳಿ ಕಾವಲು ಪೊಲೀಸ್, ಮಲ್ಪೆ ಮೀನುಗಾರರ ಸಂಘ (ರಿ), ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಕನ್ನಿ ಪಾರ್ಟಿ ಮೀನುಗಾರರ ಸಂಘ ಮಲ್ಪೆ, ಸೀ ಎಂಸಿ2 ಮತ್ತು ಕೆನರಾ ಬ್ಯಾಂಕ್ ಹಾಗೂ ಮಲ್ಪೆ ಬಂದರಿನ ಎಲ್ಲಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವು ಫೆಬ್ರವರಿ 5 ರಂದು ಬೆಳಗ್ಗೆ 9.30 ಕ್ಕೆ ಮಲ್ಪೆ ಕರಾವಳಿ […]