ಉಡುಪಿ: ಆತ್ರಾಡಿಯಲ್ಲಿ ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿ: ಲೈನ್‌ಮೆನ್ ಮೃತ್ಯು

ಹಿರಿಯಡ್ಕ: ಸ್ಕೂಟರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಲೈನ್‌ಮೆನ್ ಮೃತಪಟ್ಟ ಘಟನೆ ಆತ್ರಾಡಿ ಪರೀಕ ಬೊಬ್ಬು ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಮೃತರನ್ನು ಅಥಣಿ ಮೂಲದ ಮಣಿಪಾಲದಲ್ಲಿ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಾಸ್ ಟೋಗು ರಾಠೋಡ್ (28) ಎಂದು ಗುರುತಿಸ ಲಾಗಿದೆ. ಇವರು ಡಿ.26ರಂದು ರಾತ್ರಿ ಬೈಕಿನಲ್ಲಿ ಬುಕ್ಕಿಗಡ್ಡೆಯಿಂದ ಮಣಿಪಾಲಕ್ಕೆ ಕರ್ತವ್ಯಕ್ಕೆ ತೆರಳುತ್ತಿದ್ದು, ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸ್ಕೂಟರ್ ಸಮೇತ […]
ಫೆ.7 ಮತ್ತು 8ರಂದು ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳದ ಸುವರ್ಣ ಮಹೋತ್ಸವ ಸಂಭ್ರಮ

ಮಂಗಳೂರು: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ಫೆ.7 ಮತ್ತು 8ರಂದು ನಡೆಯಲಿದ್ದು, ಇದರ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಐಕಳ ಕಂಬಳದಲ್ಲಿ ಜೂಜು ನಿಯಂತ್ರಣ ಹಾಗೂ ಸಮಯಪಾಲನೆಗೆ ಆದ್ಯತೆ ನೀಡಲಾಗುವುದು ಎಂದು ಕಂಬಳ ಅಸೋಸಿಯೇಶನ್ ಮತ್ತು ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಬಳದಲ್ಲಿ ಜೂಜು ಸಕ್ರಿಯವಾಗಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿದೆ. ಐಕಳ ಕಂಬಳದಲ್ಲಿ ಅದನ್ನು ಸಂಪೂರ್ಣ […]
ಉಡುಪಿ: ಯುವತಿಯರು/ಯುವಕರಿಗೆ ಉದ್ಯೋಗಾವಕಾಶ.

ಉಡುಪಿ: ಉಡುಪಿ ಕಿನ್ನಿ ಮುಲ್ಕಿಯಲ್ಲಿರುವ ಪ್ರತಿಷ್ಠಿತ ಪೃಥ್ವಿ ಏಜೆನ್ಸ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಮಳಿಗೆಗೆ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಯುವತಿಯರು/ ಯುವಕರು ಬೇಕಾಗಿದ್ದಾರೆ. ಆಕರ್ಷಕ ವೇತನ ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಕಳಿಸಬಹುದು.ಮೊ: 9845243328,[email protected]
ಕಾರ್ಕಳ:ನಿಟ್ಟೆಯಲ್ಲಿ ಫೆಬ್ರವರಿ 5ರಂದು ಐಸಿಇಟಿಇ–2026 ಎಂಬ ಬಹುಸಮ್ಮೇಳನ ಉದ್ಘಾಟನೆ

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್–ಕ್ಯಾಂಪಸ್ ಕೇಂದ್ರದ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ‘ಐಸಿಇಟಿಇ–2026 ಬಹುಸಮ್ಮೇಳನ’ವನ್ನು ಫೆಬ್ರವರಿ 5 ರಿಂದ 7 ರವರೆಗೆ ನಿಟ್ಟೆ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಈ ಬಹುಸಮ್ಮೇಳನದ ಉದ್ಘಾಟಕರಾಗಿ ‘ಸಿಎಸ್ಐಆರ್ – ರಾಷ್ಟ್ರೀಯ ಓಶನೋಗ್ರಾಫಿ ಸಂಸ್ಥೆ’ (ಎನ್‌ಐಒ), ಗೋವಾದ ನಿರ್ದೇಶಕ ಡಾ. ಸುನಿಲ್ ಕುಮಾರ್ ಸಿಂಗ್ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ವಹಿಸಲಿದ್ದಾರೆ. ಈ […]
ಪ್ರಯಾಣಿಕರಿಗೆ ಗುಡ್ ನ್ಯೂಸ್; ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ರೈಲು.!

ಉಡುಪಿ: ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 06507 / 06508 ಯಶವಂತಪುರ ಮತ್ತು ಮಡಗಾಂವ್ ಜಂಕ್ಷನ್ ನಡುವೆ ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06507 ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಫೆ. 13ರಂದು ಮಧ್ಯಾಹ್ನ 12.30ಕ್ಕೆ ಯಶವಂತಪುರದಿಂದ ಹೊರಟು, ಫೆ. 14ರಂದು ಬೆಳಗ್ಗೆ 6.45ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 06508 ಯಶವಂತಪುರ […]