ಅಬುಧಾಬಿಯಲ್ಲಿ 45 ಕೋಟಿ ರೂ. ಲಾಟರಿ ಗೆದ್ದ ಉಡುಪಿ ಮೂಲದ ಯುವಕ!

ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಉಡುಪಿಯ ಉದ್ಯಾವರದ ವ್ಯಕ್ತಿಯೊಬ್ಬರು 20 ಮಿಲಿಯನ್ ದಿರ್ಹಮ್ (ಸುಮಾರು 45 ಕೋಟಿ ರೂಪಾಯಿಗೂ ಅಧಿಕ) ಮೊತ್ತದ ಬೃಹತ್ ಬಹುಮಾನವನ್ನು ಗೆದ್ದಿರುವುದಾಗಿ ವರದಿಯಾಗಿದೆ.ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಅನಿವಾಸಿ ಭಾರತೀಯ ಶಂತನು ಶೆಟ್ಟಿಗಾರ್ ಈ ಲಾಟರಿ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಇವರು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ‘ಸರಣಿ 283’ರ ಈ ಬೃಹತ್ ಮೊತ್ತ ಒಲಿದಿದೆ. ಇದು ಯುಎಇಯ ದೀರ್ಘಕಾಲದ ರಾಫೆಲ್ ಡ್ರಾಗಳಲ್ಲಿ […]
ಉಡುಪಿ: ಯುವತಿ ನಾಪತ್ತೆ

ಉಡುಪಿ ಫೆಬ್ರವರಿ 04: ಉಡುಪಿ ತಾಲೂಕು ಬಡಾನಿಡಿಯೂರು ಗ್ರಾಮ ಕದಿಕೆಯಲ್ಲಿರುವ ಅಣ್ಣನ ಮನೆಗೆ ಬಂದಿದ್ದ ಸಂಗೀತಾ (24) ಎಂಬ ಯುವತಿಯು ಫೆಬ್ರವರಿ 2 ರಿಂದ ನಾಪತ್ತೆಯಾಗಿರುತ್ತಾರೆ.4 ಅಡಿ 5 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂಖ್ಯೆ: 0820-2537999, ಮಲ್ಪೆ ಪಿ.ಎಸ್.ಐ ಮೊ.ನಂ: 9480805447, ಮಲ್ಪೆ ವೃತ್ತನಿರೀಕ್ಷಕರು ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಛೇರಿ […]
ವಂದೇ ಭಾರತ್ ರೈಲು ವಿಸ್ತರಣೆಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ

ಉಡುಪಿ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಂದೇ ಭಾರತ್ ರೈಲನ್ನು ಬೆಂಗಳೂರಿನಿಂದ ಮಂಗಳೂರು, ಉಡುಪಿ, ಉತ್ತರ ಕನ್ನಡದವರೆಗೆ ವಿಸ್ತರಿಸಬೇಕಾದ ಅಗತ್ಯವನ್ನು ವಿವರಿಸಿದರು. ಪ್ರತಿ ದಿನ ಉತ್ತರ ಕನ್ನಡ, ಕುಂದಾಪುರ, ಉಡುಪಿ, ಮಂಗಳೂರಿನಿಂದ 600 ಕ್ಕೂ ಹೆಚ್ಚು ಬಸ್‌ಗಳು ಮತ್ತು ಇತರ ಖಾಸಗಿ ವಾಹನಗಳು ಬೆಂಗಳೂರು ತಲುಪುತ್ತಿದ್ದು, ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲು ಕರಾವಳಿಗೆ ವಂದೇ ಭಾರತ್ ರೈಲು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. […]
ಫೆಬ್ರವರಿ 8ಕ್ಕೆ ‘ಮಣಿಪಾಲ ಮ್ಯಾರಥಾನ್’ 8ನೇ ಆವೃತ್ತಿ: 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆ

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ವತಿಯಿಂದ ಆಯೋಜಿಸಿರುವ 8ನೇ ಆವೃತ್ತಿಯ ‘ಮಣಿಪಾಲಮ್ಯಾರಥಾನ್’, ಫೆಬ್ರವರಿ 08, 2026ರ ಭಾನುವಾರದಂದು ನಡೆಯಲಿದ್ದು, ಬೆಳಿಗ್ಗೆ 5:00 ಗಂಟೆಗೆ ಮಣಿಪಾಲದ ಕೆ.ಎಂ.ಸಿ ಗ್ರೀನ್ಸ್ ಮೈದಾನದಲ್ಲಿ ಈ ಬೃಹತ್ ಓಟದ ಸ್ಪರ್ಧೆಗೆ ಚಾಲನೆ ಸಿಗಲಿದೆ. ವಿದ್ಯಾರ್ಥಿ ಆಯೋಜಿತ ದೇಶದ ಅತಿದೊಡ್ಡ ಫಿಟ್ನೆಸ್ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮ್ಯಾರಥಾನ್‌ನಲ್ಲಿ ಈ ಬಾರಿ 20,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಇವರಲ್ಲಿ 100ಕ್ಕೂ […]
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಟ್ರಾನ್ಸ್‌ಕ್ಯಾಥೆಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್ ಚಿಕಿತ್ಸೆ ಯಶಸ್ವಿ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ದಕ್ಷಿಣ ಕರ್ನಾಟಕದ ಮೊದಲ ಟ್ರಾನ್ಸ್‌ಕ್ಯಾಥೆಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್ (TMVR) ಅನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಹೃದಯ ಆರೈಕೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ, ಇದು ಕನಿಷ್ಠ ಆಕ್ರಮಣಕಾರಿ ಕಾರ್ಯವಿಧಾನವಾಗಿದೆ, ಇದರಿಂದಾಗಿ ಸಂಕೀರ್ಣ ಮಿಟ್ರಲ್ ವಾಲ್ವ್ ಕಾಯಿಲೆ ಇರುವ ಹೆಚ್ಚಿನ ಅಪಾಯದ ಹೃದಯ ರೋಗಿಗಳಿಗೆ ಹೊಸ ಭರವಸೆಯ ಕಿರಣವನ್ನು ನೀಡುತ್ತವೆ. ಮಹಾರಾಷ್ಟ್ರದ 72 ವರ್ಷದ ಪುರುಷ ರೋಗಿಯ ಮೇಲೆ ಅತ್ಯಾಧುನಿಕ “ವಾಲ್ವ್-ಇನ್-ವಾಲ್ವ್” TMVR ಕಾರ್ಯವಿಧಾನವನ್ನು ನಡೆಸಲಾಯಿತು. ಡಾ. ಟಾಮ್ ದೇವಾಸಿಯಾ, ಡಾ. ಮೋನಿಕಾ […]