ಬೆಂಗಳೂರು ಆಫೀಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರಲ್ಲಿರುವ ವೆಂಕಟೇಶ್ ಪ್ರಭು ಅಂಡ್ ಅಸೋಸಿಯೇಟ್ಸ್ (Chartered Accountants) ಸಂಸ್ಥೆಯಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಉದ್ಯೋಗಾವಕಾಶಗಳು ಲಭ್ಯವಿವೆ. ಹುದ್ದೆಗಳು: 🔹ಆಡಿಟ್ ಅಸಿಸ್ಟೆಂಟ್ – 1 ಸ್ಥಾನ🔹ಅಕೌಂಟ್ಸ್ ಅಸಿಸ್ಟೆಂಟ್ – 1 ಸ್ಥಾನ🔹ಆಡಿಟ್ ಮ್ಯಾನೇಜರ್ – 1 ಸ್ಥಾನ ಅರ್ಹತೆ:▪ಆಡಿಟ್ / ಅಕೌಂಟ್ಸ್ ಅಸಿಸ್ಟೆಂಟ್: B.Com ಹಾಗೂ 1–2 ವರ್ಷದ ಅನುಭವ ಇರಬೇಕು. ▪ಆಡಿಟ್ ಮ್ಯಾನೇಜರ್: Articleship ಪೂರ್ಣಗೊಳಿಸಿರಬೇಕು. ಅಥವಾ B.Com ಜೊತೆಗೆ 3–4 ವರ್ಷದ ಅನುಭವವಿರಬೇಕು. 📍 ಕಚೇರಿ ವಿಳಾಸ:ವೆಂಕಟೇಶ್ ಪ್ರಭು ಅಂಡ್ ಅಸೋಸಿಯೇಟ್ಸ್,ಚಾರ್ಟರ್ಡ್ ಅಕೌಂಟೆಂಟ್ಸ್,ನಂ.146, 6ನೇ ಕ್ರಾಸ್, […]
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ‘ಮೇಕ್ ಇನ್ ಇಂಡಿಯಾ’ಗೆ ಬಲ; ಕೇಂದ್ರ ಸಚಿವ ಪೀಯೂಷ್ ಗೋಯಲ್

ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಿಂದ ರೈತರು, ಎಂಎಸ್‌ಎಂಇಗಳು, ಉದ್ಯಮಿಗಳು ಮತ್ತು ಕೌಶಲ್ಯಯುಕ್ತ ಕಾರ್ಮಿಕರಿಗೆ ವಿಫುಲ ಅವಕಾಶಗಳು ಲಭ್ಯವಾಗಲಿದ್ದು ‘ಮೇಕ್ ಇನ್ ಇಂಡಿಯಾ’ಗೆ ಬಲ ದೊರೆಯಲಿದೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಮಂಗಳವಾರ ಹೇಳಿದರು. ಅಮೆರಿಕ ಸುಂಕ ಇಳಿಕೆ ಬಗ್ಗೆ ಸಚಿವ ಪೀಯೂಷ್ ಗೋಯಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಒಪ್ಪಂದವು ರೈತರು, ಎಂಎಸ್‌ಎಂಇಗಳು, ಉದ್ಯಮಿಗಳು ಮತ್ತು ಕೌಶಲ್ಯಯುಕ್ತ ಕಾರ್ಮಿಕರಿಗೆ ವಿಫುಲ ಅವಕಾಶಗಳು ಲಭ್ಯವಾಗಲಿವೆ. ವಿಶ್ವಕ್ಕಾಗಿ ಭಾರತದಲ್ಲಿ ತಯಾರಿಕೆ, ವಿಶ್ವಕ್ಕಾಗಿ ಭಾರತದಲ್ಲಿ ವಿನ್ಯಾಸ ಮತ್ತು […]
ಮನಸ್ಸಿಗೆ ಹೊಸ ರೂಪ! “Redesign Your Mind”: 3 ಗಂಟೆಗಳ ವಿಶೇಷ ಕಾರ್ಯಾಗಾರ

ಉಡುಪಿ:ಮನಸ್ಸಿನ ಒತ್ತಡ, ಆತಂಕ, ಭಯದಿಂದ ಮುಕ್ತಿಯಾಗಲು ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು Tanuja’s Mind Therapy ವತಿಯಿಂದ ವಿಶೇಷ 3 ಗಂಟೆಗಳ ವರ್ಕ್‌ಶಾಪ್ ಆಯೋಜಿಸಲಾಗಿದೆ. ಪರ್ಫಾರ್ಮೆನ್ಸ್ ಕೋಚ್, ಮೈಂಡ್ ಟ್ರೈನರ್ ಹಾಗೂ ಥೆರಪಿಸ್ಟ್ ತನುಜಾ ಮಾಬೆನ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಟ್ರೆಸ್ ಮ್ಯಾನೇಜ್‌ಮೆಂಟ್, ಆ್ಯಂಗ್ಸೈಟಿ ,ಕಂಟ್ರೋಲ್ ಹಾಗೂ ಪಾಸಿಟಿವ್ ಮೈಂಡ್ ಸೆಟ್ ಕಲಿಸಲಾಗುತ್ತದೆ. ಫೆಬ್ರವರಿ 08 ರಂದು ಸಮಯ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಟೀ ಟ್ರೀ ಸೂಟ್ಸ್, ಮಣಿಪಾಲ ಇಲ್ಲಿ ನಡೆಯಲಿದೆ. […]
ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮುಷ್ಠಿ ಕಾಣಿಕೆ ಸಮರ್ಪಣೆ

ಉಡುಪಿ: ಹಿರಿಯಡಕದಲ್ಲಿರುವ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಾಲಯದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಮುಷ್ಠಿ ಕಾಣಿಕೆಯು ನೆರವೇರಿತು. ಇದರ ಅಂಗವಾಗಿ ಪುತ್ತಿಗೆ ಮಠದ ಉಭಯ ಶ್ರೀಪಾದರನ್ನು ಭವ್ಯ ಮೆರವಣಿಗೆಯ ಮೂಲಕ ಪುತ್ತಿಗೆ ಮೂಲ ಮಠದಿಂದ ದೇವಾಲಯಕ್ಕೆ ಕರೆತಂದು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನಂತರ ಸಾಮೂಹಿಕ ಪ್ರಾರ್ಥನೆ, ಗಣಹೋಮವನ್ನು ಮಾಡಲಾಯಿತು. ನಂತರ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಸುಶೀಂದ್ರತೀರ್ಥ ಶ್ರೀಪಾದರು ಮುಷ್ಠಿ ಕಾಣಿಕೆಯನ್ನು ಸಮರ್ಪಿಸುವುದರ ಮೂಲಕ ಮುಷ್ಠಿ ಕಾಣಿಕೆ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ನಂತರ ಅಧಿಕ […]
ಹಿರಿಯಡಕ: ಸ್ಕೂಟಿಗೆ ಡಿಕ್ಕಿಯಾದ ಇನ್ನೋವಾ ಕಾರು: ಪವಾಡಸದೃಶ ರೀತಿಯಲ್ಲಿ ಬದುಕುಳಿದ ಇಬ್ಬರು ಸವಾರರು

ಉಡುಪಿ: ಅತೀ ವೇಗದಿಂದ ಬಂದ ಇನ್ನೋವಾ ಕಾರು ಚಾಲಕನೋರ್ವ ಹಿಂದಿನಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಹಿರಿಯಡಕ ಹಳೆ ಪೋಲಿಸ್ ಸ್ಟೇಷನ್ ಬಳಿ ಸಂಭವಿಸಿದೆ. ಇನ್ನೋವಾ ಕಾರು ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಸ್ಕೂಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪಲ್ಟಿಯಾಗಿ ಬಿದ್ದಿದ್ದಾನೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.